ಮಹಾದಾಯಿ ಯೋಜನೆ ಗೋವಾ ಸಿಎಂಗೆ ಸರಕಾರದಿಂದ ಪತ್ರ ರಾಜ್ಯದಲ್ಲಿನ ನೀರು ಬಳಸಿಕೊಳ್ಳಲೂ ಯೋಜನೆಗಳು: ಸಿಎಂ ಸಿದ್ದರಾಮಯ್ಯ

0
64

ಬೆಳಗಾವಿ 05: ಮಹಾದಾಯಿ ಕುಡಿಯುವ ನೀರಿನ ಯೋಜನೆಯ ಬಗ್ಗೆ ಮಾತನಾಡಲು ಸಮಯ ಕೋರಿ ಗೋವಾ ಮುಖ್ಯಮಂತ್ರಿಗಳಿಗೆ ಪತ್ರ ಬರೆಯಲಾಗಿದ್ದು, ಗೋವಾ ಮುಖ್ಯಮಂತ್ರಿಗಳು ಭೇಟಿಗೆ ಸಮಯ ನೀಡಿದರೆ ಸರ್ವಪಕ್ಷಗಳ ನಿಯೋಗದೊಂದಿಗೆ ತೆರಳಿ ಮಾತುಕತೆ ನಡೆಸಲು ಸರಕಾರ ನಿರ್ಣಯಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಅವರು ಸೋಮವಾರ ಜಿಲ್ಲೆಯ ರಾಮದುರ್ಗ ತಾಲೂಕಿನ ಉದಪುಡಿ ಗ್ರಾಮದಲ್ಲಿನ ಶಿವಶಕ್ತಿ ಸಕ್ಕರೆ ಕಾರ್ಖಾನೆ ಆವರಣದಲ್ಲಿ ನಡೆದ ವೀರಭದ್ರೇಶ್ವರ ಏತ ನೀರಾವರಿ ಯೋಜನೆ ಹಾಗೂ ವಿವಿಧ ಇಲಾಖೆಗಳ ವಿವಿಧ ಯೋಜನೆಗಳ ಶಂಕುಸ್ಥಾಪನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸರ್ವಪಕ್ಷಗಳ ನಿಯೋಗದೊಂದಿಗೆ ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿ ಪ್ರಧಾನಿ ಮಧ್ಯೆ ಪ್ರವೇಶಿಸಿ ಸಮಸ್ಯೆಯನ್ನು ಪರಿಹರಿಸುವಂತೆ ಮನವಿ ಮಾಡಿಕೊಳ್ಳಲಾಗಿತ್ತು. ಪ್ರಧಾನಿಯವರು ಗೋವಾ ಹಾಗೂ ಮಹಾರಾಷ್ಟ್ರ ರಾಜ್ಯಗಳ ವಿರೋದ ಪಕ್ಷಗಳ ಜೋತೆ ಮಾತನಾಡುವಂತೆ ತಿಳಿಸಿದರು. ಮಹಾದಾಯಿ ನದಿ ಜೋಡನೆ ವಿಷಯದಲ್ಲಿ ರಾಜ್ಯ ಸರಕಾರ ಸುಮ್ಮನೆ ಕುಂತಿಲ್ಲ. ತಾವು ಗೋವಾ ಸಿಎಂ ಅವರಿಗೆ ಪತ್ರ ಬರೆದಿರುವುದಾಗಿ ಸಿದ್ದರಾಮಯ್ಯ ತಿಳಿಸಿದರು.
ರಾಜ್ಯದಲ್ಲಿ ಬಾಕಿ ಉಳದಿರುವ ನೀರು ಬಳಸಿಕೊಳ್ಳಲೂ ಯೋಜನೆ ರೂಪಿಸಿ ರೈತರಿಗೆ ಕೃಷಿಗೆ ನೀರು, ಜನರಿಗೆ ಕುಡಿಯುವ ನೀರು ನೀಡುವ ಮೊದಲ ಉದ್ದೇಶ ಸರಕಾರದವಾಗಿದೆ. ಕೃಷ್ಣಾ ಮತ್ತು ಕಾವೇರಿ ಜಲಾಯನ ಪ್ರದೇಶಗಳಲ್ಲಿ ಬಾಕಿ ಹಾಗೂ ಹೊಸ ವಿವಿಧ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಸರಕಾರ ಬದ್ದವಾಗಿದೆ ಎಂದರು.
ಚುನಾವಣಾ ಪೂರ್ವದಲ್ಲಿ ತಾವು ಹೋಸಪೆಠೆಯಿಂದ ಕೂಡಲ ಸಂಗಮದ ವರಗೆ ನಡೆದ ಕಾಂಗ್ರೆಸ್ ನಡೆಗೆ ಕೃಷ್ಣೆಯ ಕಡೆಗೆ ಪಾದಯಾತ್ರೆಯ ಸಮಾವೇಶದಲ್ಲಿ ತಾವು ಅಧಿಕಾರಕ್ಕೆ ಬಂದರೆ ರಾಜ್ಯದ ನೀರಾವರಿ ಯೋಜನೆಗಳಿಗೆ ಪ್ರತಿವರ್ಷ 10 ಸಾವಿರ ಕೋಟಿ ಅನುಧಾನ ನೀಡುವುದಾಗಿ ಭರವಸೆ ನಿಡಿದ್ದು. ಅದರಂತೆ ಮೊದಲ ಬಜೆಟ್‍ನಲ್ಲಿ 10 ಸಾವಿರ ಕೋಟಿ, ಎರನೇಯ ಬಜೆಟ್‍ದಲ್ಲಿ 11 ಸಾವಿರ ಕೋಟಿ ನೀಡಿದ್ದು. ಮುಂಬರುವ 3ನೇ ಅಯ್ಯವ್ಯಯದಲ್ಲಿ 12 ಸಾವಿರ ಕೋಟಿ ರೂಗಳನ್ನು ನೀಡುವುದರ ಮೂಲಕ ನೆನೆಗುದ್ದಿಗೆ ಬಿದ್ದಿರುವ ಹಾಗೂ ಬಾಕಿ ಉಳದಿರುವ ನೀರಾವರಿ ಯೋಜನೆಗಳಿಗೆ 33 ಸಾವಿರ ಕೋಟಿ ಹಣ ನೀಡಿದಂತಾಗುತ್ತದೆ ಸಿಎಂ ಹೇಳಿದರು.
ರೈತರಿಗೆ ಎಲೆಲ್ಲಿ ನೀರು ಕೂಡಲು ಸಾಧ್ಯವೋ ಅಲ್ಲಿ ನೀರು ನೀಡುವುದರ ರೈತರ ಆರ್ಥಿಕ ಸ್ಥಿತಿ ಸುದಾರಣೆಯಾಗಲೂ ಸಾಧ್ಯ. ರೈತರು ಆರ್ಥಿಕವಾಗಿ ಸದೃಡವಾದರೆ ರಾಜ್ಯ ಸದೃಡವಾಗಲೂ ಸಾಧ್ಯವಾಗುತ್ತದೆ ಎಂದು ಮುಖ್ಯಮಂತ್ರಿಗಳು ಅಭಿಪ್ರಾಯ ಪಟ್ಟರು.
ಸಾಲಾಪೂರ ಏತ ನೀರಾವರಿ ಯೋಜನೆಯ ಬಗ್ಗೆ ಪ್ರಸ್ತಾವಣೆ ಬಂದಿದ್ದು. ಸರಕಾರ ಗಂಭಿರ ಪರಶೀಲನೆ ನಡೆಸಿ ಯೋಜನೆ ಅನುಷ್ಠಾನಕ್ಕೆ ಪ್ರಯತ್ನಿಸಲಾಗುತ್ತದೆ. ಅಥಣಿ ತಾಲೂಕಿನ ಕೆಂಪವಾಡ ಹಾಗೂ ಬಸವೇಶ್ವರ ಏತ ನೀರಾವರಿ ಯೋಜನೆಗಳಿಗೆ ಹಣದ ಲಭ್ಯತೆ ನೋಡಿಕೊಂಡು ಇವೆರಡು ಯೋಜನೆಗಳನ್ನು ಕೈಗೆತ್ತಿಕೊಳ್ಳುವುದಾಗಿ ಸಿದ್ದರಾಮಯ್ಯ ಬರವಸೆಯನ್ನು ನೀಡಿದರು. ರಾಮದುರ್ಗ ಕ್ಷೇತ್ರದಲ್ಲಿ ಸುಮಾರು 1 ಸಾವಿರ ಕೋಟಿ ರೂಪಾಯಿಗಳ ವಿವಿಧ ಯೋಜನೆಗಳನ್ನು ಜಾರಿಗೋಳಿಸಲಾಗಿದೆ. ಎಲ್ಲ ಯೋಜನೆಗಳ ಅನುಷ್ಠಾನದಲ್ಲಿ ಶಾಸಕ ಅಶೋಕ ಪಟ್ಟಣ ಅವರ ಕೊಡುಗೆ ಅಪಾರವಾಗಿದೆ. ಈ ಎಲ್ಲ ಯೋಜನೆಗಳನ್ನು ಸರಕಾರ ರಾಮದುರ್ಗ ಕ್ಷೇತ್ರದಲ್ಲಿ ಜನತೆಗೆ ನೀಡಿದ ಹೊಸ ವರ್ಷದ ಕೊಡುಗೆಯಾಗಿದೆ ಎಂದು ಸಿಎಂ ಬಣ್ಣಿಸಿದರು.
ಜಲ ಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ ಮಾತನಾಡಿ. ಘಟಪ್ರಭಾ ನದಿಯಿಂದ 2.5 ಟಿಎಂಸಿ ನೀರನ್ನು ಏತ ನೀರಾವರಿ ಯೋಜನೆಗೆ ಬಳಸಿಕೊಳ್ಳಲು ಅನುಮೊದನೆ ನೀಡಲಾಗಿದ್ದು, ಕಾಮಗಾರಿಯನ್ನು ಶೀಘ್ರವಾಗಿ ಆರಂಭಿಸಿ ನಿಗದಿತ ಸಮಯದಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಅಶೋಕ ಪಟ್ಟಣ ಪ್ರಾಸ್ತಾವಿಕವಾಗಿ ಮಾತನಾಡಿ. ರಾಮಗುರ್ದ ತಾಲೂಕು ಬಹಳ ಹಿಂದುಳಿದ ತಾಲೂಕುವಾಗಿದೆ. ಇಲ್ಲಿನ ರೈತರು ಮಳೆಯನ್ನೆ ಅವಲಂಭಿಸಿ ಕೃಷಿ ಮಾಡುತ್ತಿದ್ದು, ಸತ್ತಿಗೇರಿ ಹಾಗೂ ಸಾಲಾಪೂರ ಏತ ನೀರಾವರಿ ಯೋಜನೆಗಳಿಗೆ ಮಂಜೂರು ಮಾಡುವಂತೆ ಮನವಿ ಮಾಡಿಕೋಂಡು, ಸ್ವಾಗತಿಸಿದರು.
ಸಚಿವರಾದ ಎಸ್.ಆರ್.ಪಾಟೀಲ, ಎಚ್.ಸಿ.ಮಹಾದೇವಪ್ಪ, ಸತೀಶ ಜಾರಕಿಹೊಳಿ, ಖಮರುಲ್ಲಾ ಇಸ್ಲಾಂ, ಸಂಸದರಾದ ಸುರೇಶ ಅಂಗಡಿ, ಪ್ರಕಾಶ ಹುಕ್ಕೇರಿ, ಶಾಸಕರಾದ ಮಹಾಂತೇಶ ಕೌಜಲಗಿ, ಫಿರೋಜ ಶೆಠ್, ಜಿಲ್ಲಾ ಪಂಚಾಯತ ಅಧ್ಯಕ್ಷೆ ಮಹಾದೇವಿ ರೋಟ್ಟಿ, ಖಾದಿ ಗ್ರಾಮದ್ಯೋಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಲಕ್ಷ್ಮಣರಾವ ಚಿಂಗಳೆ, ಕರ್ನಾಟಕ ನೀರಾವರಿ ನಿಗಮದ ವ್ಯವಸ್ಥಾಪಕ ಆರ್.ರುದ್ರಯ್ಯಾ, ಮಾಜಿ ಶಾಸಕರಾದ ಡಾ. ಮಹಾದೇವಪ್ಪ ಪಟ್ಟಣ, ಅವರ ಧರ್ಮಪತ್ನಿ ಶ್ರೀಮತಿ ಪಟ್ಟಣ ಸೇರಿದಂತೆ ಮುಂತಾದವರು ವೇದಿಕೆ ಮೇಲೆ ಉಪಸ್ಥಿತರಿದ್ದರು.
=>
ಉದಪುಡಿ ಗ್ರಾಮದ ಶಿವಶಕ್ತಿ ಸಕ್ಕರೆ ಕಾರ್ಖಾನೆ ಆವರಣದಲ್ಲಿ ಸೋಮವಾರ ನಡೆದ ವೀರಭದ್ರೇಶ್ವರ ಏತ ನೀರಾವರಿ ಯೋಜನೆ ಶಂಕುಸ್ಥಾಪನಾ ಸಮಾರಂಭದ ಉದ್ಘಾಟನೆಯ ಪೂರ್ವದಲ್ಲಿ ನಡೆದ ನಾಡಗೀತೆ ಶುರುವಾದ ಸಮಯದಲ್ಲಿ ಎದ್ದುನಿಂತು ಗೌರವ ಸೂಚಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾಡಗೀತೆ ಪ್ರಾರಂಭವಾದ ನಂತರ ಹಿದುಗಡೆ ತಿರುಗಿಕೊಂಡು ಮಾತನಾಡುತ್ತಾ ನಿಂತು ನಾಡಗೀತೆಯ ಶಿಷ್ಟಾಚಾರಕ್ಕೆ ಅಗೌರವ ತೊರುವ ಮೂಲಕ ನಾಡಗೀತೆಗೆ ಅವಮಾನ ಮಾಡಿದ ಘಟನೆ ಜರುಗಿತು.
=>
ವೀರಭದ್ರೇಶ್ವರ ಏತ ನೀರಾವರಿ ಯೋಜನೆಯ ಶಂಕುಸ್ಥಾಪನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಸಚಿವರಾದ ಸತೀಶ ಜಾರಕಿಹೊಳಿ, ಎಚ್.ಕೆ.ಪಾಟೀಲ, ಎಂ.ಬಿ.ಪಾಟೀಲ, ಎಸ್.ಆರ್.ಪಾಟೀಲ, ಎಚ್.ಸಿ.ಮಹದೇವಪ್ಪ ಹಾಗೂ ಖಮರುಲ್ಲಾ ಇಸ್ಲಾಂ ಅವರಿಗೆ ಬೆಳ್ಳಿಗದೆ ನೀಡಿ ಸತ್ಕಾರ ಮಾಡಲಾಯಿತು. ಇದನ್ನು ಕಂಡ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜಿಲ್ಲೆಯ ಜನತೆಯಲ್ಲ ಅಚ್ಚರಿ ವ್ಯಕ್ತಪಡಿಸಿದರು.

loading...

LEAVE A REPLY

Please enter your comment!
Please enter your name here