ರೈತ ದಿನಾಚರಣೆ ಸರ್ಕಾರ ಮಟ್ಟದಲ್ಲಿ ಆಚರಿಸುವಂತೆ ಒತ್ತಾಯಿಸಿ ಮನವಿ

0
60

14 SGN 01ಶಿಗ್ಗಾವಿ,14: ಸರ್ಕಾರದ ವತಿಯಿಂದ ಡಿ: 23 ರಂದು ರೈತ ದಿನಾಚರಣೆಯನ್ನು ಸರ್ಕಾರಿ ಕಾರ್ಯಕ್ರಮವಾಗಿ ಅದ್ದೂರಿಯಾಗಿ ಆಚರಿಸಬೇಕೆಂದು ಅಗ್ರಹಿಸಿ ತಾಲೂಕಾ ಕೃಷಿಕ ಸಮಾಜದ ವತಿಯಿಂದ ಸಹಾಯಕ ಕೃಷಿ ನಿರ್ಧೇಶಕ ನಾಗನಗೌಡ ಆರ್. ಅವರ ಮೂಲಕ ರಾಜ್ಯ ಕೃಷಿ ಸಚಿವ ಕೃಷ್ಣಬೈರೆಗೌಡ ಅವರಿಗೆ ಮನವಿ ಅರ್ಪಿಸಿದರು.

ಸೋಮವಾರ ಪಟ್ಟಣದ ಕೃಷಿ ಇಲಾಖೆಯಲ್ಲಿ ಮನವಿ ಅರ್ಪಿಸಿ ಮಾತನಾಡಿದ ತಾಲೂಕಾ ಕೃಷಿಕ ಸಮಾಜದ ಅಧ್ಯಕ್ಷ ಹನುಮರೆಡ್ಡಿ ನಡುವಿನಮನಿ, ಸರ್ಕಾರ ಎಷ್ಟೋ ದಿನಾಚರಣೆಗಳನ್ನು ಆಚರಿಸುತ್ತಿದೆ, ಆದರೆ ಅನ್ನದಾತ ರೈತರ ದಿನಾಚರಣೆ ಸರ್ಕಾರ ಮಟ್ಟದಲ್ಲಿ ಆಚರಿಸುತ್ತಿಲ್ಲ ರೈತ ದಿನಾಚರಣೆಯನ್ನು ಸರ್ಕಾರ ಮಟ್ಟದಲ್ಲಿ ಆಚರಿಸುವಂತಾಗಬೇಕು. ರೈತ ದಿನಾಚರಣೆಯಲ್ಲಿ ಕೃಷಿಯಲ್ಲಿ ಸಾಧನೆ ಮಾಡಿದವರಿಗೆ ಪ್ರಶಸ್ತಿ ನೀಡಿ ಗೌರವಿಸಿದಲ್ಲಿ ರೈತರು ಇನ್ನು ಹೆಚ್ಚು ಉತ್ಸಾಹದಿಂದ ದುಡಿಯುವರಲ್ಲದೆ, ಯುವಕರನ್ನೂ ಕೃಷಿಯತ್ತ ಆಕರ್ಷಿಸುವಂತಾಗುತ್ತದೆ. ಇದರಿಂದ ಕೃಷಿ ಕ್ಷೇತ್ರ ಅಭಿವೃದ್ದಿಯಾಗುತ್ತದೆ ಎಂಬುದನ್ನು ಸರ್ಕಾರ ಮನಗಾಣಬೇಕಿದೆ ಎಂದರು.

ಮನವಿಯಲ್ಲಿ ಅನೇಕ ದಿನಾಚರಣೆಯನ್ನು ಸರ್ಕಾರದ ವತಿಯಿಂದ ಆಚರಿಸುತ್ತಾ ಬಂದಿರುವ ತಾವುಗಳು ಏಕೆ ರೈತ ದಿನಾಚರಣೆಯನ್ನು ಆಚರಿಸುವಲ್ಲಿ ತಾರತಮ್ಯ ತೋರಿಸುತ್ತಿರುವಿರಿ, ನಮ್ಮ ಭಾರತ ದೇಶದಲ್ಲಿ ರೈತ ಕೂಲಿ ಕಾರ್ಮಿಕರು ಶೇಕಡಾ 70 ರಿಂದ 75 ಇರುವ ನಮ್ಮ ದೇಶದಲ್ಲಿ  ಸರ್ಕಾರದ ವತಿಯಿಂದ ರೈತ ದಿನಾಚರಣೆಯನ್ನು ಏಕೆ ಆಚರಿಸಬಾರದು? ಇಲ್ಲಿಯವರೆಗೆ ಈ ದಿನಾಚರಣೆಯ ಬಗ್ಗೆ ಯಾವುದೇ ಸರ್ಕಾರವು ಸರ್ಕಾರದ ವತಿಯಿಂದ ಆಚರಿಸಲು ಹಾಗೂ ಯಾವುದೇ ರೈತ ಸಂಘಟನೆಗಳು ಕೂಡಾ ಸರ್ಕಾರದ ಮಟ್ಟದಲ್ಲಿ ಆಚರಣೆ ಮಾಡಲು ಇದರ ಬಗ್ಗೆ ಗಮನ ಹರಿಸಿರುವುದಿಲ್ಲ. ತಾವುಗಳು ದಕ್ಷ ಪ್ರಾಮಾಣಿಕವಾಗಿ ರೈತರ ಪರವಾಗಿ ಅನೇಕ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿರುವುದು ಬಹಳ ಸಂತೋಷದ ವಿಷಯ, ಸದರಿ ರೈತ ದಿನಾಚರಣೆಯನ್ನು ದಿ-23-12-2015 ಸರ್ಕಾರದ ವತಿಯಿಂದ ಮಾನ್ಯ ತಹಶೀಲ್ದಾರ ಇವರ ಮುಖಾಂತರ ಆಚರಣೆ ಮಾಡಲು ತೀರ್ಮಾನಿಸಬೇಕೆಂದು, ರಾಜ್ಯ ಕೃಷಿ ಸಚಿವ ಕೃಷ್ಣಬೈರೆಗೌಡ ಅವರನ್ನು ಮನವಿಯಲ್ಲಿ ಒತ್ತಾಯಿಸಿದ್ದಾರೆ.

ತಾಲೂಕಾ ಕೃಷಿಕ ಸಮಾಜದ ಕಾರ್ಯದರ್ಶಿ ಚಂದ್ರಶೇಖರ್ ಮಾಣೋಜಿ, ನಿರ್ಧೇಶಕರು ಹಾಗೂ  ಮಾಜಿ ಜಿ ಪಂ ಅಧ್ಯಕ್ಷ ಗುಡ್ಡಪ್ಪ ಜಲದಿ, ರೈತ ಮುಖಂಡರಾದ ಈರಯ್ಯ ಹಿರೇಮಠ, ಚನ್ನಬಸಗೌಡ ಮರಿಗೌಡ ಸೇರಿದಂತೆ ಅನೇಕ ರೈತರು ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here