ಬಹುಮುಖ ಪ್ರತಿಭೆಯ ಶಾಶ್ವತ: ಹೆಗಡೆ

0
81

ಧಾರವಾಡ,10:  ಶಾಶ್ವತ ಹೆಗಡೆ ಹುಟ್ಟಿದ್ದು ಸಾಗರದಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಶಿಸರ್ಿಯಲ್ಲಿ ಹೈಸ್ಕೂಲು ವಿದ್ಯಾಭ್ಯಾಸವನ್ನು ಕಾನಸೂರಿನಲ್ಲಿ ಹಾಗೂ ಪಿ.ಯು.ಸಿ ವಿದ್ಯಾಭ್ಯಾಸವನ್ನು ಶಿಸರ್ಿಯಲ್ಲಿ ಪೂರೈಸಿದ್ದು ಈಗ ಸದ್ಯ ಧಾರವಾಡದ ಜೆ.ಎಸ್.ಎಸ್ ಕಾಲೇಜಿನಲ್ಲಿ ಬಿ.ಎಸ್.ಸಿ 5ನೇ ಸೆಮಿಸ್ಟರನಲ್ಲಿ ಅಭ್ಯಾಸ ಮಾಡುತ್ತಿದ್ದಾನೆ ಇವನ ತಂದೆಯವರು ವ್ಯವಸಾಯ ಮಾಡಿಕೊಂಡಿದ್ದಾರೆ ಇವರಿಗೆ ಮಗನನ್ನು ಇಂಜನೀಯರ ಮಾಡಬೇಕೆಂಬ ಆಸೆ ಇತ್ತು ಆದರೆ ಶಾಶ್ವತನಿಗೆ ಅದು ಇಷ್ಟವಿರಲಿಲ್ಲ ಈ ವಿಷಯವನ್ನು ಶಾಶ್ವತ ಅವನ ಅತ್ತೆ ಮಾವಂದಿರ ಹತ್ತಿರ ಹೇಳಿದ ಆಗ ಅವರು ನಿನಗೆ ಇಷ್ಟವಿರುವ ವಿಷಯ ನೀನೇ ಆಯ್ಕೆ ಮಾಡಿಕೋ ನಿನ್ನ ತಂದೆಗೆ ನಾವು ತಿಳಿಹೇಳುತ್ತೇವೆ ಎಂದು ಪ್ರೋತ್ಸಾಹ ನೀಡಿದರು ಆ ಒಂದು ಪ್ರೋತ್ಸಾಹವೇ ಶಾಶ್ವತ ಹೆಗಡೆಯ ಸಾಧನೆಗೆ ಮೆಟ್ಟಿಲಾಯಿತು

ಸೆಮಿಸ್ಟರ ಪದ್ದತಿ ಆರಂಭವಾದಾಗಿನಿಂದ ಕಾಲೇಜು ವಿದ್ಯಾಥರ್ಿಗಳು ಸಾಂಸ್ಕ್ರತಿಕ ಚಟುವಟಿಕೆ ಹಾಗೂ ಕ್ರೀಡೆಗಳಲ್ಲಿ ಹೆಚ್ಚಾಗಿ ಭಾಗವಹಿಸದೆ ಕೇವಲ ಅಭ್ಯಾಸದಲ್ಲಿ ಮಾತ್ರ ತೊಡಗಿಕೊಳ್ಳುವಂತಾಗಿದೆ ಆದರೆ ಶಾಶ್ವತ ಹೆಗಡೆ ಮಾತ್ರ್ರ ಅಭ್ಯಾಸದ ಜೊತೆಗೆ ಚಿತ್ರಕಲೆ, ನಾಟಕ , ಯಕ್ಷಗಾನ , ಚಚರ್ಾ ಸ್ಪದರ್ೆ , ಭಾಷಣ ಸ್ಪಧರ್ೆ , ಸಂಗೀತ , ಸೋಪಿನಲ್ಲಿ ಹಾಗೂ ಚಾಕ್ ಪೀಸಿನಲ್ಲಿ ವಿವಿಧ ಕಲಾಕೃತಿಗಳ ನಿಮರ್ಾಣ ಮಾಡುವ ಹವ್ಯಾಸಗಳನ್ನು ಇಟ್ಟುಕೊಂಡಿದ್ದರು.

ಈ ಎಲ್ಲ ಕಲೆಗಳಲ್ಲಿ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಸ್ಪದರ್ಿಸಿ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾನೆ ಇವನು ಚಿತ್ರ ಕಲೆಯಲ್ಲಿ ಅಪಾರವಾದ ಆಸಕ್ತಿಯನ್ನು ಹೊಂದಿದ್ದು ಓದು ಬರಹದ ಜೊತೆಗೆ ತನ್ನದೇ ಆದ ಸ್ವಂತಿಕೆಯಿಂದ ಏನಾದರೂ ಹೊಸದನ್ನು ಸಾಧಿಸಬೇಕೆಂಬ ಆಸೆಯಿಂದ ಪರಿಶ್ರಮಪಟ್ಟು ತಾನೇ ಸ್ವತ: ಚಿತ್ರಗಳನ್ನು ಬಿಡಿಸಿ ಅದರಲ್ಲಿ ಸಾಧನೆ ಮಾಡಿದ ಛಲದಂಕ ಮಲ್ಲ ಶಾಶ್ವತ ಹೆಗಡೆ ಪ್ರಾಥಮಿಕ ಹಾಗೂ ಹೈಸ್ಕೂಲು ವಿದ್ಯಾಭ್ಯಾಸ ಮಾಡುವಾಗ ಪ್ರತಿಭಾ ಕಾರಂಜಿಯಲ್ಲಿ ಬಾಗವಹಿಸಿ ಚಿತ್ರಕಲೆ ಹಾಗೂ ನಾಟಕಗಳಲ್ಲಿ ಹಲವಾರು ಬಹುಮಾನಗಳನ್ನು ಪಡೆದುಕೊಂಡಿದ್ದಾನೆ ಇವನು ಪೆನ್ಸಿಲ್ ಸ್ಕೆಚ್ , ಪೆನ್ ಸ್ಕೆಚ್ , ವಾಟರ್ ಕಲರ, ಎಕ್ರಲಿಕ್ ನಲ್ಲಿ ಚಿತ್ರಗಳನ್ನು ಬಿಡಿಸಿದ್ದಾನೆ ವ್ಯಕ್ತಿ ಚಿತ್ರ ಹಾಗೂ ಪರಿಸರಕ್ಕೆ ಸಂಬಂದಪಟ್ಟಂತೆ ಹೆಚ್ಚಿನ ಚಿತ್ರಗಳನ್ನು ಈತ ರಚಿಸಿದ್ದಾನೆ

ವಾಟರ್ ಕಲರನಲ್ಲಿ ಜಯಂತ ಕಾಯ್ಕಿಣಿ , ಶಂಕರನಾಗ್ , ಸುದೀಪ , ಡಾ|| ಅಬ್ದುಲ್ ಕಲಾಂ ,ಪೂಜ್ಯ ಶ್ರೀ ಡಾ|| ಡಿ. ವೀರೇಂದ್ರ ಹೆಗ್ಗಡೆ , ಗಾಂಧೀಜಿ ಇನ್ನೂ ಮುಂತಾದವರ ಭಾವ ಚಿತ್ರಗಳನ್ನು ಆಕರ್ಷಕವಾಗಿ ಬಿಡಿಸಿದ್ದಾನೆ ಜಯಂತ ಕಾಯ್ಕಿಣಿಯವರ ಭಾವ ಚಿತ್ರವನ್ನು ಬಿಡಿಸಿ ಅವರಿಗೆ ಅದನ್ನು ನೀಡಿದ್ದು ಕಾಯ್ಕಿಣಿಯವರು ಸಂತೋಷಗೊಂಡು ಶಾಶ್ವತನ ಬೆನ್ನು ತಟ್ಟಿ ಮುಂದೆ ನಿನಗೆ ಉತ್ತಮ ಭವಿಷ್ಯವಿದೆ ಎಂದು ಪ್ರೋತ್ಸಾಹಿಸಿದ್ದು ಈತನಿಗೆ ಸ್ಪೂತರ್ಿ ನೀಡಿದೆ ಈತ ಮೋಬೈಲನಲ್ಲಿ ಡಿಜಿಟಲ್ ಪೇಂಟಿಂಗ್ ಕೂಡಾ ಮಾಡುತ್ತಿದ್ದು ಅದರಲ್ಲಿ ಪಕ್ಷಿಗಳು , ತಾಜಮಹಲ್ , ಗೌತಮ ಬುದ್ದ , ಚಿಟ್ಟೆ ಹಡಗು , ಕಣ್ಣು ಇನ್ನೂ ಮುಂತಾದ ಚಿತ್ರಗಳನ್ನು ಅತ್ಯಾಕರ್ಷಕವಾಗಿ ಬಿಡಿಸಿದ್ದಾನೆ ಆನಲೈನ್ ಪೇಂಟಿಂಗ ಸ್ಪದರ್ೆಗಳಲ್ಲಿ ಕೂಡಾ ಈತ ಭಾಗವಹಿಸುತ್ತಿದ್ದು  ಈತನ ಚಿತ್ರಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸೋಪಿನಲ್ಲಿ ಗುಲಾಬಿ  ಹೂವು ,ಸೂರ್ಯ ಕಾಂತಿ , ಹಂಸ ,ಗಣೇಶಮೂತರ್ಿ ಇನ್ನೂ ಮುಂತಾದ ಕಲೆಗಳನ್ನು ಅರಳಿಸಿದ್ದಾನೆ ಚಾಕ್ ಪೀಸಿನಲ್ಲಿ ದೇವಸ್ಥಾನ , ರಾಜಸಿಂಹಾಸನ, ಕಿವಿಯೋಲೆ , ಬಾತುಕೋಳಿ ಇನ್ನೂ ಮುಂತಾದ ಕಲಾಕೃತಿಗಳನ್ನು ಮಾಡಿದ್ದಾನೆ ಸೋಪು ಹಾಗು ಚಾಕ್ ಪೀಸಿನಲ್ಲಿ ಕಲೆ ಅರಳಿಸುವದೆಂದರೆ ಅದೊಂದು  ತಪಸ್ಸು ಇದ್ದ ಹಾಗೆ ಬಹಳ ಕಠಿಣವಾದ ಈ ಕಲೆಯಲ್ಲಿಯೂ ಈತ ಪರಿಣಿತಿ ಹೊಂದಿರುವುದು ನಿಜಕ್ಕೂ ಶ್ಲಾಘನೀಯ

ಇವನು ಅಭಿನಯಿಸಿದ ದೇವರ ಹೆಣ ಎಂಬ ನಾಟಕ ಯುಥ ಪೆಸ್ಟಿವಲನಲ್ಲಿ ರಾಷ್ರ್ಟಮಟ್ಟದಲ್ಲಿ ನಾಲ್ಕನೇ ಸ್ಥಾನ ಲಬಿಸಿದೆ ಅಲ್ಲದೆ ಭಾರತಾಂಬೆ ಎಂಬ ನಾಟಕಕ್ಕೆ ಬೆಂಗಳೂರಿನಲ್ಲಿ ನೆಡೆದ ಕ್ರೈಸ್ಟ  ಯುನಿವಸರ್ಿಟಿ ರಾಷ್ರ್ಟಮಟ್ಟದ ನಾಟಕೋತ್ಸವದಲ್ಲಿ ದ್ವೀತಿಯ ಸ್ಥಾನ ಪಡೆದುಕೊಂಡು ಇದೇ ನಾಟಕಕ್ಕೆ ಬಳ್ಳಾರಿಯ ರಂಗತೋರಣದಲ್ಲಿ ಪ್ರಥಮ ಸ್ಥಾನ ಲಭಿಸಿದೆ ಇದಲ್ಲದೆ ಬೆತ್ತಕಡಿ , ಬೋಳೆಶಂಕರ ,ಕೆಂಡದ ಮಳೆ ಸುರಿಯುವಲ್ಲಿ ಉದಕವಾಗಿದ್ದವರ ಕತೆ , ಕಾಳಗವು ಕರಣದಲ್ಲಿ ಎಂಬ ಇನ್ನೂ ಮುಂತಾದ ನಾಟಕಗಳಲ್ಲಿ ಭಾಗವಹಿಸಿ ಇವನೊಬ್ಬ ಸಮರ್ಥ ರಂಗಭೂಮಿ ನಟ ಎಂಬುದನ್ನು ಸಾಬೀತುಪಟಿಸಿದ್ದಾನೆ ರೇಡಿಯೊ ನಾಟಕಗಳಲ್ಲಿಯೂ ಕೂಡಾ ಭಾಗವಹಿಸಿದ ಹೆಗ್ಗಳಿಕೆ ಇವನದಾಗಿದೆ ರಂಗಭೂಮಿ ಕಲಾವಿದನಾಗಲು ಮಹದೇವ ಹಡಪದ ಎಂಬ ನಿದರ್ೇಶಕರೆ ಈತನಿಗೆ ಸ್ಪೂತರ್ಿ ನೀಡಿದ್ದಾರೆ ಈಶ್ವರ್ ಭಟ್ಟ ಎಂಬುವವರ ಹತ್ತಿರ ಯಕ್ಷಗಾನ ಕಲೆಯನ್ನು ಅಬ್ಯಾಸ ಮಾಡಿದ್ದು ಕೃಷ್ಣಾಜರ್ುನ ಮತ್ತು ಸುಧನ್ವಾಜರ್ುನ ಎಂಬ  ಯಕ್ಷಗಾನ ಪ್ರಸಂಗಗಳಲ್ಲಿ ಅಜರ್ುನನ ಪಾತ್ರ ಮಾಡಿ ಸೈ ಎನಿಸಿಕೊಂಡಿದ್ದಾರೆ ಚಚರ್ಾ ಸ್ಪಧರ್ೆ ಹಾಗೂ ಭಾಷಣ ಸ್ಪಧರ್ೆಗಳಲ್ಲಿ ಭಾಗವಹಿಸಿ ರಾಜ್ಯ ಹಾಗೂ ರಾಷ್ರ್ಟ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ ಕಾರ್ಯಕ್ರಮ ನಿರ್ವಹಣೆ ಮಾಡುವುದು ಕೂಡಾ ಈತನ ಇನ್ನೊಂದು ಹವ್ಯಾಸ ಈತನಿಗೆ ಮುಂದೆ ಎಮ್.ಎಸ್.ಸಿ ಎನಿಮೇಷನ್ ಕೋರ್ಸ ಕಲೆಯಬೇಕೆಂಬ ಆಸೆ ಇದೆ ಚಿತ್ರ ಕಲೆಯಲ್ಲಿಯೆ ವಿಶೇಷವಾದ ಸಾಧನೆ ಮಾಡಬೇಕೆಂಬ ಮಹತ್ವಾಕಾಂಕ್ಷೆಯೂ ಇದೆ ಜೆ.ಎಸ್.ಎಸ್ ಕಾಲೇಜಿನ ಪ್ರಾಂಶುಪಾಲರು ವಿತ್ತಾಧಿಕಾರಿಗಳಾದ ಡಾ|| ಅಜಿತ ಪ್ರಸಾದ ಅವರು ಹಾಗೂ ಕಾರ್ಯದಶರ್ಿಗಳಾದ ಡಾ|| ನ. ವಜ್ರಕುಮಾರ ಅವರು ಈತನ ಹವ್ಯಾಸಗಳಿಗೆ ಸೂಕ್ತ ಪ್ರೋತ್ಸಾಹ ನೀಡುತ್ತಿದ್ದಾರೆ.

ಯುವಕರು ಮನಸ್ಸು ಮಾಡಿದರೆ ಏನು ಬೇಕಾದರು ಸಾಧಿಸಬಹುದು ಎನ್ನುವದಕ್ಕೆ ಒಳ್ಳೆಯ ಉದಾಹರಣೆ ಶಾಶ್ವತ ಹೆಗಡೆ ಎಂದು ಹೇಳಬಹುದು ಓದಿನ ಜೊತೆಗೆ ಒಳ್ಳೆಯ ಹವ್ಯಾಸ ನಿಶ್ಚಿತ ಗುರಿ ಇದ್ದರೆ ಯಶಸ್ಸು ಕಟ್ಟಿಟ್ಟ ಬುತ್ತಿ ಯುವಕರು ಸುಮ್ಮನೆ ಕಾಲಹರಣ ಮಾಡುವುದನ್ನು ಬಿಟ್ಟು ಇಂತಹ ಹವ್ಯಾಸಗಳಲ್ಲಿ ತೊಡಗಿಕೊಂಡು ಅದರಲ್ಲಿ ಸಾಧನೆ ಮಾಡಿದರೆ ಹೆತ್ತ ತಂದೆ ತಾಯಿಗೂ ಓದಿದ ಕಾಲೇಜಿಗೂ ಹಾಗೂ ದೇಶಕ್ಕೂ ಕೀತರ್ಿ ತರಬಹುದು ಶಾಶ್ವತ ಹೆಗಡೆ ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ನಾಡಿಗೆ ಹಾಗೂ ದೇಶಕ್ಕೆ ಕೀತರ್ಿ ತರಲೆಂದು ಹಾರೈಸೋಣ.

loading...

LEAVE A REPLY

Please enter your comment!
Please enter your name here