ನಾಳೆ ಪದವಿಪೂರ್ವ ಕಾಲೇಜುಗಳ ಶೈಕ್ಷಣಿಕ ಸಂವಾದ ಕಾರ್ಯಕ್ರಮ

0
25

 

ಇಳಕಲ್ಲ 09: ಬಾಗಲಕೋಟೆಯ ಪದವಿ ಪೂರ್ವ ಶಿಕ್ಷಣ ಇಲಾಖೆ ಇಳಕಲ್ಲದ ವ್ಹಿ,ಸಿ,ಅಕ್ಕಿ ಸ್ಮಾರಕ ಜಿ,ಕೆ,ಮಲಗೊಂಡಾ ವಿಜ್ಞಾನ ಪದವಿ ಪೂರ್ವ ಕಾಲೇಜಿನ ಆಶ್ರಯದಲ್ಲಿ ಹುನಗುಂದ ತಾಲೂಕಾ ಪದವಿಪೂರ್ವ ಕಾಲೇಜುಗಳ ಪ್ರಾಚಾರ್ಯರ ಮತ್ತು ಉಪನ್ಯಾಸಕರ ಶೈಕ್ಷಣಿಕ ಸಂವಾದ ಕಾರ್ಯಕ್ರಮ ಡಿ.11 ಶುಕ್ರವಾರದಂದು ಬೆಳಿಗ್ಗೆ 9 ಗಂಟೆಗೆ ಹಮ್ಮಿಕೊಳ್ಳಲಾಗಿದೆ.
ಡಾ.ಮಹಾಂತಶ್ರೀಗಳ ವಿಜಯಮಹಾಂತಶ್ರೀಗಳ ಸಾನಿಧ್ಯದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವ್ಹಿ,ಸಿ,ಅಕ್ಕಿ ಸ್ಮಾರಕ ಸಂಘದ ಚೇರಮನ್ ಡಾ. ಅರುಣಾ ಅಕ್ಕಿ ವಹಿಸಲಿದ್ದಾರೆ. ಉದ್ಘಾಟನೆಯನ್ನು ಶಾಸಕ ವಿಜಯಾನಂದ ಕಾಶಪ್ಪನವರ ಮಾಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಪದವಿ ಪೂರ್ವ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ಬಿ,ಎಸ್,ಗೌಡರ ಜಿಲ್ಲಾ ಉಪನಿರ್ದೇಶಕ ವಾಯ್,ಎಚ್,ಇಲಾಳ, ಬೆಂಗಳೂರಿನ ಉಪನಿರ್ದೇಶಕ ಪುಟ್ಟಯ್ಯ ಆಗಮಿಸಲಿದ್ದಾರೆ. ಅತಿಥಿ ಉಪನ್ಯಾಸಕರಾಗಿ ರಾಯಚೂರಿನ ಶರಣಕುಮಾರ ಹಿರೇಗೌಡರ, ಮೂಡಬಿದರಿಯ ಅರವಿಂದ ಚೊಕ್ಕಾಡಿ ಪಿ,ಬಸವರಾಜ ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಪ್ರಾಚಾರ್ಯೆ ಆದಿತಿ ಅಕ್ಕಿ ಉಪಸ್ಥಿತರಿರಲಿದ್ದಾರೆ ಎಂದು ಶ್ರೀಶೈಲ್ ಕುಮಶಿ, ಬಸವರಾಜ ವಾಲಿಕಾರ,ಎಮ್,ಎಚ್,ಅರಹುಣಶಿ ತಿಳಿಸಿದ್ದಾರೆ.

loading...

LEAVE A REPLY

Please enter your comment!
Please enter your name here