ಸದೃಡ ಮನಸ್ಸಿನ ಓದಿಗೆ ಕ್ರೀಡೆ ಪೂರಕ: ಹಿರೇಮಠ

0
38

H4ALN1ಅಳ್ನಾವರ ,4: ಮಾನವನ ಸರ್ವಾಂಗೀಣ ವಿಕಾಸಕ್ಕೆ ಕ್ರೀಡೆ ಸಹಕಾರಿ, ಸದೃಡ ಮನಸ್ಸಿನ ಓದಿಗೆ ಆಟೋಟಗಳು ಪೂರಕವಾಗಿವೆ ಎಂದು ಮುಖ್ಯಾಧ್ಯಾಪಕ ಡಿ.ಬಿ. ಹಿರೇಮಠ ಹೇಳಿದರು.
ಇಲ್ಲಿನ ಅನ್ನಪೂರ್ಣ ಚಂದ್ರಶೇಖರಯ್ಯ ಹಿರೇಮಠ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿ, ಪಾಠದ ಜೊತೆಗೆ ಆಟದಲ್ಲೂ ಮಕ್ಕಳು ತಮ್ಮ ಪ್ರತಿಭೆ ತೋರಿ ವ್ಯಕ್ತಿತ್ವ ವಿಕಸನಗೊಳಿಸಿಕೊಳ್ಳಬೇಕು ಎಂದರು.

ಕ್ರೀಡಾ ಧ್ವಜದಡಿ ಕ್ರೀಡಾಪಟುಗಳು ಪ್ರತಿಜ್ಷಾ ವಿಧಿ ಸ್ವೀಕರಿಸಿ ಆಟದ ನಿಯಮಗಳನ್ನು ಪಾಲಿಸಲು ಬದ್ದವಿರುವದಾಗಿ ಘೋಷಿಸಿದರು. ವ್ಯಯಕ್ತಿಕ , ಗುಂಪು ಆಟಗಳು ನಡೆದವು, ಕ್ರೀಡಾ ಜ್ಯೋತಿ ಬೆಳಗಲಾಯಿತು. ಶೋಭಾ ನಾಯಕ, ಸತೀಶ ವೀಣಾ, ಶಾಂತಿ ಹಟ್ಟಿಹೋಳಿಕರ, ಸುಧಾ ಜೋಶಿ ಮತ್ತಿತರು ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here