ಕಷ್ಟ ಕೊಟ್ಟರೂ ಜಗತ್ತಿಗೆ ಒಳಿತು ಮಾಡಲು ಶ್ರಮಿಸಿದ ಏಸು: ಬಯ್ಯಾಪುರ

0
49


ಕುಷ್ಟಗಿ : ತಮ್ಮ ಕೊನೆಯುಸಿರಿರುವ ವರೆಗೂ ತಮಗೆ ಎಂಥಹ ಕಷ್ಟ ಕೊಟ್ಟರೂ ಜಗತ್ತಿಗೆ ಒಳಿತನ್ನು ಮಾಡು ದೇವನೇ ಎಂದು ಪ್ರಾರ್ಥಿಸಿದ ಮಹಾನ್ ವ್ಯಕ್ತಿ ಏಸುಕ್ರಿಸ್ತರು ಎಂದು ಮಾಜಿ ಸಚಿವ ಅಮರೇಗೌಡ ಬಯ್ಯಾಪುರ ಹೇಳಿದರು.
ಪಟ್ಟಣದ ಸ್ಪಿರಿಟ್ಯೂವಲ್ ಸಂಸ್ಥೆ ವತಿಯಿಮದ ಹಮ್ಮಿಕೊಂಡಿದ್ದ ಕ್ರಿಸ್‍ಮಸ್ ಹಬ್ಬದ ಆಚರಣೆ ಕಾರ್ಯಕ್ರಮವ್ನನು ಉದ್ಘಾಟಿಸಿ ಅವರು ಮಾತನಾಡುತ್ತಾ ಜಗತ್ತಿನಲ್ಲಿ ಅನೇಕ ಧರ್ಮಗಳು, ನಡೆ ನುಡಿಗಳು ಇದ್ದರೂ ಸಹ ಅವುಗಳ ಸಾರ ಮಾನವ ಕುಲಕ್ಕೆ ಒಂದೆ ಆಗಿದೆ. ಪ್ರತಿಯೊಬ್ಬರೂ ನಾವೆಲ್ಲ ಒಂದು, ಈ ಸೃಷ್ಠಿಕರ್ತನೊಬ್ಬನೇ ನಾಮ ಹಲವು ಎಂಬ ವಿಷಯವನ್ನು ಅರಿತರೆ ಸಾಕು ಪ್ರತಿಯೊಬ್ಬರೂ ತಮ್ಮ ಜೀವನದ ಸವಿಯನ್ನು ಸವಿಯಬಹುದಾಗಿದೆ. ಏಸು ಕ್ರಿಸ್ತರೂ ಸಹ ಮಹಾನ್ ಮಾನವತಾವಾದಿಯಾಗಿದ್ದು. ತಮ್ಮ ಪವಾಡಗಳ ಮೂಲಕ ಅದ್ಭುತ ದೇವ ಮಾನವ ಎನಿಸಿಕೊಂಡರು. ತಮ್ಮನ್ನು ಕಷ್ಟದ ಕೂಪಕ್ಕೆ ತಳ್ಳಿ ಜೀವಂತ ಕೊಂದರೂ ಓ ದೇವರೆ ಈ ಮಾನವರಿಗೆ ತಿಳುವಳಿಕೆ ಕಮ್ಮಿ, ಇವರಿಗೆ ಒಳ್ಳೆಯದನ್ನು ಮಾಡು ಎಂದು ಹರಸಿದ ಕರುಣಾಮಯಿಯಾಗಿದ್ದಾರೆ. ಅವರ ಆದರ್ಶ ಹಾಗೂ ಸಂದೇಶದಂತೆ ನಮ್ಮ ಬದುಕನ್ನು ರೂಪಿಸಿಕೊಂಡು ಉತ್ತಮ ಪ್ರಜೆಗಳಾಗಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಸ್ಪಿರಿಟ್ಯೂವಲ್ ಸಂಸ್ಥೆಯ ಮುಖ್ಯಸ್ಥ ಎಸ್.ಕೆ. ಜೋಸ್, ಪುರಸಭೆ ಅಧ್ಯಕ್ಷೆ ಮಂಜುಳಾ ನಾಗರಾಳ, ಮುಖ್ಯಾಧಿಕಾರಿ ನಬೀಸಾಬ ಖುದಾನವರ, ಸ್ಥಾಯಿಸಮಿತಿ ಅಧ್ಯಕ್ಷ ಕಲ್ಲೇಶ ತಾಳದ, ಸದಸ್ಯ ಮೈನುದ್ದೀನ್ ಮುಲ್ಲಾ, ಹಾಲು ಒಕ್ಕೂಟದ ನಿರ್ದೇಶಕ ಜಯತೀರ್ಥ ದೇಸಾಯಿ ಹಾಗೂ ಇತರರು ಇದ್ದರು.
ಎಲ್ಲರೊಳಗೊಂದಾಗು ಮಂಕುತಿಮ್ಮ

loading...

LEAVE A REPLY

Please enter your comment!
Please enter your name here