ರೈತರ ವಿವಿಧ ಬೇಡಿಕೆ ಇಡೇರಿಸುವಂತೆ ಸಿಎಂಗೆ ರೈತರ ಮುತ್ತಿಗೆ ವಿಫಲ

0
26

ಬೆಳಗಾವಿ 05: ರೈತರ ಮೇಲಿನ ಸಾಲಮನ್ನಾ ಹಾಗೂ ಕಳಸಾ – ಬಂಡೂರಿ ಅನುಷ್ಠಾನ ಸೇರಿದಂತೆ ವಿವಿಧ ಬೇಡಿಕೆ ಇಡೇರಿಸುವಂತೆ ಸೋಮವಾರ ನಗರದ ಹೊರ ವಲಯದಲ್ಲಿರುವ ಸಾಂಬ್ರಾ ವಿಮಾನ ನಿಲ್ದಾಣದ ಹತ್ತಿರ ಸುಮಾರು 200ಕ್ಕೂ ಹೆಚ್ಚು ರೈತರು ಮುಖ್ಯಮಂತ್ರಿಗಳಿಗೆ ಮುತ್ತಿಗೆ ಹಾಕಬೇಕೆಂಬ ಪ್ರಯತ್ನ ವಿಫಲವಾಯಿತು.
ರೈತರ ಸಮಸ್ಯೆಯನ್ನು ಮುಖ್ಯಮಂತ್ರಿ ಆಲಿಸಬೇಕೆಂದು ಪಟ್ಟು ಹಿಡಿದ ಪರಿಣಾಮವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಪೊಲೀಸರು ರೈತರ ಕಣ್ತಪ್ಪಿಸಿ ಮಾರ್ಗಬದಲಾವಣೆ ಮಾಡಿ ವಿಶೇಷ ವಿಮಾನದಲ್ಲಿ ಪ್ರಯಾಣಿಸಲು ಅನುಕೂಲಮಾಡಿಕೊಟ್ಟರು. ಆ ಸಂದರ್ಭದಲ್ಲಿ ಮುಖ್ಯಮಂತ್ರಿ ತೆರಳುತ್ತಿದ್ದ ವಿಮಾನಕ್ಕೆ ಕಪ್ಪು ಪಟ್ಟೆ ಕಟ್ಟಿಕೊಂಡು ಸಿಎಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿಯನ್ನು ಮಾರ್ಗಬದಲಿಸಿದ ಪೊಲೀಸ್ ಹಾಗೂ ರೈತರ ನಡುವೆ ಮಾತಿನ ಚಕಮಕಿ ನಡೆಯಿತು.

loading...

LEAVE A REPLY

Please enter your comment!
Please enter your name here