ಸಾಮೂಹಿಕ ವಿವಾಹಗಳು ಎಲ್ಲರನ್ನು ಒಗ್ಗೂಡಿಸುವ ಕೊಂಡಿಗಳು

0
40


ಕಮತಗಿ 08: ಸಾಮೂಹಿಕ ವಿವಾಹಗಳು ಎಲ್ಲರನ್ನೂ ಒಗ್ಗೂಡಿಸುವ ಕಾರ್ಯ ಮಾಡುತ್ತವೆ ಎಂದು ಹುನಗುಂದ ಕ್ಷೇತ್ರದ ಶಾಸಕ ಡಾ.ವಿಜಯಾನಂದ ಕಾಶಪ್ಪನವರ ತಿಳಿಸಿದರು.
ಸಮೀಪದ ಬೇವಿಮನಟ್ಟಿ ಗ್ರಾಮದ ಬಸವೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಹಮ್ಮಿಕೊಂಡ ಸಾಮೂಹಿಕ ವಿವಾಹದಲ್ಲಿ ಅವರು ಮಾತನಾಡಿದರು. ಸಾಲದಲ್ಲಿ ಸಂಸಾರ ಕೊಳೆಯಬಾರದೆಂದು ಸಾಮೂಹಿಕ ವಿವಾಹದಲ್ಲಿ ಹೊಸ ಜೀವನಕ್ಕೆ ಕಾಲಿಟ್ಟ ನೂತನ ವಧುವರರು ತಮ್ಮ ತಂದೆ, ತಾಯಿ, ಬಂಧುಗಳ ಜೊತೆಗೆ ಪ್ರೀತಿ, ವಿಶ್ವಾಸ, ಕ್ರಿಯಾಶೀಲತೆ, ನಂಬಿಕೆಯಿಂದ ಕಷ್ಟ ಸುಖದಲ್ಲಿ ಪರಸ್ಪರ ಹೊಂದಾಣಿಕೆಯಿಂದ ಜೀವನ ಸಾಗಿಸಿ ಸಮಾಜದಲ್ಲಿ ಉತ್ತಮ ಜೀವನ ನಡೆಸಿ ಎಂದರು.
ಸಾನಿದ್ಯ ವಹಿಸಿದ್ದ ಅಭಿನವ ಅನ್ನದಾನ ಸ್ವಾಮಿಜಿ, ಒಪ್ಪತ್ತೇಶ್ವರ ಸ್ವಾಮಿಜಿ ಮಾತನಾಡಿದರು. ಅಮೀನಗಡದ ಶಂಕರರಾಜೇಂದ್ರ ಸ್ವಾಮಿಜಿ, ರುದ್ರಮುನಿ ಶಿವಾಚಾರ್ಯ ಸ್ವಾಮಿಜಿ, ನಿಜಲಿಂಗಪ್ಪನವರು ಕಡೆಕೊಪ್ಪ, ಶಿವಬಸಪ್ಪ ಗದ್ದಿ, ನಿಂಗನಗೌಡ, ಗುರುನಗೌಡ, ಗೌಡಪ್ಪನವರ, ಗಿರೀಶಗೌಡ ಪಾಟೀಲ, ನಿಂಗಪ್ಪ ತೋಳಮಟ್ಟಿ ಇತರರು ಇದ್ದರು. ಸಾಮೂಹಿಕ ವಿವಾಹದಲ್ಲಿ 11 ಜೋಡಿಗಳು ನವಜೀವನಕ್ಕೆ ಕಾಲಿಟ್ಟರು.

 

loading...

LEAVE A REPLY

Please enter your comment!
Please enter your name here