ಜನಪರ ಕೆಲಸ ಮಾಡಿದ ಅನುಭವ ನನಗೆ ಇದೆ : ಗಣಪತಿ ಉಳ್ವೇಕರ್

0
51

 

ಅಂಕೋಲಾ15 : ಕಾರವಾರ ನಗರ ಸಭೆಯ ಪತ್ರಿನಿಧಿಯಾಗಿ 4 ಬಾರಿ ಆಡಳಿತ ನಡೆಸಿದ್ದೇನೆ. ಈ ಮೂಲಕ ನಾನು ಕಾರವಾರ ನಗರ ಸಭೆಗೆ ಸರಕಾರದಿಂದ ವಿವಿಧ ಮೂಲದ ಅನುದಾನ ತಂದು ಜನಪರ ಕೆಲಸ ಮಾಡಿದ ಅನುಭವ ಸಹ ನನಗೆ ಇದೆ. ಈ ನಿಟ್ಟಿನಲ್ಲಿ ಹೇಳುವುದಾದರೆ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಜನಪ್ರತಿ ನಿಧಿಗಳು ಬಿಜೆಪಿ ಪಕ್ಷಕ್ಕೆ ಬೆಂಬಲ ಸೂಚಿಸುವ ಮುಖೇನ ಗೆಲುವಿನ ಆತ್ಮವಿಶ್ವಾಸ ನನಗೆ ಇದೆ ಎಂದು ಬಿಜೆಪಿ ಅಭ್ಯರ್ಥಿ ಗಣಪತಿ ಉಳ್ವೇಕರ ಹೇಳಿದರು.

ಅವರು ತಾಲೂಕಿನಲ್ಲಿ ಎರಡನೇ ಬಾರಿಗೆ ಪ್ರಚಾರಕ್ಕೆ ಆಗಮಿಸಿದ ವೇಳೆ ಅಂಕೋಲಾ ಪುರಸಭೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿ ರಾಷ್ಟ್ರ, ರಾಜ್ಯ ಹಾಗೂ ಜಿಲ್ಲೆ ಬಿಜೆಪಿ ನಾಯಕರ ಆಶೀರ್ವಾದ ನನ್ನ ಮೇಲೆ ಇರುವುದರಿಂದ ಅದೇ ನಿಟ್ಟಿನಲ್ಲಿ ಜಿಲ್ಲೆಯಲ್ಲಿಯು ಸಹ ಕಾರ್ಯಕರ್ತರು ನಿಷ್ಠೆಯಿಂದ ಕಾರ್ಯ ನಿರ್ವಹಿಸಿತ್ತಿರುವ ಫಲ ನನಗೆ ಲಭಿಸುತ್ತದೆ. ತಾವೆಲ್ಲರೂ ನನಗೆ ಮತ ನೀಡುವ ಮೂಲಕ ಬೆಂಬಲಿಸಿ ಜಿಲ್ಲೆಯ ಅಭಿವೃದ್ಧಿಗೆ ಸೇವೆ ಮಾಡಲು ಅವಕಾಶ ಕಲ್ಪಿಸುತ್ತೀರಿ ಎಂದು ಭಾವಿಸಿದ್ದೇನೆ ಎಂದರು.

ಪುರಸಭೆ ಅಧ್ಯಕ್ಷ ಭಾಸ್ಕರ ಕೇ.ನಾರ್ವೇಕರ ಅವರು ಮಾತನಾಡಿ ಸ್ಪರ್ಧೆಯಲ್ಲಿರುವ ಉಳಿದ ಅಭ್ಯರ್ಥಿಗಳಿಗೆ ಹೋಲಿಸಿದರೆ ಬಿಜೆಪಿ ಅಭ್ಯರ್ಥಿ ಗಣಪತಣ್ಣ ಸಜ್ಜನರಾಗಿದ್ದಾರೆ. ಅಷ್ಟೇ ಅಲ್ಲ ಮೀನುಗಾರಿಕಾ ಸಂಘಟನೆ, ವಿವಿಧ ಹೋರಾಟಗಳಲ್ಲಿ ತೊಡಗಿಸಿಕೊಂಡು ಜನರ ಪ್ರಮುಖವಾಹಿನಿಯಲ್ಲಿ ಹೆಸರು ಗಳಿಸಿಕೊಂಡಿದ್ದರಿಂದ ಪಕ್ಷದ ಹೈಕಮಾಂಡ ಸ್ಪರ್ಧೆಯ ಟಿಕೇಟ್ ನೀಡಿದೆ. ಈ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲಾ ಕಾರ್ಯಕರ್ತರ ಶ್ರಮದ ಫಲವಾಗಿ ಗೆಲವು ಖಂಡಿತ ಅಲ್ಲದೇ ನಮ್ಮ ಪುರಸಭೆ ಸದಸ್ಯರಿಂದ ಸಂಪೂರ್ಣ ಬೆಂಬಲವಿದೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಗಂಗಾಧರ ಭಟ್, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಪ್ರಸಾದ ಕಾರವಾರಕರ್, ಬಿಜೆಪಿ ಹಿಂದುಳಿದ ರಾಜ್ಯ ಉಪಾಧ್ಯಕ್ಷ ರಾಮ್‍ರಾಮ್ ವಿ. ರಾಯ್ಕರ, ತಾಲೂಕಾಧ್ಯಕ್ಷ ಜಗದೀಶ ಜಿ. ನಾಯಕ ಮೊಗಟಾ, ಪ್ರಧಾನ ಕಾಯದರ್ಶಿ ಸಂಜಯ ನಾಯ್ಕ ಭಾವಿಕೇರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಾಮೋಧರ ರಾಯ್ಕರ, ಪುರಸಭೆ ಉಪಾಧ್ಯಕ್ಷೆ ಲಕ್ಷ್ಮೀ ಜಿ. ನಾಯ್ಕ, ಸ್ಥಾಯಿ ಸಮಿತಿ ಅಧ್ಯಕ್ಷ ಸೂರಜ್ ಎಂ. ನಾಯ್ಕ, ಸದಸ್ಯರಾದ ಗೋಪಾಲಕೃಷ್ಣ ಸಿ. ನಾಯ್ಕ (ನಾಗೇಂದ್ರ), ಕೃಷ್ಣಕುಮಾರ ವಿ. ಮಹಾಲೆ, ಸವಿತಾ ಎಸ್. ಗೌಡ, ಶಾರದಾ ಕುಡ್ತಳಕರ, ಶಾಂತ ಹರಿಕಂತ್ರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here