ತಾಲೂಕು ಮಟ್ಟದ ಪ್ರಶ್ನೋತ್ತರ ಪರೀಕ್ಷೆಯಲ್ಲಿ 128 ವಿದ್ಯಾರ್ಥಿಗಳು ಪರೀಕ್ಷೆ ಬರೆದರು

0
45

 

ಬಸವನಬಾಗೇವಾಡಿ 08: ಸ್ಥಳೀಯ ಅಕ್ಕನಾಗಮ್ಮ ಸರಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಮಂಗಳವಾರ ಭೀಮಶಿವ ಪ್ರಕಾಶನ ಹಾಗೂ ನಂದಿ ಸಾಹಿತ್ಯ ವೇದಿಕೆ ಹಮ್ಮಿಕೊಂಡ ತಾಲೂಕು ಮಟ್ಟದ ಪ್ರಶ್ನೋತ್ತರ ಪರೀಕ್ಷೆ ಸ್ಪರ್ಧೆಯಲ್ಲಿ ತಾಲೂಕಿನ ಎಸ್.ಎಸ್.ಎಲ್.ಸಿ ಹಾಗೂ ಪ್ರಥಮ ಪಿಯುಸಿ ವಿವಿಧ ಶಾಲೆಗಳ ಒಟ್ಟು 128 ವಿದ್ಯಾರ್ಥಿಗಳು ಹುರುಪಿನಿಂದ ಪರೀಕ್ಷೆ ಬರೆದರು.
ಬಸವಣ್ಣನವರು ಮತ್ತು ಬಸವ ಜನ್ಮಸ್ಮಾರಕ, ಬಸವನಬಾಗೇವಾಡಿ ತಾಲೂಕಿಗೆ ಸಂಬಂಧಿತ ಲೇಖನವುಳ್ಳ “ಹೃದಯ ಸಿಂಚನ” ಗ್ರಂಥವಾಧರಿಸಿ ವಿದ್ಯಾರ್ಥಿಗಳಿಗೆ ನೇರ ಉತ್ತರ ಬರೆಯಲು ಅವಕಾಶ ಮಾಡಿಕೊಡಲಾಗಿತ್ತು. ಮನಗೂಳಿ, ಮುತ್ತಗಿ, ಜಾಯವಾಡಗಿ, ಬಸವನಬಾಗೇವಾಡಿ, ಇವಣಗಿ ಸೇರಿ ತಾಲೂಕಿನ ವಿವಿಧ ಗ್ರಾಮಗಳ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಭಾಗಿಯಾಗಿದ್ದರು. ಇಂದಿನ ಪರೀಕ್ಷೆಯಲ್ಲಿ ನಮಗೆಲ್ಲರಿಗೆ ಬಹುಮಾನ ದೊರಕುತ್ತದೆ ಇಲ್ಲವೋ ಎಂಬುವುದು ಅದು ಬೇರೆ ಮಾತು. ಆದರೆ, ವಿಶೇಷ ಮಾಹಿತಿ ತಿಳಿದುಕೊಳ್ಳಲು ಈ ಪರೀಕ್ಷೆ ನಮಗೆ ದಾರಿ ಮಾಡಿಕೊಟ್ಟಿತು ಎಂದು ವಿವಿಧ ಶಾಲೆಗಳ ವಿದ್ಯಾರ್ಥಿಗಳು ತಮ್ಮ ಅಭಿಪ್ರಾಯಗಳನ್ನು ಹೇಳಿದರು.
ಒಟ್ಟು 53 ಪ್ರಶ್ನೆಗಳಿಗೆ 90 ಅಂಕಗಳ ಉತ್ತರ ಬರೆಯಲು ಅವಕಾಶ ಮಾಡಿಕೊಡಲಾಗಿತ್ತು. ಕೊಠಡಿ ಮೇಲ್ಚಿಚಾರಕಾಗಿ ಭೀಮಶಿವ ಪ್ರಕಾಶನದ ಸಂಚಾಲಕ ಮಹಾಂತೇಶ ಸಂಗಮ, ಬಾಬು ವಾಡೇದ, ಶಿಕ್ಷಕ ಎ.ಐ.ಮಠಪತಿ ಕಾರ್ಯ ನಿರ್ವಹಿಸಿದರು. ಅತೀ ಶೀಘದಲ್ಲಿ ಉತ್ತರ ಪತ್ರಿಕೆ ತಪಾಸಣೆ ಮಾಡಿದ ನಂತರ ವಿವಿಧ ಗಣ್ಯರ ಉಪಸ್ಥಿತಿಯಲ್ಲಿ ಬಹುಮಾನಗಳ ಜೊತೆಗೆ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುತ್ತದೆ ಎಂದು ನಂದಿ ಸಾಹಿತ್ಯ ವೇದಿಕೆ ಅಧ್ಯಕ್ಷ ಮಹಾಂತೇಶ ಸಂಗಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

loading...

LEAVE A REPLY

Please enter your comment!
Please enter your name here