ಸಮಾಜಗಳು ಸಮಾಜದಿಂದ ಸಮಾಜಕ್ಕೆ ಬಾಂಧವ್ಯ ಬೆಸೆಯಬೇಕು.

0
76


ಬೀಳಗಿ 26: ಸಮಾಜಗಳು ಸಮಾಜದಿಂದ ಸಮಾಜಕ್ಕೆ ಬಾಂಧವ್ಯತೆ ಬೆಸೆಯಬೇಕೇ ಹೊರತು ಜಾತಿ, ಧರ್ಮದ ಆಧಾರದ ಮೇಲೆ ಬಾಂಧವ್ಯವನ್ನು ಹಾಳು ಮಾಡಬಾರದೆಂದು ರನ್ನ ಬೆಳಗಲಿಯ ಸಿದ್ಧಾರೂಢ ಮಠದ ಶಂಭುಲಿಂಗ ಆಶ್ರಮದ ಸಿದ್ಧರಾಮ ಶಿವಯೋಗಿ ಸ್ವಾಮಿಗಳು ಹೇಳಿದರು.
ತಾಲೂಕಿನ ಚಿಕ್ಕಾಲಗುಂಡಿ ಗ್ರಾಮದಲ್ಲಿ ಶ್ರೀ ವಂದೇ ವಾಲ್ಮೀಕಿ ಕೋಕಿಲಂ ಸೇವಾ ಸಂಘದ ಆಶ್ರಯದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಉತ್ಸವ ಹಾಗೂ ಉಚಿತ ಸರ್ವಧವರ್i ಸಾಮೂಹಿಕ ವಿವಾಹ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಶಿಕ್ಷಣ ಮತ್ತು ಧರ್ಮಕ್ಕೆ ಮಹತ್ವ ಕೊಡಬೇಕಾಗಿದೆ ಎಂದರು. ಸಾಹಿತ್ಯ, ಸಂಗೀತ ಅಕಾಡೆಮಿ ಅಧ್ಯಕ್ಷ ಸಿದ್ಧರಾಜ ಪೂಜಾರಿ ಉಪನ್ಯಾಸ ನೀಡಿ, ದುಡಿಮೆಯಲ್ಲಿ ವಿಶ್ವಾಸ ಇಡಬೇಕು. ಜೊತೆಗೆ ಶಿಕ್ಷಣ ಪಡೆಯುವ ಮೂಲಕ ನಮ್ಮ ಜೀವನವನ್ನು ನಾವೇ ಉದ್ಧಾರ ಮಾಡಿಕೊಳ್ಳಬೇಕು. ರಾಮಾಯಣ ನಮ್ಮ ಜೀವನದ ವಿಧಾನವಾಗಿದೆ ಎಂದು ಹೇಳಿದರು.
ಮನುಷ್ಯ ಏಕಾಂಗಿಯಾಗಿದ್ದರಿಂದ ಮಾನವೀಯ ಸಂಬಂಧಗಳು ನಾಶವಾಗುತ್ತಿವೆ. ಆದ್ದರಿಂದ ಮಾನವೀಯ ಸಂಬಂಧಗಳು ಉಳಿಯಬೇಕಾದರೆ ರಾಮಾಯಣ ಮಹಾಕಾವ್ಯ ಓದಬೇಕು. ಅದು ಹೃದಯ ವೈಶಾಲ್ಯಕ್ಕೆ ಹೆಸರಾಗಿದೆ. ಎಲ್ಲರೂ ಒಂದೇ ಎಂದು ತಿಳಿದು ಪ್ರಕೃತಿ ಧರ್ಮದಲ್ಲಿ ಬದುಕಬೇಕಾಗಿದೆ ಎಂದು ಹೇಳಿದರು.
ವಾಲ್ಮೀಕಿ ಮತ್ತು ವ್ಯಾಸರು ತಳ ಸಮುದಾಯದವರಾದರೂ `ರಾಮಾಯಣ’, `ಮಹಾಭಾರತ’ದಂತಹ ಮೇರು ಕೃತಿಗಳನ್ನು ವಿಶ್ವಕ್ಕೆ ಕಟ್ಟಿಕೊಟ್ಟಿದ್ದಾರೆ. ಜಾತಿ, ಧರ್ಮದ ಹೆಸರಿನಲ್ಲಿ ಜಗತ್ತು ತುಂಡಾಗುತ್ತಿದೆ. ಸಾಮಾಜಿಕ ವಿಘಟನೆ ಬುದ್ಧಿಜೀವಿಗಳನ್ನು ಚಿಂತೆಗೀಡು ಮಾಡಿದೆ ಎಂದು ಹೇಳಿದರು.
ಸಮಾರಂಭದ ಸಾನಿಧ್ಯ ಮತ್ತು ಅಧ್ಯಕ್ಷತೆಯನ್ನು ರಾಜೇನಹಳ್ಳಿ ಶ್ರೀ ಮಹರ್ಷಿ ವಾಲ್ಮೀಕಿ ಮಹಾಸಂಸ್ಥಾನ ಗುರುಪೀಠದ ವಾಲ್ಮೀಕಿ ಪ್ರಸನ್ನಾನಂದಪುರಿ ಸ್ವಾಮಿಗಳು ವಹಿಸಿ ಮಾತನಾಡಿ, ರಾಜಕಾರಣಿಗಳ ಆಸೆ, ಆಮಿಷಗಳಿಗೆ ಬಲಿಯಾಗಿ ತಮ್ಮತನವನ್ನು ಕಳೆದುಕೊಳ್ಳದೇ, ಪ್ರಾಮಾಣಿಕರನ್ನು ಗುರ್ತಿಸುವ ಕೆಲಸ ಮಾಡಬೇಕು. ಸಾಂಸ್ಕøತಿಕ ನಾಯಕರ ಹೆಸರಿನಲ್ಲಿ ಕೆಲವು ಸಮಾಜಗಳು ಸಂಘಟಿತವಾಗುತ್ತಿವೆ ಎಂದು ಹೇಳಿದರು.
ಧರ್ಮವನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದರಿಂದ ನಮ್ಮ ದೇಶದಲ್ಲಿ ದೇವರು ಮತ್ತು ಧರ್ಮದ ಹೆಸರಿನಲ್ಲಿ ನಡೆದಂತ ಘಟನೆಗಳು ಜಗತ್ತಿನ ಇನ್ಯಾವ ದೇಶದಲ್ಲೂ ನಡೆದಿಲ್ಲವೆಂದು ವಿಷಾಧಿಸಿದರಲ್ಲದೆ, ಜಯಂತಿ ನೆಪದಲ್ಲಿ ದಾರಿ ತಪ್ಪಿಸುವ ಕೆಲಸಗಳು ಜರುಗುತ್ತಿವೆ. ಸಂಸ್ಕಾರಯುತ ಜಯಂತಿ ಆಚರಿಸಿದರೆ ಅರ್ಥಪೂರ್ಣವಾಗಿರುತ್ತವೆ ಎಂದು ಹೇಳಿದರು.
ಇದಕ್ಕೂ ಪೂರ್ವ ವಾಲ್ಮೀಕಿ ಮಹರ್ಷಿ ಭಾವಚಿತ್ರದ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಯಲ್ಲಿ ಸಕಲ ವಾದ್ಯ ವೈಭಗಳೊಂದಿಗೆ ಜರುಗಿತು. ನಂತರ ದಾಂಪತ್ಯಕ್ಕೆ ಕಾಲಿಟ್ಟ ಒಂದು ಜೋಡಿಗೆ ಶ್ರೀಗಳು, ಗುರುಹಿರಿಯರು ಅಕ್ಷತೆ ಹಾಕಿ, ಆಶೀರ್ವದಿಸಿ ಶುಭ ಕೋರಿದರು. ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಿ, ಗೌರವಿಸಲಾಯಿತು.
ರವಿಸಂಜಯ ಎಸ್. ಸಾವಳಗಿಮಠ ನೇತೃತ್ವ ವಹಿಸಿದ್ದರು. ಅತಿಥಿಗಳಾಗಿ ಗೋವಿಂದಪ್ಪ ಗುಜ್ಜನ್ನವರ, ಬೀರಪ್ಪ ಪೂಜಾರಿ, ಎಂ. ವಿ. ಹೋಳಿ, ಡಿ. ಆರ್. ದಂಡಪ್ಪನವರ, ರಾಮಣ್ಣ ಪೂಜಾರಿ, ಆರ್. ಎಚ್. ಪಾಟೀಲ, ಪ್ರಾಚಾರ್ಯ ಪರಮೇಶ್ವರ ತೇಲಿ, ಹನಮಂತ ನೆನೆನ್ನಿ, ಹಸನಸಾಬ ಮುಂಡಗನೂರ, ಎಂ. ಬಿ. ಪೂಜಾರಿ, ರಮೇಶ ನಾಯ್ಕರ್, ಸಿಡಿಪಿಒ ಕಾರ್ಯಾಲಯದ ಸುಜಾತಾ ರಜಪೂತ, ಆರೋಗ್ಯ ಇಲಾಖೆಯ ಜಾಧವ ಸೇರಿದಂತೆ ಮತ್ತಿತರರು ಆಗಮಿಸಿದ್ದರು.
ಮಲ್ಲು ವಿ ಹೋಳಿ ಸ್ವಾಗತಿಸಿದರು. ಪಿ. ಎಫ್. ಸನ್ನಿ ನಿರೂಪಿಸಿದರು. ಭೀಮಸಿ ನಾಯ್ಕರ್ ವಂದಿಸಿದರು.

loading...

LEAVE A REPLY

Please enter your comment!
Please enter your name here