ವಾದ ವಿವಾದ : ಒಬ್ಬರಿ ಗೊಬ್ಬರು ಚೂರಿ ಇರಿತ

0
41

ಹುಬ್ಬಳ್ಳಿ, 3: ನಗರದಲ್ಲಿ ವಾಹನ ವ್ಯಾಪರಕ್ಕೆ ಸಂಬಂದಿಸಿದಂತೆ ಇಬ್ಬರೂ ಪರಸ್ಪರ ಚೂರಿ ಇರಿದುಕೊಂಡು ಘಟನೆ ಸೋಮವಾÀರ ತಡರಾತ್ರಿ ವಿದ್ಯಾನಗರದ ಅಭಿಮಾನ್ ಬಾರ್ ಆ್ಯಂಡ್ ರೆಸ್ಟೋರೆಂಟ್ ಬಳಿ ಜರುಗಿದೆ.
ನವನಗರದ ಮಹಾಂತೇಶ ಸೊಲ್ಲಾಪುರ (41) ಹಳೇಹುಬ್ಬಳ್ಳಿ ಆನಂದ ನಗರ ನಿವಾಸಿ ಬಸೀರ ಅಹ್ಮದ ಮುಲ್ಲಾ (35) ಎನ್ನುವವರ ಇಬ್ಬರ ನಡುವೆ ವಾಹನ ಖರೀದಿ ಬಗ್ಗೆ ಜಗಳವಾಗಿತ್ತು. ಇದರ ಬಗ್ಗೆ ಸೋಮವಾರ ರಾತ್ರಿ ಮಾತನಾಡುವ ಬಗ್ಗೆ ಕೂಡಿದ ಇವರು ಮಧ್ಯ ವಾದ ವಿವಾದ ನಡೆದು ಒಬ್ಬರಿ ಗೊಬ್ಬರು ಚೂರಿ ಹಾಕಿಕೊಂಡಿದ್ದಾರೆ. ತಕ್ಷಣವೆ ಇಬ್ಬರನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಸೋಮವಾರ ರಾತ್ರಿಯೇ ಬಸೀರ ಅಹ್ಮದನನ್ನು ಬಂಧಿಸಲಾಗಿದೆ, ಮಹಾಂತೇಶನನ್ನು ವಶಕ್ಕೆ ಪಡೆದಿದ್ದಾರೆ. ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

loading...

LEAVE A REPLY

Please enter your comment!
Please enter your name here