ಸಾರ್ವಜನಿಕ ಜಾಗ ವೈಯಕ್ತಿಕ ಸ್ವಾರ್ಥಕ್ಕಾಗಿ ಬಳಕೆ

0
48

 

ನಿಪ್ಪಾಣಿ 04: ಸ್ಥಳೀಯ ಶ್ರೀಪೇವಾಡಿ ರಸ್ತೆ ಔದ್ಯೋಗಿಕ ವಸಾಹತುವಿನ ಮೀಸಲಿಟ್ಟ ಸಾರ್ವಜನಿಕ ಜಾಗವನ್ನು ವೈಯಕ್ತಿಕ ಸ್ವಾರ್ಥಕ್ಕಾಗಿ ಬಳಕೆ ಮಾಡಿಕೊಂಡ ಹಿನ್ನಲೆಯಲ್ಲಿ ನಿಪ್ಪಾಣಿ ಕೊ.ಆಪ್ ಇಂಡಸ್ಟ್ರೀಯಲ್ ಇಸ್ಟೇಟ್‍ನ ಚೇರಮನ್ ಹಾಗೂ ಎಲ್ಲ ನಿರ್ದೇಶಕರ ವಿರುದ್ಧ ಕಳೆದ ಗುರುವಾರ ಸ್ಥಳೀಯ ಬಸವೇಶ್ವರ ಚೌಕ ಪೊಲೀಸ ಠಾಣೆಯಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ.ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ರಾಜ್ಯ ಔದ್ಯೋಗಿಕ ವಸಾಹತುವಿನ ಕಾರ್ಯನಿರ್ವಾಹಕ ಅಧಿಕಾರಿ ಎಲ್.ಕೆ.ಪ್ರಕಾಶಕುಮಾರ್ ದೂರು ದಾಖಲಿಸಿದ್ದಾರೆ.

ಸ್ಥಳೀಯ ಜತ್ರಾಟ್ ಗ್ರಾ.ಪಂ.ವ್ಯಾಪ್ತಿ ಔದ್ಯೋಗಿಕ ವಸಾಹತುವಿನ ಸರ್ವೆ ನಂ.260 ರ ಪ್ಲಾಟ್ ನಂ. 64ಅನ್ನು ಸಾರ್ವಜನಿಕ ಉಪಯೋಗಕ್ಕಾಗಿ ಮೀಸಲಿಡಲಾಗಿತ್ತು.ಅದರ ಲೇಔಟ್ ಬದಲಿಸಿ ಆ ಜಾಗದ ಉದ್ದೇಶವನ್ನೇ ತಿರುಚಲಾಗಿತ್ತು.ಅದೂ ಅಲ್ಲದೇ ಜಾಗವನ್ನು ಇನ್ನೊಬ್ಬರ ಹೆಸರಿಗೆ ಮಾಡಲಾಗಿತ್ತು.ಇದು ಕರ್ನಾಟಕ ಏರಿಯಾ ಇಂಡಸ್ಟ್ರೀಯಲ್ ಡೆವ್ಲಪಮೆಂಟ್ ಬೋರ್ಡ ನಿಯಮ ಸಂಹಿತೆಯನ್ನು ಉಲ್ಲಂಘಿಸಿದಂತಾಗಿತ್ತು.ಸ್ಥಳೀಯ ನಾಗರೀಕರು ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿದ್ದರು.ಇದನ್ನು ಡಿಸಿ ಅವರು ಗಂಭೀರವಾಗಿ ಪರಿಗಣಿಸಿದ್ದರು. ನಿಪ್ಪಾಣಿ ಕೊ.ಆಪ್ ಇಂಡಸ್ಟ್ರೀಯಲ್ ಇಸ್ಟೇಟ್‍ನ ಚೇರಮನ್ ಶಂತನು ಮಾನವಿ,ನಿರ್ದೇಶಕರಾದ ಗಣಪತಿ ಗಾಡಿವಡ್ಡರ,ರಮೇಶ ಭಿವಶೆ,ರಾಜಾರಮ ಕುಲಕರ್ಣಿ,ಸುರೇಶ ತಿಬಿಲೆ,ಪ್ರಲ್ಹಾದ ದಾಭೋಳೆ,ಗೀತನ ಶಹಾ,ಸಂದೀಪ ಶೇವಾಳೆ,ಇಲಿಯಾಸ ಪಟವೇಗಾರ,ಛಬುತಾಯಿ ವರೂಟೆ,ಸಾರೀಕಾ ಅಮರ ಸಂಕಪಾಳ ಇವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಾಗಿದೆ.ಪೊಲೀಸರು ಹೆಚ್ಚಿನ ತಪಾಸಣೆ ಮುಂದುವರೆಸಿದ್ದಾರೆ.

loading...

LEAVE A REPLY

Please enter your comment!
Please enter your name here