ಸಂಭ್ರಮದಿಂದ ಜರುಗಿದ ಗಣಪತಿ ಹೋಮ, ಸುಬ್ರಹ್ಮಣ್ಯ ಸ್ವಾಮಿ ಮೆರವಣಿಗೆ

0
76


ಕುಷ್ಟಗಿ : ಪಟ್ಟಣದ ವಿರಮಾತಾ ಸಾ ಮಿಲ್‍ನಲ್ಲಿ ಅಯ್ಯಪ್ಪ ಸ್ವಾಮಿ ಮಾಲಾಧಾರಣೆ ಗುರುಸ್ವಾಮಿಗಳಾದ ಮಲ್ಲಿಕಾರ್ಜುನ ಸ್ವಾಮಿ ಅವರ ನೇತೃತ್ವದಲ್ಲಿ ಇಂದು ಗಣಪತಿ ಹೋಮ ಹಾಗೂ ಸುಬ್ರಹ್ಮಣ್ಯಸ್ವಾಮಿ ಮೆರವಣಿಗೆಯನ್ನು ಅತ್ಯಂತ ಸಂಭ್ರಮದಿಂದ ನೆರವೇರಿಸಲಾಯಿತು.
ಈ ಕುರಿತು ಮಲ್ಲಿಕಾರ್ಜುನ ಗುರುಸ್ವಾಮಿ ಮಾತನಾಡಿ ಪ್ರತೀ ವರ್ಷದಂತೆ ಈ ವರ್ಷವೂ ಅಯ್ಯಪ್ಪ ಮಾಲಾಧಾರಿಗಳು ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿದ್ದು, ಶ್ರದ್ಧಾ ಭಕ್ತಿಯಿಂದ ಪೂಜೆಯಲ್ಲಿ ಪಾಲ್ಗೊಂಡು ತ್ರಿಲೋಕ ವಂದಿತ ಭಗವಾನ್ ಅಯ್ಯಪ್ಪ ಸ್ವಾಮಿಯ ಕೃಪೆಗೆ ಪಾತ್ರರಾಗಿದ್ದಾರೆ. ಅಲ್ಲದೆ ಇಂದು ಶ್ರೀ ಗಣಪತಿ ಪೂಜೆ ಹಾಗೂ ಸುಬ್ರಹ್ಮಣ್ಯಸ್ವಾಮಿ ಪೂಜೆ ನೆರವೇರಿಸಲಾಗುತ್ತಿದ್ದು ಮೆರವಣಿಗೆಯನ್ನು ಪಟ್ಟಣದ ಬುತ್ತಿ ಬಸವೇಶ್ವರ ದೇವಸ್ಥಾನದಿಂದ ಹೊರಟು ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಸನ್ನಿಧಿಯನ್ನು ಸೇರಲಾಗುವುದು. ನಾಳೆಯ ದಿನ ಅಂದರೆ ಡಿ.27ರಂದು ಭಾನುವಾರ ಸಂಜೆ 7-00ಕ್ಕೆ ಅಯ್ಯಪ್ಪಸ್ವಾಮಿಯ ಮಂಡಲ ಪೂಜಾ ಕಾರ್ಯಕ್ರಮ ನೆರವೇರಿಸಲಾಗುವುದು. ಈ ಕಾರ್ಯಕ್ರಮಕ್ಕೆ ಮಾಲೆ ಧರಿಸಿದ ಎಲ್ಲಾ ಅಯ್ಯಪ್ಪ ಸ್ವಾಮಿಗಳು, ಊರಿನ ಸಕಲ ಭಕ್ತಾದಿಗಳು ಈ ಕಾರ್ಯಕ್ರಮಕ್ಕೆ ಆಗಮಿಸಿ ಅಯ್ಯಪ್ಪ ಸ್ವಾಮಿ ಕೃಪೆಗೆ ಪಾತ್ರರಾಗಬೇಕಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಮಾಲಾಧಾರಿಗಳಾದ ನಿಂಗರೆಡ್ಡಿ ಮೇಸ್ತ್ರಿ, ಸತೀಶ ಬ್ಯಾಳಿ, ಸಂತೋಷ, ನಾಗರಾಜ ಬಡಿಗೇರ, ಮಂಜುನಾಥ ಚೂರಿ, ಫಕೀರಪ್ಪ, ಶಿವಕುಮಾರ, ಬಸವರಾಜ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ಎಲ್ಲರೊಳಗೊಂದಾಗು ಮಂಕುತಿಮ್ಮ

loading...

LEAVE A REPLY

Please enter your comment!
Please enter your name here