ಪೂರ್ವ ಸಿದ್ಧತಾ ಸಮಾಲೋಚನ ಸಭೆ

0
28

ಹುಬ್ಬಳ್ಳಿ,10: ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‍ನ ಚುನಾವಣೆಯ ನಿಮಿತ್ಯ ಪೂರ್ವ ಸಿದ್ಧತಾ ಸಮಾಲೋಚನ ಸಭೆಯನ್ನು ಬಸವ ಪರಿಸರ ಸಂರಕ್ಷಣಾ ಸಮಿತಿ ಅಧ್ಯಕ್ಷ, ಸಾಹಿತಿ ಪ್ರೊ ಎಸ್.ವಿ.ಪಟ್ಟಣಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಶನಿವಾರ ದಿನಾಂಕ 12-12-2015 ಮಧ್ಯಾಹ್ನ 3 ಗಂಟೆಗೆ ವಿದ್ಯಾನಗರ, ಕನಕದಾಸ ಶಿಕ್ಷಣ ಸಂಸ್ಥೆಯ ಪದವಿ ಮಹಾವಿದ್ಯಾಲಯದ ಸಭಾಭವನದಲ್ಲಿ ಕರೆಯಲಾಗಿದೆ.
ಜಾನಪದ ತಜ್ಞ ಡಾ. ರಾಮು ಮೂಲಗಿ, ಗ್ರಂಥಪಾಲಕ ಡಾ. ಮಹೇಶ ಡಿ. ಹೊರಕೇರಿ,  ಹುಬ್ಬಳ್ಳಿ, ಧಾರವಾಡ, ನವಲಗುಂದ, ಕಲಘಟಗಿ, ಕುಂದಗೋಳ ತಾಲೂಕುಗಳಿಂದ ಈರಪ್ಪ ಎಮ್ಮಿ, ಎ.ಬಿ.ಕೊಪ್ಪದ, ಎಸ್.ಸಿ.ಶಾನವಾಡ, ಜೆ.ಡಿ.ಘೊರ್ಪಡೆ, ಮಲ್ಲಯ್ಯಸ್ವಾಮಿ ತೋಟಗಂಟಿಮಠ, ಒನಕುದರಿ, ಉದಯಚಂದ್ರ ದಿಂಡವಾರ, ಕವಿ ಸಿ.ಎಂ.ಚನ್ನಬಸಪ್ಪ, ಮೃತ್ಯಂಜಯ ಮಟ್ಟಿ, ಪ್ರೊ ಶಿವಯೋಗಪ್ಪ ಎಮ್ಮಿ, ನಿಂಬಣ್ಣ ನಿಂಬಣ್ಣವರ, ಸಂಗಮೇಶ ಐಹೊಳೆ, ಬಸವರಾಜ ಕುರಹಟ್ಟಿ, ಗುರುಸಿದ್ದಪ್ಪ ಬಡಿಗೇರ, ಎಸ್.ಐ.ನೇಕಾರ ಮುಂತಾದವರು ಭಾಗವಹಿಸಲಿದ್ದಾರೆ. ಸಾಹಿತ್ಯ ಪರಿಷತ್‍ನ ಸದಸ್ಯರು, ಸಾಹಿತ್ಯಾಸಕ್ತರು ಭಾಗವಹಿಸಿ ಸಲಹೆ, ಸೂಚನೆ ನೀಡಬೇಕು ಎಂದು ನೃಪತುಂಗ ಸಾಹಿತ್ಯ ವೇದಿಕೆ ಸಂಚಾಲಕ ಚನ್ನಬಸಪ್ಪ ಧಾರವಾಡಶೆಟ್ಟರ ವಿನಂತಿಸಿದ್ದಾರೆ.

loading...

LEAVE A REPLY

Please enter your comment!
Please enter your name here