ವಿಜಯಪುರ ಕ್ಷೇತ್ರದಿಂದ ವಿಧಾನ ಪರಿಷತ್‍ಗೆ ಎಸ್.ಆರ್.ಪಾಟೀಲ-ಯತ್ನಾಳ ಆಯ್ಕೆ

0
54


ವಿಜಯಪುರ : ವಿಜಯಪುರ-ಬಾಗಲಕೋಟ ಅವಳಿ ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳಿಂದ ವಿಜಯಪುರ ವಿಧಾನ ಪರಿಷತ್ ದ್ವಿಸದಸ್ಯ ಸ್ಣಾಗಳಿಗೆ ನಡೆದ ಚುನಾವಣೆಯಲಿ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿ ಸಚಿವ ಎಸ್.ಆರ್.ಪಾಟೀಲ, ಪಕ್ಷೇತರ ಅಭ್ಯರ್ಥಿ ಬಸನಗೌಡ ಪಾಟೀಲ ಯತ್ನಾಳ ಅವರು ಆಯ್ಕೆಯಾಗಿದ್ದಾರೆ.
ಕಾಂಗ್ರೆಸ್‍ನ ಎಸ್.ಆರ್.ಪಾಟೀಲ ಅವರು ವಿಧಾನ ಪರಿಷತ್‍ಗೆ ಈ ಕ್ಷೇತ್ರದಿಂದ ಆಯ್ಕೆಯಾಗಿದ್ದು ಇದು ನಾಲ್ಕನೇ ಬಾರಿ. ಇವರು ಈ ಚುನಾವಣೆಯಲ್ಲಿ ಪ್ರಥಮ ಪ್ರಾಶಸ್ತ್ಯದ ಮತಗಳೊಂದಿಗೆ ಆಯ್ಕೆಯಾಗಿದ್ದು ವಿಶೇಷ. ಪಕ್ಷೇತರ ಅಬ್ಯರ್ಥಿ ಯತ್ನಾಳ ಅವರು ಇದೇ ಪ್ರಥಮ ಬಾರಿ ವಿಧಾನ ಪರಿಷತ್‍ಗೆ ಪ್ರವೇಶ ಪಡೆದಿದ್ದಾರೆ.
ಈ ಚುನಾವಣೆಯಲ್ಲಿ ಬಿಜೆಪಿ ಅಧಿಕೃತ ಅಭ್ಯರ್ಥಿ ಜಿ.ಎಸ್.ನ್ಯಾಮಗೌಡ ಅವರು ಪರಾಭವಗೊಂಡಿದ್ದು, ಬಿಜೆಪಿಗೆ ಭಾರೀ ಮುಖಭಂಗವಾದಂತಾಗಿದೆ. ದ್ವಿಸದಸ್ಯ ಸ್ಥಾನಗಳಿದ್ದರೂ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್ ತಲಾ ಅಭ್ಯರ್ಥಿಯನ್ನು ಮಾತ್ರ ಕಣಕ್ಕಿಳಿಸಿದ್ದವು. ಜೆಡಿಎಸ್ ಹಿಂದುಳಿದ ವರ್ಗಕ್ಕೆ ಪ್ರಾತಿನಿದ್ಯ ನೀಡಿ ಕಾಂತಪ್ಪ ಇಂಚಗೇರಿ ಅವರನ್ನು ಕಣಕ್ಕಿಳಿಸಿತ್ತು. ಅವರೂ ಸಹ ಈ ಚುನಾವಣೆಯಲ್ಲಿ ಸೋಲು ಅನುಭವಿಸಿದರು. ಐವರು ಪಕ್ಷೇತರ ಅಭ್ಯರ್ಥಿಗಳು ಸೇರಿದಂತೆ ಒಟ್ಟು ಎಂಟು ಜನ ಅಭ್ಯರ್ಥಿಗಳು ಚುನಾವಣಾ ಕಣದಲ್ಲ್ಲಿದ್ದರು.
ಸಚಿವ ಎಸ್.ಆರ್.ಪಾಟೀಲ ಮೊದಲ ಪ್ರಾಶ್ಯಸ್ತ ಮತವಾಗಿ 3362 ಮತಗಳು ಅಂದರೆ 3,36,200 ಮತಗಳ ಮೌಲ್ಯ ಪಡೆದರೆ, ಮೊದಲ ಸುತ್ತಿನಲ್ಲಿ ಪಕ್ಷೇತರ ಪಕ್ಷೇತರ ಅಭ್ಯರ್ಥಿ ಬಸನಗೌಡ ಆರ್. ಪಾಟೀಲ 2380 ಮತಗಳನ್ನು ಪಡೆದರಾದರೂ ಗೆಲುವಿಗೆ ಎರಡನೇ ಸುತ್ತಿನ ಪ್ರಾಶ್ಯಸ್ತ ಮತಗಳನ್ನು ಪಡೆಯಬೇಕಾಯಿತು. ಎರಡನೇ ಸುತ್ತಿನಲ್ಲಿ 2,97,760 ಮೌಲ್ಯಗಳ ಮತಗಳಿಸಿ ವಿಜೇತರಾದರು.
8071 ಮತಗಳು ಚಲಾವಣೆಯಾಗಿದ್ದು, 428 ಮತಗಳು ತಿರಸ್ಕøತಗೊಂಡು, 7643 ಮತಗಳು ಏಣಿಕೆಗೆ ಪರಿಗಣಿಸಿದ್ದು, ಈ ಪೈಕಿ ಮೊದಲ ಪ್ರಾಶ್ಯಸ್ತದ ಮತಗಳ ಹಂಚಿಕೆ ಅನುಸಾರ ಕಾಂಗ್ರೆಸ್ ಪಕ್ಷದ ಎಸ್.ಆರ್.ಪಾಟೀಲ 3362 ಮತ, ಪಕ್ಷೇತರ ಅಭ್ಯರ್ಥಿ ಬಸನಗೌಡ ಪಾಟೀಲ ಯತ್ನಾಳ 2380, ಬಿಜೆಪಿ ಅಭ್ಯರ್ಥಿ ಜಿ.ಎಸ್.ನ್ಯಾಮಗೌಡ 1740, ಜೆಡಿಎಸ್ ಅಭ್ಯರ್ಥಿ ಕಾಂತಪ್ಪ ಶಂಕ್ರಪ್ಪ ಇಂಚಗೇರಿ, 112, ಪಕ್ಷೇತರ ಅಭ್ಯರ್ಥಿ ಟಿ.ಕೆ.ದಾಸರ 19, ಪರಶುರಾಮ ಎಲ್. ನೀಲನಾಯ್ಕ 17, ಮಲ್ಲಿಕಾರ್ಜುನ ಭೀಮಪ್ಪ ಕೆಂಗನಾಳ 10, ಎಚ್.ಎಲ್.ಹಾವರಗಿ 3, ಮತಗಳನ್ನು ಪಡೆದರು. ನೋಟಾಕ್ಕೆ ಯಾವುದೇ ಮತ ಚಲಾವಣೆಯಾಗಿಲ್ಲ.


ಮೊದಲ ಸುತ್ತಿನಲ್ಲಿ ಮತಗಳ ಮೌಲ್ಯ ಪರಿಗಣಿಸಿದಾಗ ಎಸ್.ಆರ್.ಪಾಟೀಲ ಅವರಿಗೆ 336200, ಬಸನಗೌಡ ಪಾಟೀಲ ಅವರಿಗೆ 238000, ಕಾಂತಪ್ಪ ಇಂಚಗೇರಿ ಅವರಿಗೆ 112000, ಜಿ.ಎಸ್.ನ್ಯಾಮಗೌಡ ಅವರಿಗೆ 174000, ಟಿ.ಕೆ.ದಾಸರ ಅವರಿಗೆ 1900, ಪರಶುರಾಮ ನೀಲನಾಯ್ಕ 1700, ಮಲ್ಲಿಕಾರ್ಜುನ ಕೆಂಗನಾಳ ಅವರಿಗೆ 1000, ಎಚ್.ಎಲ್.ಹಾವರಿಗೆ ಅವರಿಗೆ 300 ಮೌಲ್ಯದ ಮತಗಳು ಹಂಚಿಕೆಯಾಗಿವೆ.
ಎರಡನೇ ಸುತ್ತಿನಲ್ಲಿ ಪ್ರತಿ ಮತಕ್ಕೆ 36 ಮೌಲ್ಯ ನಿಗದಿಯಾಗಿದ್ದು, ಅದರನ್ವಯ ಕಾಂತಪ್ಪ ಇಂಚಗೇರಿ ಅವರಿಗೆ 13648, ಜಿ.ಎಸ್.ನ್ಯಾಮಗೌಡ 189912, ಎಸ್.ಆರ್.ಪಾಟೀಲ 254767, ಟಿ.ಕೆ.ದಾಸರ 2224, ಪರಶುರಾಮ ನೀಲನಾಯ್ಕ 2312, ಬಸನಗೌಡ ಪಾಟೀಲ 297760, ಮಲ್ಲಿಕಾರ್ಜುನ ಕೆಂಗನಾಳ 1144, ಎಚ್.ಎಲ್.ಹಾವರಗಿ 444, ಸೇರಿದಂತೆ 843644 ಮತಗಳು ಹಂಚಿಕೆಯಾಗಿವೆ.

loading...

LEAVE A REPLY

Please enter your comment!
Please enter your name here