ಮೆಣಸಗೇರಿ: ಅಕ್ರಮ ಮದ್ಯ ಮಾರಾಟ ನಿಲ್ಲಿಸಲು ಮನವಿ

0
77

001ಕುಷ್ಟಗಿ,3: ತಾಲೂಕಿನ ಮೆಣಸಗೇರಿ ತಾಂಡಾದಲ್ಲಿ ಅಕ್ರಮ ಮದ್ಯ ಮಾರಾಟ ಹೆಚ್ಚಾಗಿದ್ದು ದಿನಂಪ್ರತಿ ಎಲ್ಲೆಂದರಲ್ಲಿ ಸಿಗುವ ಸಾರಾಯಿ ಕುಡಿದು ರಸ್ತೆಯಗಲುದ್ದಕ್ಕೂ ಅವಾಚ್ಯ ಶಬ್ದಗಳನ್ನು ಆಡುತ್ತಾ ಬರುವ ಕುಡುಕರ ಹಾವಳಿ ಹೆಚ್ಚಾಗಿದ್ದು ಕೂಡಲೇ ತೀವ್ರಗತಿಯಲ್ಲಿ ಕ್ರಮ ಕೈಗೊಳ್ಳುವಂತೆ ಮೆಣಸಗೇರಿ ತಾಂಡಾದ ಗ್ರಾಮಸ್ಥರು ಹಾಗೂ ಮಹಿಳೆಯರು ಇಲ್ಲಿನ ಅಬಕಾರಿ ರಕ್ಷಕ ಸಂಗಪ್ಪ ನಾಗಲೀಕರ ಇವರಿಗೆ ಮನವಿ ಸಲ್ಲಿಸಿದರು.
ತಾಂಡಾದ ಸಾರ್ವಜನಿಕರು, ಪಾಮಕಿ ಮಾತಾ ಸ್ವಸಹಾಯ ಸಂಘ, ಧರ್ಮಿಣಿ ಸ್ವಸಹಾಯ ಸಂಘ, ದುರ್ಗಾದೇವಿ ಸಂಘ, ಸತಿಕಾ ದೇವಿ ಸಂಘ, ಸತಿ ಸಾಮಕ್ಯ ಸಂಘ ಸೇರಿದಂತೆ ಹಲವಾರು ಸಂಘಗಳ ಮಹಿಳೆಯರು ಸೇರಿ ಇಂಥಹ ಅಕ್ರಮ ಮದ್ಯ ಮಾರಾಟಗಾರರನ್ನು ಪತ್ತೆ ಹಚ್ಚಿ ಕೂಡಲೇ ಕ್ರಮ ಕೈಗೋಳ್ಳಬೇಕು. ತಾಲೂಕಿನಾಧ್ಯಂತ ಇದೇ ರೀತಿ ಅಕ್ರಮ ಮದ್ಯ ಮಾರಾಟ ಹೆಚ್ಚಾಗಿದ್ದು ಇಲಾಖೆ ಮೌನ ವಹಿಸುತ್ತಿದೆ. ಬೇಕಾದರೆ ನಮ್ಮ ಗ್ರಾಮಕ್ಕೆ ಬಂದರೆ ನಾವೇ ಕಳ್ಳ ಮಾರಾಟಗಾರರನ್ನು ಹಿಡಿಯಲು ಸಹಾಯ ಮಾಡುತ್ತೇವೆ. ಕುಡುಕರು ಕುಡಿಯುದಷ್ಟೆ ಅಲ್ಲದೇ ಮಹಿಳೆಯರಿಗೆ ತಮ್ಮ ಹೆಂಡತಿ ಮಕ್ಕಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸುವುದು, ಹೊಡಿ-ಬಡಿ ಮಾಡುವದು, ಬೈಯುವದು ಮಾಡುತ್ತಿದ್ದಾರೆ. ಇಂಥಹ ದುಷ್ಕøತ್ಯ ತಪ್ಪಿಸಲು ತಾವು ಕೂಡಲೇ ಕ್ರಮ ಕೈಗೊಳ್ಳಲೇಬೇಕು ಎಂದು ತಾಕೀತು ಮಾಡಿದರು.
ಮನವಿಗೆ ಸ್ಪಂದಿಸಿದ ಅಬಕಾರಿ ರಕ್ಷಕ ಸಂಗಪ್ಪ ನಾಗಲೀಕರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮೇಲಾಧಿಕಾರಿಗಳಿಗೆ ತಿಳಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಘಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಅಮರೇಶ ರಾಠೋಡ ಗ್ರಾ.ಪಂ. ಸದಸ್ಯ, ಕಾಳಪ್ಪ ಚವ್ವಾಣ, ಸೀತಾ ವಾಚಾವಾಣಿ, ಚಂದ್ರಕಲಾ ರಾಠೋಡ, ತಿಪ್ಪಮ್ಮ, ಸೋಮಲವ್ವ, ರಾಮವ್ವ, ರತ್ನಮ್ಮ, ಲಲಿತಮ್ಮ, ಅನುಸವ್ವ , ಮುತ್ತಮ್ಮ ಸೇರಿದಂತೆ ಹಲವಾರು ಮಹಿಳೆಯರು ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here