40 ಸಾವಿರ ಮೌಲ್ಯದ ಅಕ್ರಮ ಸಾಗವಾನಿ ವಶ

0
34

11Ankola2 ಅಂಕೋಲಾ,11 : ತಾಲೂಕಿನ ಕೊಡ್ಸಣಿ ಗಂಗಾವಳಿ ನದಿಯ ಸಮೀಪದ ಅರಣ್ಯ ಪ್ರದೇಶದ ಗೇರು ನೆಡುತೋಪಿ ನಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿ ಸಂಗ್ರಹಿಸಿಟ್ಟಿರುವ ಸುಮಾರು 40 ಸಾವಿರ ಮೌಲ್ಯದ ಸಾಗವಾನಿ ನಗಗ ಳನ್ನು ಅಂಕೋಲಾ ವಲಯ ಅರಣ್ಯಾಧಿಕಾರಗಳು ವಶಪಡಿಸಿಕೊಂಡಿರುವ ಘಟನೆ ಡಿ.10 ಗುರುವಾರ ಸಂಜೆ 7 ಗಂಟೆ ಸುಮಾರಿಗೆ ನಡೆದಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಇವರ ಶೋಧನೆಗಾಗಿ ಕಾರ್ಯ ಚರಣೆ ಮುಂದುವರಿದಿದೆ. ಈ ದಾಳಿಯನ್ನು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪಿ.ಕೆ. ಪೈ ಅವರ ಮಾರ್ಗದರ್ಶನದಲ್ಲಿ ನಡೆದಿದೆ ಎಂದು ಅಂಕೋಲಾ ವಲಯ ಅರಣ್ಯಾಧಿಕಾರಿ ರಾಘವೇಂದ್ರ ನಾಯ್ಕ ತಿಳಿಸಿ ದ್ದಾರೆ. ಉಪ-ವಲಯ ಅರಣ್ಯಾಧಿಕಾರಿ ಎನ್.ಕೆ. ನಾಯ್ಕ, ಅರಣ್ಯ ರಕ್ಷಕರಾದ ಹಜರೇ ಸಾವ ಕುಂದಗೋಳ, ಮೋಹನ ನಾಯ್ಕ, ವೆಂಕಟಪ್ಪ ಬೋಯಿನ್, ಅರಣ್ಯ ವೀಕ್ಷಕರಾದ ಬೈರು, ಗೋಪಾಲ, ಸುರೇಶ, ರಾಜು, ಪ್ರಕಾಶ ದಾಳಿಯಲ್ಲಿ ಪಾಲ್ಗೊಂಡಿದ್ದರು.

loading...

LEAVE A REPLY

Please enter your comment!
Please enter your name here