ಬಹಿರ್ದೆಸೆ ಮುಕ್ತ ಗ್ರಾಮಪಂಚಾಯತಿಯ ಸಂಕಲ್ಪ:ಪಿಡಿಓ

0
55

09 Gvt Janthakal Grama Panchayath News 01ಗಂಗಾವತಿ,10: ಭಾರತ ಸರ್ಕಾರದ ಸ್ವಚ್ಛ ಭಾರತ ಯೋಜನೆಯಡಿಯಲ್ಲಿ ತಾಲೂಕಿನ ಚಿಕ್ಕಜಂತಕಲ್ ಗ್ರಾ.ಪಂ ಬಹಿರ್ದೆಸೆಡ ಮುಕ್ತ ಪಂಚಾಯತಿಯನ್ನಾಗಿ ಮಾಡಲು ಸಂಕಲ್ಪಿಸಲಾಗಿದ್ದು ಈ ನಿಟ್ಟಿನಲ್ಲಿ ಡಿ,08 ಮಂಗಳವಾರ ಹೊಸಅಯೋಧ್ಯಾ, ಹಳೇ ಅಯೋಧ್ಯಾ, ಶ್ರೀಕೃಷ್ಣದೇವರಾಯನಗರಗಳ ನಿವಾಸಿಗಳ ಮನೆ-ಮನೆಗಳಿಗೆ ತೆರಳಿ ಫಲಾನುಭವಿಗಳಿಗೆ ಚೆಕ್ ವಿತರಿಸಲಾಯಿತು.

ಈ ಕುರಿತು ಮಾತನಾಡಿದ ಪಂಚಾಯತಿ ಅಭಿವೃದ್ಧಿ ಅಧಿಕಾರಿ ರವೀಂದ್ರ ಕುಲ್ಕರ್ಣಿ ಕಳೆದ ದಿನಗಳಲ್ಲಿ ನಮ್ಮ ಪಂಚಾಯತಿ ವ್ಯಾಪ್ತಿಯ ಎಲ್ಲ ಗ್ರಾಮಗಳ ನಿವಾಸಿಗಳ ಮನೆ-ಮನೆಗೆ ತೆರಳಿ ಬಹಿರ್ದೆಸೆ ನಿರ್ಮೂಲನೆಯಿಂದಾಗುವ ಪರಿಣಾಮಗಳು ಹಾಗೂ ಕೈಗೊಳ್ಳುವ ಕ್ರಮಗಳ ಕುರಿತಾಗಿ ಗ್ರಾಮಸ್ಥರಲ್ಲಿ ಅರಿವು ಮೂಡಿಸಲಾಗಿದ್ದು ಎಲ್ಲರೂ ವಯಕ್ತಿಕ ಶೌಚಾಲಯ ನಿರ್ಮಿಸಿಕೊಳ್ಳಲು  ಅವರ ಮನೆ ಬಾಗಿಲಿಗೆ ತೆರಳಿ ಸಹಾಯಧನದ ಚೆಕ್ ವಿತರಿಸಲಾಗಿದೆ. ಬರುವ ಮಾರ್ಚ ತಿಂಗಳೊಳಗಾಗಿ ನಮ್ಮ ಪಂಚಾಯತಿಯನ್ನು ಸ್ವಚ್ಛ ಹಾಗೂ ಮಾದರಿ ಮಪಂಚಾಯತಿಯನ್ನಾಗಿಸುವ ಸಂಕಲ್ಪಕ್ಕೆ ಎಲ್ಲರೂ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷೆ  ಹಂಪಮ್ಮ, ಸದಸ್ಯರಾದ ನಾಗೇಂದ್ರ, ಮಾಜಿ ಅಧ್ಯಕ್ಷರಾದ ದಾನಪ್ಪ, ಮುಖಂಡರಾದ ಹನುಮೇಶ ನಾಯಕ, ಬಾಷಾಸಾಬ್, ಕಾಯಕಬಂಧು ಹುಲುಗಪ್ಪ ಸೇರಿದಂತೆ ಗಾ.ಪಂ ಸಿಬ್ಬಂದಿಗಳು ಇದ್ದರು.

loading...

LEAVE A REPLY

Please enter your comment!
Please enter your name here