ಸಮಾಜ ಮೆಚ್ಚುವ ರೀತಿಯಲ್ಲಿ ಬಾಳಿ : ದೊಡ್ಡಗೌಡ ಪಾಟೀಲ

0
44


ಕಮತಗಿ 08: ಪರಸ್ಪರ ಹೊಂದಾಣಿಕೆಯಿಂದ ಸಮಾಜ ಮೆಚ್ಚುವ ರೀತಿಯಲ್ಲಿ ಜೀವನ ನಡೆಸಿ ಎಂದು ಹುನಗುಂದ ಕ್ಷೇತ್ರದ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ತಿಳಿಸಿದರು.
ಸಮೀಪದ ತಳ್ಳಿಕೇರಿ ಗ್ರಾಮದಲ್ಲಿ ಮಾರುತೇಶ್ವರ, ಬಸವೇಶ್ವರ ಕಾರ್ತಿಕೋತ್ಸವ ನಿಮಿತ್ತ ಹಮ್ಮಿಕೊಂಡ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಾಮೂಹಿಕ ವಿವಾಹದಲ್ಲಿ ನವ ಜೀನವಕ್ಕೆ ಕಾಲಿಟ್ಟ ವಧುವರರು ಪುಣ್ಯವಂತರು. ಇಂತಹ ಕ್ಷೇತ್ರದಲ್ಲಿ ಮದುವೆಯಾದ ವರ ದಕ್ಷಿಣೆಗೆ ಅಪೇಕ್ಷೆ ಪಡದೆ ಜೀವನ ಸಾಗಿಸಬೇಕು. ಜೀವನದಲ್ಲಿ ಉತ್ತಮ ಗುರಿ, ಸಾಧಿಸುವ ಛಲದೊಂದಿಗೆ ಮುನ್ನಡೆದಾಗ ಮಾತ್ರ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದರು.
ಬಿಜೆಪಿ ತಾಲೂಕು ಅಧ್ಯಕ್ಷ ಶಶಿಕಾಂತ ಪಾಟೀಲ, ಕೆಲೂರ ತಾಪಂ ಸದಸ್ಯ ರಾಜು ನಾಡಗೌಡ ಮಾತನಾಡಿದರು. ಏಳು ಜೋಡಿಗಳು ನವಜೀವನಕ್ಕೆ ಕಾಲಿಟ್ಟರು. ಕೋಲಾರದ ದಿಗಂಬರೇಶ್ವರ ಸಂಸ್ಥಾನಮಠದ ಕಲ್ಲಿನಾಥ ದೇವರು, ಗುಳೇದಗುಡ್ಡ ಮರಡಿ ಮಠದ ಕಾಡಸಿದ್ದೇಶ್ವರ ಸ್ವಾಮಿಜಿ ಆಶೀರ್ವದಿಸಿದರು.
ಅತಿಥಿಗಳಾಗಿ ರಾಜು ದಾನಿ, ಮಹಾಂತಪ್ಪ ತೊಂಡಿಹಾಳ, ಪ್ರಭು ವಸ್ತ್ರದ, ಗಣಪತಿ ಬಸವಾ, ಜಗದೀಶಗೌಡ ಪಾಟೀಲ, ಜಗ್ಗುಗೌಡ ಪಾಟೀಲ, ಬಸಯ್ಯ ಪಾರ್ವತಿಮಠ, ಮಹೇಶ ಪವಾರ, ಗ್ರಾ.ಪಂ.ಸದಸ್ಯೆ ಹುಲಿಗೆವ್ವ ದಿಡ್ಡಿಬಾಗಿಲು, ಹನಮಂತಗೌಡ ಬೇವೂರ, ಪರಸಪ್ಪ ದಿಡ್ಡಿಬಾಗಿಲು, ಸಂಗಯ್ಯ ವಸ್ತ್ರದ, ಶೇಖರಗೌಡ ಗೌಡರ ಸೇರಿದಂತೆ ಇತರರು ಇದ್ದರು.

ಎಲ್ಲರೊಳಗೊಂದಾಗು ಮಂಕುತಿಮ್ಮ

loading...

LEAVE A REPLY

Please enter your comment!
Please enter your name here