ಜೆಡಿಎಸ್ ಅಭ್ಯರ್ಥಿಯ ಬಿರುಸಿನ ಪ್ರಚಾರ, ಮತಯಾಚನೆ

0
27

ವಿಜಯಪುರ, : ವಿಧಾನ ಪರಿಷತ್ತ ಚುನಾವಣೆಯ ಜೆಡಿಎಸ್ ಅಧಿಕೃತ ಅಭ್ಯರ್ಥಿ ಕಾಂತು ಇಂಚಗೇರಿ ಅವರು ಮಂಗಳವಾರ ಸಿಂದಗಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಬಿರುಸಿನ ಪ್ರಚಾರ ನಡೆಸಿ ಮತಯಾಚಿಸಿದರು.
ಪಂಚಾಯ್ತಿ ಪ್ರತಿನಿಧಿಗಳನ್ನು ಬೇಟಿ ಮಾಡಿದ ಅವರು, ಪ್ರಥಮ ಪ್ರಾಶಸ್ತ್ಯದ ಮತ ನೀಡಿ ತಮ್ಮನ್ನು ಬಹುಮತದಿಂದ ಆಯ್ಕೆ ಮಾಡಬೇಕೆಂದು ಮನವಿ ಮಾಡಿಕೊಂಡರು.
ಜೆಡಿಎಸ್ ಪಕ್ಷ ರೈತರ ಪಕ್ಷದವಾಗಿದ್ದು, ಪಕ್ಷದ ವರಿಷ್ಠರಾದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಎ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಈ ಭಾಗದ ಅಭಿವೃದ್ಧಿ, ನೀರಾವರಿಗೆ ವಿಶೇಷ ಕೊಡುಗೆ ನೀಡಿದ್ದಾರೆ. ಜೆಡಿಎಸ್ ಮಾಡಿದ ಸಾಧನೆಗಳು, ಜನಪರ ಕಾರ್ಯಕ್ರಮಗಳು ಇನ್ನೂ ಜನರ ಮನದಲ್ಲಿ ಅಚ್ಚಳಿಯದೇ ಉಳಿದಿವೆ. ಎಂದರು.
ಎಲ್ಲ ಸಮುಧಾಯಗಳ ಬೆಂಬಲ ತಮಗಿದ್ದು, ವಿಜಯಪುರ ಕ್ಷೇತ್ರ ಹೊಸ ಇತಿಹಾಸ ಸೃಷ್ಠಿಸಲಿದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಜೆಡಿಎಸ್ ತಾಲೂಕಾ ಅಧ್ಯಕ್ಷ ಪ್ರಕಾಶ ಹಿರೇಕುರುಬರ, ಎಸ್‍ಸಿ, ಎಸ್‍ಟಿ ಘಟಕ ಅಧ್ಯಕ್ಷ ಪರಶುರಾಮ ಕಾಂಬಳೆ, ತಾಲೂಕ ಪಂಚಾಯತ್ ಸದಸ್ಯ ಅಕ್ಬರ ಮುಲ್ಲಾ, ಜೆಡಿಎಸ್ ತಾಲೂಕ ವಕ್ತಾರರಾದ ಸಿದ್ದಣ್ಣ ಚೌದ್ರಿ, ಇನ್ನೂ ಅನೇಕ ಗ್ರಾಮ ಪಂಚಾಯತ ಸದಸ್ಯರು, ಪಕ್ಷದ ಅಭಿಮಾನಿಗಳು, ಮತ್ತಿತgರುÀ ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here