ರಾಷ್ಟ್ರೀಯ ಕೃಷಿ ವಿಮಾ ಯೋಜನೆ ಅನುಷ್ಠಾನ

0
73

ಕುಂದಗೋಳ,10:  ತಾಲೂಕಿನ ರೈತರಿಗೆ ಹಿಂಗಾರು ಹಾಗೂ ಬೇಸಿಗೆಯ  ಬೆಳೆಯ  ರಾಷ್ಟ್ರೀಯ ಕೃಷಿ ವಿಮಾ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ.

ಹಿಂಗಾರು ಹಂಗಾಮಿಗೆ ಇದೇ ಡಿ.31 ಕೊನೆಯ ದಿನವಾಗಿದ್ದು, ಬೇಸಿಹೆಯ ಹಂಗಾಮಿಗೆ 2016 ರ ಪೆ.29 ಅರ್ಜಿ ಸಲ್ಲಿಸುವ ಕೊನೆಯ ದಿನವಾಗಿರುತ್ತದೆ. ಹೋಬಳಿ ಮಟ್ಟಕ್ಕೆ ಗೋದಿ, ಕುಸುಬೆ,ಹುರಳಿ, ಮುಸುಕಿನ ಜೋಳ, ಸೂರ್ಯಕಾಂತಿ ಬೆಳೆಗಳು ಮಳೆ ಆಸ್ರಿತವಾಗಿವೆ.ಗ್ರಾಮ ಪಂಚಾಯತಿ ಮಟ್ಟದಲ್ಲಿ ಮಳೇ ಆಶ್ರಿತ ಜೋಳ, ಕಡಲೆ ಬೆಳೆಗೆ ಹಾಗೂ ಬೇಸಿಗೆ ಹಂಗಾಮಿಗೆ ನೀರಾವರಿ ಸೇಂಗಾ ಬೆಳೇಗಳು ವಿಮೆ ವ್ಯಾಪ್ತಿಗೊಳಪಟ್ಟಿದೆ.

ರೈತರು ಅರ್ಜಿಯೊಂದಿಗೆ ಭೂಮಿ ಹೊಂದಿರುವುದಕ್ಕೆ ಪಹಣಿ ಪತ್ರಿಕೆ, ಬ್ಯಾಂಕ್ ಪಾಸ್ ಬುಕ್, ಕಂದಾಯ ರಶೀದಿಗಳನ್ನು ನೀಡಬೇಕು. ಪರಿಶಿಷ್ಟ  ಜಾತಿ, ಪರಿಶಿಷ್ಟ ಪಂಗಡದ ರೈತರಿಗೆ ವಿಮಾ ಕಂತಿನಲ್ಲಿ ಶೇ. 90 ಹಾಘೂ ಅತೀ ಸಣ್ಣ ರೈತರಿಗೆ ಶೇ.10 ರಷ್ಟು ವಿಮೆ ಹಣದ ರಿಯಾಯಿತಿ ಇದೆ.

ಕಾರಣ ತಾಲೂಕಿನ ರೈತರು ಕೊನೆಯ ದಿನಾಂಕದೊಳಗಾಗಿ ತಪ್ಪದೇ ತಮಗೆ ಸಂಭಂಧಿಸಿದ ಬ್ಯಾಂಕಿನಲ್ಲಿ ವಿಮೆ ಕಟ್ಟುವಂತೆ ಸಹಾಯಕ ಕೃಷಿ ನಿರ್ದೇಶಕ ಸಿ.ಜಿ.ಮೇತ್ರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

loading...

LEAVE A REPLY

Please enter your comment!
Please enter your name here