ಉತ್ಸವಗಳು ಸಂಸ್ಕತಿಯ ಜೀವಾಳ : ಪ್ರಕಾಶ ಶೆಟ್ಟಿ

0
89


ದಾಂಡೇಲಿ: ಧಾರ್ಮಿಕ, ಸಾಂಸ್ಕøತಿಕ ಉತ್ಸವಗಳು ಸೌಹಾರ್ಧತೆಯ ವಾತವರಣ ನಿರ್ಮಾಣಕ್ಕೆ ಅತ್ಯುತ್ತಮ ವೇದಿಕೆ. ಧಾರ್ಮಿಕ ಮತ್ತು ಸಾಂಸ್ಕøತಿಕ ಉತ್ಸವಗಳೆ ನಮ್ಮ ನಾಡಿನ ಸಂಸ್ಕøತಿಯ ಜೀವಾಳ ಎಂದು ನಗರದ ಕಲಾಶ್ರೀ ಸಂಸ್ಥೆಯ ಅಧ್ಯಕ್ಷ ಹಾಗೂ ಉದ್ಯಮಿ ಪ್ರಕಾಶ ಶೆಟ್ಟಿ ನುಡಿದರು.

ಅವರು ನಗರದ ಕಾಳಿ ಉತ್ಸವ ಸಮಿತಿಯ ಆಶ್ರಯದಲ್ಲಿ ಹಳೆ ನಗರ ಸಭೆಯ ಮೈದಾನದಲ್ಲಿ ಅದ್ದೂರಿಯಾಗಿ ಹಮ್ಮಿಕೊಂಡಿದ್ದ 4 ನೇ ವರ್ಷದ ಮೂರು ದಿನಗಳ ಕಾಳಿ ಉತ್ಸವ ಕಾರ್ಯಕ್ರಮದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಿದ್ದರು. ಸ್ಥಳೀಯ ಕಲಾ ಪ್ರತಿಭೆಗಳನ್ನು ಸಮಾಜದ ಮುಖ್ಯಭೂಮಿಕೆಗೆ ತರುವಲ್ಲಿ ಕಾಳಿ ಉತ್ಸವ ಪ್ರಮುಖ ಪ್ರೇರಣಾಶಕ್ತಿಯಾಗಿದೆ. ಸರ್ವರನ್ನು ಒಂದುಗೂಡಿಸಿ ಮೂರು ದಿನಗಳ ಕಾಳಿ ಉತ್ಸವವನ್ನು ಮಾಡುವುದರ ಮೂಲಕ ನಗರದಲ್ಲಿ ಸಾಂಸ್ಕøತಿಕ ಕಲರವಕ್ಕೆ ಸಾಕ್ಷಿಯಾದ ಕಾಳಿ ಉತ್ಸವ ಸಮಿತಿಯ ಪ್ರಯತ್ನಶೀಲತೆ ಶ್ಲಾಘನೀಯ ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಮಕ್ಕಳ ಪಕ್ಷದ ವಿದ್ಯಾರ್ಥಿ ಒಕ್ಕೂಟದ ರಾಜ್ಯಾಧ್ಯಕ್ಷ ರಘು ನಾಯ್ಕ ಅವರು ಉತ್ಸವಗಳು ಊರಿನ ಹಿರಿಮೆ ಸಾರುವ ಸಾಂಸ್ಕøತಿಕ ರಾಯಭಾರಿ ಎಂದ ಅವರು ಎಲ್ಲ ಅರ್ಹತೆಗಳನ್ನು ಹೊಮದಿರುವ ದಾಂಡೇಲಿ ತಾಲೂಕಾಗದಿರುವುದು ದುರ್ದೈವ್ಯದ ಸಂಗತಿಯಾಗಿದ್ದು, ದಾಂಡೇಲಿ ತಾಲೂಕಿಗಾಗಿ ಎಲ್ಲರು ಒಂದಾಗಿ ಹೋರಾಟ ಮಾಡಬೇಕೆಂದರು.

ಗಡಿನಾಡು ಕನ್ನಡ ಸೇನೆಯ ರಾಜ್ಯಾಧ್ಯಕ್ಷ ಸೈಯದ್ ಮನ್ಸೂರು ಅವರು ಜನರ ಉತ್ಸವವಾಗಿ ಮೂಡಿ ಬಂದ ಕಾಳಿ ಉತ್ಸವ ದಾಂಡೇಲಿಯ ಸಾಂಸ್ಕøತಿಕ ಕ್ಷೇತ್ರದ ಬಲವರ್ಧನೆಗೆ ಪ್ರಮುಖ ವೇದಿಕೆಯಾಗಲೆಂದರು.

ಅತಿಥಿಗಳಾಗಿ ಬಾಗವಹಿಸಿದ್ದ ವಲಯಾರಣ್ಯಾಧಿಕಾರಿ ಮಹೇಶ ಹಿರೇಮಠ, ಕಾಗದ ಕಾರ್ಖಾನೆಯ ಹಿರಿಯ ಅಧಿಕಾರಿ ಎಸ್.ಎಸ್.ಧೂತ್, ಕಾಗದ ಕಾರ್ಖಾನೆಯ ಕೊ ಅಪರೇಟಿವ್ ಸೊಸೈಟಿಯ ಕಾರ್ಯ ನಿರ್ವಾಹಣಾಧಿಕಾರಿ ವಿಠ್ಠಲ್.ಎಸ್.ಬಂಗ್ ಮೊದಲಾದವರು ಸಂದರ್ಭೋಚಿತವಾಗಿ ಮಾತನಾಡಿದರು.

ಪ್ರಾಸ್ತಾವಿಕವಾಗಿ ಕಾಳಿ ಉತ್ಸವ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಇಲಿಯಾಸ ಕಾಟಿ ಮಾತನಾಡಿ ಕಾಳಿ ಉತ್ಸವದ ಯಶಸ್ಸಿಗೆ ಸಹಕರಿಸಿದ ಸರ್ವರಿಗೂ ಕೃತಜ್ಞತೆ ಸಲ್ಲಿಸಿದರು.

ವೇದಿಕೆಯಲ್ಲಿ ಸಮಾಜ ಸೇವಕ ಮುಸ್ತಾಕ ಮಿಶ್ರಿಕೋಟಿ, ಶಿಕ್ಷಕ ಕಿಶೋರ ಕಿಂದಳ್ಕರ್, ಅಂಬಿಕಾನಗರದ ಕ್ರೈಸ್ತ ಧರ್ಮಗುರು ರೆ.ಫಾ. ಕೆ.ಕ್ರೀಷ್ಟೋಪರ್, ಗಡಿನಾಡು ಕನ್ನಡ ಸೇನೆಯ ಜಿಲ್ಲಾಧ್ಯಕ್ಷ ಸರ್ಪರಾಜ್ ಶೇಖ, ಅಂಬಿಕಾನಗರ ಕರವೇ ಮಹಿಳಾ ಗಟಕದ ಲೀಲಾವತಿ ಕೊಳಚೆ ಅಂಬಿಕಾನಗರ ಸೊಸೈಟಿಯ ಅಧ್ಯಕ್ಷೆ ತಿಲಗಾ ಮೊದಲಾದವರು ಉಪಸ್ಥಿತರಿದ್ದರು.

ಸಾಧಕರಿಗೆ ಸನ್ಮಾನ :
ತಾಲೂಕು ಶಿಕ್ಷಕ ರತ್ನ ಪ್ರಶಸ್ತಿ ಪಡೆದ ನಗರದ ಜೆವಿಡಿ ಪ್ರೌಢಶಾಲೆಯ ಶಿಕ್ಷಕ ಹಾಗೂ ರಾಷ್ಟ್ರಮಟ್ಟದಲ್ಲಿ ಅಗ್ರಣೀಯ ಸ್ಥಾನ ಪಡೆದ ಎನ್.ಸಿ.ಸಿ ಘಟಕಾಧಿಕಾರಿ ಕಿಶೋರ ಕಿಂದಳ್ಕರ್ ಮತ್ತು ಕ್ರೈಸ್ತ ಧರ್ಮಗುರು ರೆ.ಫಾ. ಕೆ.ಕ್ರೀಷ್ಟೋಪರ್ ಅವರುಗಳನ್ನು ಕಾಳಿ ಉತ್ಸವ ಸಮಿತಿಯ ಪರವಾಗಿ ಸನ್ಮಾನಿಸಲಾಯಿತು.

ಪತ್ರಕರ್ತ ಸಂದೇಶ್.ಎಸ್.ಜೈನ್ ಸ್ವಾಗತಿಸಿ, ವಂದಿಸಿ ಕಾರ್ಯಕ್ರಮವನ್ನು ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ವಿವಿಧ ಸಾಂಸ್ಕøತಿಕ ಮನೋರಂಜನಾ ಕಾರ್ಯಕ್ರಮಗಳು ಯಶಸ್ವಿಯಾಗಿ ಜರುಗಿ ಅಪಾರ ಜನಾಕರ್ಷಣೆಗೆ ಪಾತ್ರವಾಯಿತು.
ಎಲ್ಲರೊಳಗೊಂದಾಗು ಮಂಕುತಿಮ್ಮ

loading...

LEAVE A REPLY

Please enter your comment!
Please enter your name here