ಅಂಗವೈಕಲ್ಯತೆ ಶಾಪವಲ್ಲ, ಆತ್ಮಸ್ಥೈರ್ಯದಿಂದ ಜೀವಿಸಬೇಕು : ಸಿವಿಲ್ ನ್ಯಾಯಾಧೀಶ ಮಹೇಶ

0
91

courtಕುಷ್ಟಗಿ,03: ಹುಟ್ಟಿನಿಂದ ಅಂಗವೈಕಲ್ಯತೆ ಹೊಂದಿದ ಪ್ರತಿಯೊಬ್ಬರು ಅದನ್ನು ಶಾಪವೆಂದು ಪರಿಗಣಿಸದೇ ಸಮಾಜದಲ್ಲಿ ಬದುಕಿ ಸಾಧನೆ ಮೆರೆದವರ ಆದರ್ಶಗಳನ್ನು ಸವಾಲಾಗಿಸಿಕೊಂಡು ಆತ್ಮಸ್ಥೈರ್ಯದಿಂದ ಜೀವಿಸಿದಾಗ ಮಾತ್ರ ಅದ್ಭುತ ವ್ಯಕ್ತಿಯಾಗಲು ಸಾಧ್ಯವಾಗುತ್ತದೆ ಎಂದು ಕುಷ್ಟಗಿ ಪ್ರಧಾನ ಸಿವಿಲ್ ನ್ಯಾಯಾಧೀಶ ಎಸ್. ಮಹೇಶ ಹೇಳಿದರು.
ಪಟ್ಟಣದ ಗಜೇಂದ್ರಗಡ ರಸ್ತೆಯಲ್ಲಿರುವ ಡಿ. ದೇವರಾಜ ಅರಸು ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ತಾಲೂಕಾ ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ ಕುಷ್ಟಗಿ ಇವರುಗಳ ಸಂಯುಕ್ತ ಆಶ್ರಯದಲ್ಲಿ ಅಂಗವಿಕಲರ ದಿನಾಚರಣೆ ನಿಮಿತ್ಯ ಹಮ್ಮಿಕೊಳ್ಳಲಾಗಿದ್ದ ಕಾನೂನು ಅರಿವು-ನೆರವು ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ಅಂಗವಿಲಕತೆ ಹೊಂದಿದವರು ಯಾವುದೇ ಕಾರಣಕ್ಕೂ ನಾನು ಕಡಿಮೆ ಎಂದು ಭಾವಿಸದೇ ಎಲ್ಲರಂತೆ ನಾನು ಕೂಡಾ ಎಂದು ಭಾವಿಸಬೇಕು. ಪ್ರತಿಯೊಬ್ಬರೂ ಶಿಕ್ಷಣವಂತರಾಗಿ ಕಾನೂನಿನ ಅರಿವು ಪಡೆದು ಸರಕಾರದಿಂದ ಸಿಗುವ ಸೌಲಭ್ಯಗಳನ್ನು ಪಡೆದುಕೊಂಡು ಸಮಾಜದಲ್ಲಿನ ಅಸಮಾನತೆಯನ್ನು ಹೋಗಲಾಡಿಸಲು ಮೆಟ್ಟಿಲುಗಳಾಗಬೇಕು. ಪ್ರತಿಯೊಬ್ಬರೂ ಸಾಧನೆ ಮಾಡಿದ ಮಹಾನ್ ವ್ಯಕ್ತಿಗಳ ಸ್ಪೂರ್ತಿ ಪಡೆದುಕೊಂಡು ಉದ್ಯೋಗ ಸೃಷ್ಠಿಸಿಕೊಂಡು ಮಾದರಿಯಾಗಬೇಕು. ಈ ನಿಟ್ಟಿನಲ್ಲಿ ಕಾನೂನಿನ ಅರಿವು ಪ್ರತಿಯೊಬ್ಬರಿಗೂ ಬಹಳ ಮುಖ್ಯವಾಗಿರುತ್ತದೆ. ಅದೇ ರೀತಿ ಸಮಾಜದಲ್ಲಿ ಬೇರೆಯವರು ಸಹ ಅಂಗವಿಕಲರ ಬಗ್ಗೆ ಕೀಳಾಗಿ ಕಾಣದೇ ನಮ್ಮಂತೆ ಅವರು ಎಂದು ತಿಳಿದು ಅವರಿಗೆ ದೈರ್ಯ ತುಂಬಬೇಕು ಎಂದರು.
ನಂತರ ವಕೀಲರಾದ ರಮಾದೇವಿ ಜಿ. ದೇಸಾಯಿ ಕಾನೂನು ಸೇವೆಗಳ ಪ್ರಾಧಿಕಾರ ಕಾಯ್ದೆ ಕುರಿತು ಮಾತನಾಡಿ ಪ್ರತಿಯೊಬ್ಬರೂ ಕಾನೂನು ಪ್ರಾಧಿಕಾರದ ಮೂಲಕ ನ್ಯಾಯವನ್ನು ಪಡೆಯಬಹುದಾಗಿದ್ದು ಯಾವುದೇ ರೀತಿಯ ಅನ್ಯಾಯವಾದರೂ ಪ್ರಾಧಿಕಾರದ ಮೂಲಕ ಬಗೆಹರಿಸಿಕೊಳ್ಳಬಹುದಾಗಿದೆ ಎಂದರು.
ಬಾಕ್ಸ್ ಐಟಂ:
ಹುಟ್ಟಿನಿಂದ ಅಂಗವಿಕಲತೆ ಹೊಂದಿದವರು ನಿಜವಾದ ಅಂಗವಿಕಲರಲ್ಲ, ತಮ್ಮ ತಂದೆ-ತಾಯಿಗಳನ್ನು ನೋಡಿಕೊಳ್ಳದವರು, ಅಹಂಕಾರದಿಂದ ನಾನು ಎಂದು ಮೆರೆದಾಡುವವರು, ಸರಕಾರಿ ನೌಕರಿ ಪಡೆದು ಬಡವರ ಹಣ ಲೂಟಿ ಮಾಡುವ ಭ್ರಷ್ಟಾಚಾರಿಗಳು ಇಂಥವರು ನಿಜವಾದ ಅಂಗವಿಲಕರು.

ಈ ಸಂದರ್ಭದಲ್ಲಿ ತಾಲೂಕಾ ಹಿಂದುಳಿದ ವರ್ಗಗಳ ವಿಸ್ತಿರ್ಣಾಧಿಕಾರಿ ಎಫ್.ಎಫ್.ರೇಷ್ಮೆ, ತಾ.ನ್ಯಾ.ಸಂಘದ ಅಧ್ಯಕ್ಷ ಬಿ.ಎ. ಇದ್ಲಾಪೂರ, ಸರಕಾರಿಸಹಾಯಕ ಅಭಿಯೋಜಕ ಎ.ಐ. ಹಾದಿಮನಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಇದೇ ವೇಳೆ ನ್ಯಾಯಾಧೀಶರಾದ ಎಸ್. ಮಹೇಶ ಇವರು ಹಿರಿಯ ಶ್ರೇಣಿಯ ನ್ಯಾಯಾಧೀಶರಾಗಿ ಬಡ್ತಿ ಹೊಂದಿ ರಾಣೆ ಬೆನ್ನೂರಿಗೆ ವರ್ಗಾವಣೆಗೊಂಡಿದ್ದಾಗಿ ತಿಳಿಸಿದರು. ಬಡ್ತಿ ಹೊಂದಿದ್ದಕ್ಕಾಗಿ ತಾಲೂಕ ನ್ಯಾಯವಾದಿಗಳ ಸಂಘದವರು ಅಭಿನಂದಿಸಿದರು.

loading...

LEAVE A REPLY

Please enter your comment!
Please enter your name here