ರೋಟರಿಯಿಂದ ಶೌಚಾಲಯ ನಿರ್ಮಾಣ

0
69

04Ankola1ಅಂಕೋಲಾ,4 : ಶೌಚಾಲಯವಿಲ್ಲದವರಿಗೆ ರೋಟರಿ ಸಂಸ್ಥೆಯ ವತಿಯಿಂದ ಮ್ಯಾಚಿಂಗ್ ಗ್ರಾಂಟ್ ಅಡಿಯಲ್ಲಿ ಅಂಕೋಲಾ ರೂರಲ್ ರೋಟರಿ ಸಂಸ್ಥೆಯವರು ಹೊಸ್ಕೇರಿಯ ರೈತ ಕುಟುಂಬಕ್ಕೆ ರೋಟರಿಯವರು ಶೌಚಾಲಯ ನಿರ್ಮಿಸಿಕೊಟ್ಟಿದ್ದು, ರೋಟರಿ ಗವರ್ನರ ಶ್ರೀನಿವಾಸ ಮಾಲು ಶೌಚಾಲಯ ಉದ್ಘಾಟನೆ ಮಾಡಿ, ರೂರಲ್ ರೋಟರಿಯ ಸಮಾಜ ಸೇವೆಗೆ ಹರ್ಷ ವ್ಯಕ್ತಪಡಿಸಿದರು.
ರೋಟರಿ ಕ್ಲಬ್ ಅಧ್ಯಕ್ಷ ಕೌಸ್ತುಭ ನಾಯಕ ಅವರು ಮಾತನಾಡಿ ಬಯಲು ಶೌಚಾಲಯ ಮುಕ್ತ ಗ್ರಾಮಗಳ ನ್ನಾಗಿ ಮಾಡುವುದು ರೋಟರಿಯ ಉದ್ದೇಶವೆಂದು ಅಭಿಪ್ರಾಯ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ರೋಟರಿ ಅಧ್ಯಕ್ಷ ಕೌಸ್ತುಭ ನಾಯಕ, ಕಾರ್ಯದರ್ಶಿ ಇಂಜಿನಿಯರ್ ರಾಮು ಅರ್ಗೇ ಕರ, ಖಜಾಂಚಿ ಸಿ. ಎಸ್. ಗೌಡ, ಅನುಪ ನಾಯಕ, ಮಂಜೇಶ್ವರ ನಾಯಕ, ರಾಮದಾಸ ನಾಯಕ, ಡಾ. ಸಂಜು ನಾಯಕ, ಅಸಿಸ್ಟಂಟ್ ಗವರ್ನರ ಸತೀಷ ಭಟ್, ಉಮೇಶ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here