ಹೊನ್ನಾವರ ಶನಿಶ್ವರ ದೇವಾಲಯದಲ್ಲಿ ಕಾರ್ತಿಕ ದೀಪೋತ್ಸವ

0
101

ಹೊನ್ನಾವರ,10 : ಕರ್ನಾಟಕದ ಕಾಶ್ಮೀರ ಎಂದು ಕರೆಯಲ್ಪಡುವ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕು ತನ್ನ ರಮಣೀಯ ಪ್ರಾಕೃತಿಕ ಸೌಂದರ್ಯದಿಂದ ಪ್ರವಾಸಿಗರನ್ನು ಕೈಬೀಸಿ ಕರೆಯುವ ಊರು. ಪರಮ ಪಾವನೆ ಶರಾವತಿಯು ಸಮುದ್ರವನ್ನು ಸೇರುವ ಸಂಗಮದ ತಟದಲ್ಲಿರುವ ಹೊನ್ನಾವರ ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಶಿವಮೊಗ್ಗ ಜಿಲ್ಲೆಗೆ ಸಂಪರ್ಕ ಸೇತುವೆಯಾದ ಊರು. ಇಲ್ಲಿನ ಇಡಗುಂಜಿ ಮಹಾಗಣಪತಿ ಕ್ಷೇತ್ರವು ಸುಪ್ರಸಿದ್ಧ ಧಾರ್ಮಿಕ ಶ್ರದ್ಧಾ ಕೇಂದ್ರ. ಇಲ್ಲಿನ ಅಪ್ಸರಗೊಂಡ ರುದ್ರರಮಣೀಯ ಪ್ರವಾಸಿತಾಣ.

ಇಂತಹ ಹಿನ್ನಲೆಯ ಹೊನ್ನಾವರ ಧಾರ್ಮಿಕ, ಸಾಂಸ್ಕøತಿಕ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಊರು. ಇಂತಹ ಹಿನ್ನಲೆಯಿರುವ ಹೊನ್ನಾವರದಲ್ಲಿ ಇತ್ತೀಚೆಗಷ್ಟೇ ಸ್ಥಾಪಿತವಾಗಿರುವ ಶನೀಶ್ವರನು ಸಕಲರ ಇಷ್ಟಾರ್ಥಗಳನ್ನು ಈಡೇರಿಸುವ ಮಹಾನುಭಾವ ನೆಲೆಸಿದ್ದಾನೆ. ನಗರದ ಕೇಂದ್ರ ಸ್ಥಾನವಾದ ಬಸ್ ನಿಲ್ದಾಣದ ಸಮೀಪದಲ್ಲಿ ಹೀಗೆ 10 ವರ್ಷಗಳ ಹಿಂದೆ ನಿರ್ಮಾಣವಾದ ಮಂದಿರದಲ್ಲಿ ಶನೀಶ್ವರ ಸ್ವಾಮಿಯ ಪ್ರತಿಷ್ಥಾಪನೆ ಆಗಿರುವುದು ನಿಜವಾದರೂ ಸ್ವಾಮಿ ಇಲ್ಲಿ ನೆಲೆಸಿರುವುದರ ಹಿನ್ನಲೆಯಲ್ಲಿ ಸುಮಾರು 2 ದಶಕಗಳ ಇತಿಹಾಸವಿದೆ.

[highlight]ಹಿನ್ನಲೆ [/highlight]: 1988ರ ದಶಕದ ಆದಿಭಾಗದಲ್ಲಿ ಭಿಕ್ಷುಕನೊಬ್ಬನು ತನ್ನಲ್ಲಿದ್ದ ಶನಿದೇವರ ಪಟವೊಂದನ್ನು ಹೊನ್ನಾವರ ಬಸ್ ನಿಲ್ದಾಣದ ಪಕ್ಕದಲ್ಲಿರುವ ಬೃಹತ್ ಆಲದಮರಕ್ಕೆ ತೂಗಿ ಹಾಕಿಹೋಗಿದ್ದನು. ಬಸ್ ಸ್ಟಾಂಡ್ ಪರಿಸರದ ಕೆಲವು ಟೆಂಪೋ ಚಾಲಕರು-ಮಾಲಕರು ಆಟೋರಿಕ್ಷಾ ಚಾಲಕರು-ಮಾಲಕರು ಹಾಗೂ ಸಾರ್ವಜನಿಕರು ದಿನಾಲೂ ತಮ್ಮ ದಿನದ ವ್ಯವಹಾರದ ಪ್ರಾರಂಭದಲ್ಲಿ ಸಹಜವಾಗಿ ಈ ಪಟಕ್ಕೆ ನಮಸ್ಕರಿಸಿ ಹೋಗುತ್ತಿದ್ದರು. ಆದರಿಂದ ಅವರ ವ್ಯವಹಾರಗಳು ಸುಸೂತ್ರವೂ ಲಾಭದಾಯಕವೂ ಆಗತೊಡಗಿದಾಗ ನಮಸ್ಕರಿಸುವವರ, ಭಕ್ತರ-ಸಂಖ್ಯೆಯು ಹೆಚ್ಚ ತೊಡಗಿತಲ್ಲದೆ; ಆ ಪಟಕ್ಕೆ ಹೂವಿನಹಾರ ಹಾಕುವುದು, ಅಗರಬತ್ತಿ ಹಚ್ಚಿ ಕರ್ಪೂರ ಆರತಿಯಿಂದ ಪೂಜಿಸುವುದು ಪ್ರಾರಂಭವಾಯಿತು.
ಇದರಿಂದ ಕೇವಲ ಭಕ್ತರ ವ್ಯವಹಾರದಲ್ಲಿ ಮಾತ್ರವಲ್ಲ, ಅವರ ಕೌಟುಂಬಿಕ ಜೀವನದಲ್ಲೂ ಕೂಡ ಮಹತ್ತರವಾದ ಗುಣಾತ್ಮಕ ಬೆಳವಣಿಗೆಯಾಗತೊಡಗಿತು. ನಂತರ ಆ ಭಕ್ತರೆಲ್ಲರೂ ಸೇರಿ ಒಂದು ಸಣ್ಣ ಕಾಣಿಕೆ ಡಬ್ಬಿಯನ್ನು ತಂದು ಅಲ್ಲಿಟ್ಟರು. ಪೂಜಿಸುವವರು ಹೆಚ್ಚಾಗಿ ಸ್ಟಾಂಡಿನ ಪಕ್ಕದ ರಿಕ್ಷಾ-ಟೆಂಪೋ ಚಾಲಕ ಮಾಲಕರು ಹಾಗೂ ಸಾರ್ವಜನಿಕರು ಆಗಿದ್ದು ಅವರೆಲ್ಲರೂ ತಮ್ಮ ನಿತ್ಯದ ಲಾಭದ ಕೆಲ ಅಂಶವನ್ನು ನಿಯಮಿತವಾಗಿ ಆ ಡಬ್ಬಿಗೆ ಕಾಣಿಕೆ ಸಮರ್ಪಿಸ ತೊಡಗಿದರು.
ಅದರಲ್ಲಿ ಸಂಗ್ರಹವಾದ ಕಾಣಿಕೆಯಿಂದ ವರ್ಷಕ್ಕೊಮ್ಮೆ ವೈಭವದಿಂದ ಆ ಶನಿದೇವರ ಪಟಕ್ಕೆ ಮಹಾಪೂಜೆಯು ಪ್ರಾರಂಭವಾಯಿತು. ಆದರೆ ಯಾವುದೇ ರಕ್ಷಣೆಯಿಲ್ಲದೇ ಕೇವಲ ಮರಕ್ಕೆ ತೂಗುಹಾಕಿದ ಆದ್ದರಿಂದ ಅದರಲ್ಲಿನ ಹಣ ಮತ್ತು ಕೆಲವೊಮ್ಮೆ ಆ ಡಬ್ಬಿಯೇ ಕಳುವಾಗ ತೊಡಗಿದಾಗ ಭಕ್ತರೆಲ್ಲರಿಗೂ ತಮ್ಮ ಉನ್ನತಿಗೆ ಕಾರಣವಾದ ದೇವರಿಗೆ ಒಂದು ಶಾಶ್ವತವಾದ ಸ್ಥಿರದೇವಾಲಯವೊಂದನ್ನು ಕಟ್ಟಬೇಕೆಂಬ ಇಚ್ಚೆಯು ಪ್ರಬಲವಾಗತೊಡಗಿತು.
1988 ರಿಂದ 2004 ರವರೆಗೆ ಮರಕ್ಕೆ ತೂಗಿಹಾಕ್ಕಿದ್ದ ಪೋಟೋವನ್ನು ಪೂಜಿಸುತ್ತಿದ್ದರು. ನಂರರ 2005 ಕ್ಕೆ ಭಕ್ತರೆಲ್ಲರೂ ಸೇರಿ “ಸಾರ್ವಜನಿಕ ಶ್ರೀ ಶನಿದೇವರ ಭಕ್ತ ಸಮೂಹ” ಎಂಬ ಹೆಸರಿನ ಟ್ರಸ್ಟೊಂದನ್ನು ನಿರ್ಮಿಸಿಕೊಂಡು ದೇವಸ್ಥಾನದ ನಿರ್ಮಾಣದ ದಿಶೆಯಲ್ಲಿ ಉತ್ಸಾಹದಿಂದ ಕಾರ್ಯ ಪ್ರವೃತ್ತರಾದರು.

ಅನೇಕ ವಿಘ್ನಗಳು ಬಂದರೂ ಅವೆಲ್ಲವುಗಳನ್ನು ಧೈರ್ಯದಿಂದ ಎದುರಿಸಿ, ನಗರ ಸಭೆಯಿಂದ ಪ್ರಯತ್ನಪೂರ್ವಕ ಸಣ್ಣ ನಿವೇಶನವನ್ನು ಪಡೆದು ಹೊನ್ನಾವರ ಮತ್ತು ಸುತ್ತಮುತ್ತಲಿನ ಎಲ್ಲ ಭಕ್ತರ ಸಹಾಯ ಸಹಕಾರಗಳಿಂದ 2005ರಲ್ಲಿ ಸುಂದರವಾದ ದೇವಾಲಯವನ್ನು ನಿರ್ಮಿಸಿ, ಆಕರ್ಷಕ ವಿಗ್ರಹವನ್ನು ಪ್ರತಿಷ್ಟಾಪಿಸಲಾಯಿತು.

ಈ ಮಂದಿರವು ಪ್ರಾರಂಭವಾದಾಗಿನಿಂದ ದಿನದಿನವೂ ತನ್ನ ಪ್ರಭಾವವನ್ನು ಹೆಚ್ಚಿಸಿಕೊಳ್ಳುತ್ತ ಸಮಾಜದ ಎಲ್ಲ ವರ್ಗದವರ ಮನೋಕಾಮನೆಗಳನ್ನು ಪೂರ್ತಿಗೊಳಿಸುತ್ತ ದೊಡ್ಡ ಶ್ರದ್ಧಾಕೇಂದ್ರವಾಗಿ ರೂಪುಗೊಂಡವು.

[highlight]ಸೌಲಭ್ಯಗಳು [/highlight]: ಹೊನ್ನಾವರ ನಗರವು ತಾಲೂಕು ಕೇಂದ್ರವಾಗಿದ್ದು, ಎಲ್ಲ ಸೌಲಭ್ಯಗಳನ್ನು ಹೊಂದಿದೆ. ಎರಡು ರಾಷ್ಟ್ರೀಯ ಹೆದ್ದಾರಿಗಳು (ಎನ್.ಎಚ್.17) ಹೊನ್ನಾವರದಿಂದ ಹಾದುಹೋಗುತ್ತವೆ.

ಹುಬ್ಬಳ್ಳಿ ಮತ್ತು ಮಂಗಳೂರು ಪಟ್ಟಣದಿಂದ ಪ್ರತಿ 15 ನಿಮಿಷಗಳಿಗೆ ಹೊನ್ನಾವರಕ್ಕೆ ಬಸ್ ಸೌಲಭ್ಯವಿದೆ. ಬೆಂಗಳೂರಿನಿಂದಲೂ ಸಾಕಷ್ಟು ಪ್ರಮಾಣದ ಸರ್ಕಾರಿ ಮತ್ತು ಖಾಸಗಿ ಬಸ್ಸುಗಳು ಶಯನಯಾನ ಸಹಿತ ಉಪಲಬ್ಧವಿದೆ. ಮುಂಬೈ ಮತ್ತು ಮಂಗಳೂರಿನಿಂದ ಕೊಂಕಣ ರೈಲ್ವೇ ಸೌಲಭ್ಯವಿದೆ. ಗೋವಾ ಅಥವಾ ಮಂಗಳೂರಿನವರೆಗೆ ವಾಯುಯಾನದಲ್ಲೂ ಬರುವ ಅನುಕೂಲತೆ ಇದೆ. ದೇವಸ್ಥಾನದ ಎದುರೇ ಸುಸಜ್ಜಿತ ವಸತಿ ನಿಲಯಗಳಿವೆ. ಎಲ್ಲ ರೀತಿಯ ಉಟೋಪಚಾರ ಗೃಹಗಳು ಸಾಕಷ್ಟು ಸಂಖ್ಯೆಯಲ್ಲಿವೆ.

[highlight] ವರ್ಷದ ವಿಶೇಷ ಪೂಜೆಗಳು [/highlight]: ಯುಗಾದಿ ಹಬ್ಬದ ಪ್ರಯುಕ್ತ, ರಾಮನವಮಿ, ವರ್ಧಂತಿ ಉತ್ಸವ, ಶ್ರೀ ಶ್ರೀ ಶನೈಶ್ವರ ಜಯಂತಿ, ಶ್ರಾವಣ ಶನಿವಾರ, ಗಣಪತಿ ವಿಸರ್ಜನೆ ದಿನದಂದು, ನವರಾತ್ರಿ ವಿಶೇಷ ಪೂಜೆ, ದೀಪಾವಳಿ ಹಬ್ಬದ ವಿಶೇಷ, ಕಾರ್ತಿಕ ಮಾಸದ ದೀಪೋತ್ಸವ, ಸಂಕ್ರಾಂತಿಯಂದು ವಿಶೇಷ ಪೂಜೆಗಳು ನೆರವೇರುತ್ತವೆ.

loading...

LEAVE A REPLY

Please enter your comment!
Please enter your name here