ವಿಧಾನ ಪರಿಷತ್‍ಗೆ ಸತತ ನಾಲ್ಕನೇ ಬಾರಿ ಆಯ್ಕೆ ಅವಳಿ ಜಿಲ್ಲೆಯ ಜನತೆಗೆ ಋಣಿಯಾಗಿದ್ದೇನೆ : ಎಸ್.ಆರ್.ಪಾಟೀಲ

0
46


ವಿಜಯಪುರ : ನನ್ನನ್ನು ವಿಧಾನ ಪರಿಷತ್‍ಗೆ ಸತತ ನಾಲ್ಕನೇ ಬಾರಿಗೆ ಆಯ್ಕೆ ಮಾಡಿದ ಅಖಂಡ ವಿಜಯಪುರ ಜಿಲ್ಲೆಯ ಜನತೆಯ ಋಣ ದೊಡ್ಡದು, ಅವರ ಋಣ ತೀರಿಸಲು ಆಗುವುದಿಲ್ಲ. ಆದರೆ ಅವರ ಸಕಲ ಬೇಡಿಕೆಗಳ ಈಡೇರಿಕೆಗೆ ಸದಾ ಶ್ರಮಿಸಿ ಅಭಿವೃದ್ಧಿಯತ್ತ ಜಿಲ್ಲೆಯನ್ನು ಕೊಂಡೊಯ್ಯುತ್ತೇನೆ ಎಂದು ಹಾಲಿ ಸಚಿವ ವಿಧಾನಪರಿಷತ್ತಿನ ಚುನಾವಣೆಯಲ್ಲಿ ಜಯ ಸಾಧಿಸಿದ ಕಾಂಗ್ರೆಸ್ ಅಭ್ಯರ್ಥಿ ಎಸ್.ಆರ್.ಪಾಟೀಲ ಪ್ರತಿಕ್ರಿಯಿಸಿದರು.
ಇಲ್ಲಿನ ವಿ.ಭ.ದರಬಾರ ಹೈಸ್ಕೂಲ್ ಆವರಣದಲ್ಲಿ ಬುಧವಾರ ನಡೆದ ವಿದಾನ ಪರಿಷತ್ ಚುನಾವಣೆಯ ಮತ ಎಣಿಕೆ ನಡೆದು ಫಲಿತಾಂಶ ಹೊರಬಂದ ಬಳಿಕ ಗೆಲುವಿನ ನಗೆ ಬೀರುತ್ತ ಅವರು ಮಾಧ್ಯಮ ಪ್ರಾತಿನಿಧಿಗಳೊಂದಿಗೆ ಮಾತನಾಡಿ ಹರ್ಷ ವ್ಯಕ್ತಪಡಿಸಿದರು.
ಜಿಲ್ಲೆಯ ಜನತೆ ಸತತ ನಾಲ್ಕನೇ ಬಾರಿ ಮತ್ತೆ ತಮ್ಮ ಸೇವೆ ಸಲ್ಲಿಸಲು ಸದಾವಕಾಶ ಕಲ್ಪಿಸಿದ್ದಾರೆ. ಜೀವಮಾನದಲ್ಲಿ 30 ವರ್ಷಗಳ ಕಾಲ ಅಖಂಡ ಜಿಲ್ಲೆಯನ್ನು ಪ್ರತಿನಿಧಿಸಿದ ತೃಪ್ತಿ ಇದೆ. ಮುಂಬರುವ ದಿನಗಳಲ್ಲಿ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಪ್ರಾಮಾಣಿಕ ಸೇವೆ ಸಲ್ಲಿಸುವುದಾಗಿ ತಿಳಿಸಿದರು.
ಕಳೆದ ಮೂರು ಅವಧಿಗಳಿಗಿಂತಲೂ ಈ ಬಾರಿ ಭಾರಿ ತೀವ್ರತರವಾದ ಪೈಪೆÇೀಟಿ ಎದುರಿಸುವಂತಾಗಿತ್ತು. ಬಿಜೆಪಿ ಬಂಡಾಯ ಅಭ್ಯರ್ಥಿ ಕಣಕ್ಕೆ ಇಳಿದಿದ್ದರಿಂದ ಸಹಜವಾಗಿಯೇ ತುರುಸಿನ ಸ್ಪರ್ಧೆ ಏರ್ಪಟ್ಟಿತ್ತು. ಆದರೆ, 3362 ಮತ ನೀಡುವ ಮೂಲಕ ಮೊದಲ ಸುತ್ತಿನಲ್ಲೇ ಆಯ್ಕೆಯಾಗುವಂತೆ ಜಿಲ್ಲೆಯ ಜನತೆ ಮತ ನೀಡಿ ಆಶೀರ್ವದಿಸಿದ್ದಾರೆ. ಇಡೀ ಬದುಕಿನುದ್ದಕ್ಕೂ ಈ ಸುವರ್ಣ ಕ್ಷಣಗಳನ್ನು ಮರೆಯಲಾರೆ. ಈ ನನ್ನ ಆಡಳಿತಾವಧಿಯಲ್ಲಿ ಜಿಲ್ಲೆಯ ಎಲ್ಲ ಅಭಿವೃದ್ಧಿ ಕಾರ್ಯಗಳಿಗೆ ಮುಖ್ಯ ವೇದಿಕೆಯಾಗಿ ನಿಲ್ಲುತ್ತೇನೆ ಎಂದರು.
ಚುನಾವಣೆಗೂ ಮುನ್ನ ಜಿಲ್ಲೆಯ ಜನತೆಗೆ ನೀಡಿದ ಭರವಸೆಯಂತೆ ಬರುವ ದಿನಗಳಲ್ಲಿ ನಾಮ ನಿರ್ದೇಶಿತ ಸ್ಥಾನಗಳಿಗೆ ಮೊದಲ ಪ್ರಾಶಸ್ತ್ಯ ಜಿಲ್ಲೆಯ ಮುಖಂಡರಿಗೆ ನೀಡಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ. ಬಜೆಟ್‍ನಲ್ಲಿ ಹೆಚ್ಚಿನ ಅನುದಾನ ವಿಜಯಪುರಕ್ಕೆ ನೀಡುವಂತೆ ಮುಖ್ಯಮಂತ್ರಿಗಳ ಮೇಲೆ ಒತ್ತಡ ಹೇರಲಾಗುವುದು ಎಂದ ಎಸ್‍ಆರ್, ಕೆಪಿಸಿಸಿ ಅಧ್ಯಕ್ಷ ಸ್ಥಾನ ಮಾತ್ರವಲ್ಲ ಪಕ್ಷದ ವರಿಷ್ಟರು ಯಾವುದೇ ಜವಾಬ್ದಾರಿ ನೀಡಿದರೂ ನಿಭಾಯಿಸಲು ಸಿದ್ಧ ಎಂದು ಅವರು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.

loading...

LEAVE A REPLY

Please enter your comment!
Please enter your name here