ಭೂತೇಶ್ವರ ದೇವಸ್ಥಾನದ ಜೀರ್ಣೋದ್ದಾರ ಬಸವಣ್ಣ ಮೂರ್ತಿ ಪ್ರತಿಷ್ಠಾಪನಾ ಕಾರ್ಯಕ್ರಮ

0
93

IMG_20151213_200124ಕುಂದಗೋಳ,14: ನಂಬಿಕೆಯಲ್ಲಿ ವಿಶ್ವಾಸವಿರಬೇಕು. ಆತ್ಮಶಕ್ತಿಗೆ ಅನುಗುಣವಾಗಿ ದಾನ, ಧರ್ಮ ಪರೋಪಕಾರ ಮಾಡಿದ್ದೇ ಆದಲ್ಲಿ ನಿಜವಾದ ದೈವ ಶಕ್ತಿಯ ಸಾಕ್ಷಾತ್ಕಾರವಾಗುವುದರಲ್ಲಿ ಯಾವುದೇ ಸಂದೇಹವೇ ಇಲ್ಲ ಎಂದು ಪಂಚಗ್ರಹ ಹಿರೇಮಠದ ಶ್ರೀ ಶಿತಿಕಂಠೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಪಟ್ಟಣದ ಐತಿಹಾಸಿಕ ಭೂತೇಶ್ವರ ದೇವಸ್ಥಾನದ ಜೀರ್ಣೋದ್ದಾರಗೊಂಡ ಕಟ್ಟಡ ಉದ್ಘಾಟಿಸಿ, ಬಸವಣ್ಣ ಮೂರ್ತಿ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮಕ್ಕೆ  ದೀಪ ಬೆಳಗಿಸುವ ಮೂಲಕ ಚಾಲನೆ ನಿಡಿ  ಆಶೀರ್ವಚನ  ನೀಡಿದ ಅವರು, ರಾಜ್ಯದ ಮೂರು ವಿಭಿನ್ನ ಸ್ಥಳಗಳಲ್ಲಿ ಇರುವ ಭೂತೇಶ್ವರ, ಬ್ರಹ್ಮಲಿಂಗೇಶ್ವರ ಹಾಗೂ ಹರಿಹರೇಶ್ವರ ದೇವಸ್ಥಾನಗಳು ಪಟ್ಟಣದಲ್ಲಿರುವುದು ಇಲ್ಲಿನ ಭಕ್ತಿ, ಭಾವತೆ ಎಷ್ಟಿದೆ ಎಂಬುದನ್ನು ನಿರೂಪಿಸುತ್ತದೆ. ಭೂತನಾಥೇಶ್ವರಿಗೆ ಐತಿಹಾಸಿಕ ಹಿನ್ನಲೆಯಿದೆ. ಹಾಗಾಗಿ ಜೀರ್ಣೋದ್ದಾರಕ್ಕೆ ಕೈ ಹಾಕಿದ ಎರಡೇ ತಿಂಗಳಲ್ಲಿ ಸುಂದರ ದೇವಸ್ಥಾನ ಕಂಗೊಳಿಸಿ ಅಲ್ಲಿ ನಂಧೀಶ ಪ್ರತಿಷ್ಠಾಪನೆಗೊಂಡಿದ್ದಾನೆ ಇದಕ್ಕೆಲ್ಲಾ ಭಕ್ತರ ಸಹಾಯ ಸಹಕಾರ ಬಹಳಷ್ಟು ಕೊಒಡುಗೆ ನೀಡಿದೆ ಎಂದರು.

ಪ್ರತಿಯೊಬ್ಬರಲ್ಲೂ ಪರೋಪಕಾರವಿರಬೇಕು. ಬೇಡುವ ನಾಲಿಗೆಯಲ್ಲಿ ನಿಯತ್ತಿದ್ದರೆ, ದಾನ ಕೊಡುವ ಕೈಗಳಿಗೆ ಬರವೇ ಇಲ್ಲ. ಹಾಗಾಗಿ ಬರಗಾಲವಿದ್ದರೂ ಕೂಡ ದಾನಿಗಳು ಸ್ವಯಂ ಪ್ರೇರಣೆಯಿಂದ ಧನ,ಧಾನ್ಯ  ನೀಡಿ ದೇಗುಲ ನಿರ್ಮಾಣಕ್ಕೆ ಕಾರಣರಾಗಿದ್ದಾರೆ. ದೈವತ್ವವನ್ನು ನಂಬಬೇಕು. ಆಸ್ತಿಕತೆಯಲ್ಲಿ ಕತೃತ್ವ ಶಕ್ತಿ ಇದೆ. ಅದನ್ನು ನಿರೂಪಿಸಲು ಧರ್ಮಗ್ರಂಥಗಳಲ್ಲಿ ಉಲ್ಲೇಖವಾಗಿರುವ ಪವಾಡಗಳು, ಆಗಿರುವ ಘಟನೆಗಲೇ ಸಾಕ್ಷಿ ಎಂದ ಶ್ರೀಗಳು ಭಾರತ ದೇಶದಲ್ಲಿ ಎಲ್ಲಾ ಧರ್ಮ, ಜಾತಿಯವರಿಗೆ ಸ್ಥಾನವಿದೆ. ಮತ್ತೊಬ್ಬರಿಗೆ ಪರೋಪಕಾರ ಮಾಡುವ ಗುಣ ದೇಶದ ಜನರಲ್ಲಿದೆ. ದೇಹ ಸ್ಥಿತಿ ಬದಲಾದರೂ ಮನ ಸ್ಥತಿ ಎಂದೂ ಕೂಡ ಬದಲಾಗಬಾರದು. ದೇಹ ನಶ್ವರ ಆದರೆ ಆತ್ಮ ಶಾಶ್ವತ ಎಂಬುದನ್ನು ಮನಗಾನಬೇಕು ಎಂದರು.

ಸಾನಿದ್ಯ ವಹಿಸಿದ್ದ ಕಲ್ಯಾಣಪೂರದ ಬಸವಣ್ಣಜ್ಜನವರು ಮಾತನಾಡಿ, ಪ್ರತಿ ಸೋಮವಾರ ಭೂತೇಶ್ವರಿನಿಗೆ ವಿಶೇಷ ಪೂಜೆಯಾಗಬೇಕು. ಶ್ರೀಗಳು ಹೇಳಿದಂತೆ ಭಕ್ತರು ವಾರಕ್ಕೊಮ್ಮೆ ಬುತ್ತಿ ಪೂಜೆ ಮಾಡಿ ಅದನ್ನೇ ಪ್ರಸಾದವನ್ನಾಗಿ ನೀಡಬೇಕು. ಬಡವರ ಕಷ್ಟಕಾರ್ಪಣ್ಯಗಳನ್ನು ಅಳಿಸಲು ಧರ್ಮ ಸದಾ ರಕ್ಷಣೆಯಾಗಲಿದೆ ಅದನ್ನೆಂದೂ ಕೈ ಬಿಡಬಾರದು. ಮತ್ತೊಬ್ಬರನ್ನು ಧ್ವೇಷಿಸುವ ಗುಣವನ್ನು ಬೆಳೆಸಿಕೊಳ್ಳಬಾರದೆಂದರು.

ದೇವಸ್ಥಾನ ಕಮೀಟಿಯ ರಾಮಣ್ಣ ನೆಲಗುಡ್ಡ ಮಾತನಾಡಿ, ಎರಡೇ ತಿಂಗಳ ಅವಧಿಯಲ್ಲಿ ದೇವಸ್ಥಾನ ಪೂರ್ಣಗೊಂಡಿರುವುದಕ್ಕೆ ಭೂತೇಶ್ವರನ ಕತೃತ್ವದ ಶಕ್ತಿಯೇ ಕಾರಣರಾಗಿದೆ. ಯಾರನ್ನು ಕೇಳಿದರೂ ಇಲ್ಲ ಎನ್ನದೇ ದಾನ ನಿಡಿದ ಮಹನಿಯರಿಗೆ ಕೃತಜ್ಞತೆ ತಿಳಿಸಿದರು. ಬಿಜೆಪಿ ಜಿಲ್ಲಾದ್ಯಕ್ಷ ಎಂ.ಆರ್.ಪಾಟೀಲ ಮಾತನಾಡಿದರು.

ಡಾ.ಚಂದ್ರಶೇಖರ ಬಾಳಿಕಾಯಿ, ದ್ಯಾಮನಗೌಡ ಭರಮಗೌಡ್ರ, ಮಾಲತೇಶ ಶ್ಯಾಗೋಟಿ, ಶಂಕರಗೌಡ ನಿರಂಜನಗೌಡ್ರು, ಗುರುಪಾದ ಕಮ್ಮಾರ, ಸಹಿತ ದೇವಸ್ಥಾನಕ್ಕೆ ದೇಣಿಗೆ ನಿಡಿದ ಹಲವರನ್ನು ಸನ್ಮಾನಿಸಲಾಯಿತು.  ಮಾಂತೇಶ ಶಿಗ್ಲಿ ಕಾರ್ಯಕ್ರಮ ನಿರೂಪಿಸಿದರು.

loading...

LEAVE A REPLY

Please enter your comment!
Please enter your name here