ಇಂದು ಶಬರಿಮಲೆ ಯಾತ್ರೆಗೆ ಬಿಳ್ಕೋಡುವ ಸಮಾರಂಭ

0
66

ಬೆಟಗೇರಿ 05: ಗೋಕಾಕ ತಾಲೂಕಿನ ಬೆಟಗೇರಿಗ್ರಾಮದ 18 ವರ್ಷದ ಶ್ರೀ ಅಯ್ಯಪ್ಪ ಸ್ವಾಮಿಯ ಮಾಲಾಧಾರಿ ಗುರುಸ್ವಾಮಿಗಳು ಪ್ರತಿ ವರ್ಷದ ಸಂಪ್ರದಾಯದಂತೆ ಈ ವರ್ಷವೂಕೂಡಾ ಶ್ರೀ ಅಯ್ಯಪ್ಪ ಸ್ವಾಮಿಯದರ್ಶನಕ್ಕೆ ಶಬರಿಮಲೆಯಯಾತ್ರೆಗೆ ಬಿಳ್ಕೋಡುವ ಸಮಾರಂಭಇದೇ ಜ. 6 ರಂದು ಸಾಯಂಕಾಲ 5 ಗಂಟೆಗೆಸ್ಥಳೀಯ ಅಯ್ಯಪ್ಪ ಸ್ವಾಮಿಯ ಸನ್ನಿದಾನದಆವರಣದಲ್ಲಿವಿಜೃಂಭನೆಯಿಂದ ನಡೆಯಲಿದೆ.
ಸ್ಥಳೀಯ 18 ವರ್ಷದ ಶ್ರೀ ಅಯ್ಯಪ್ಪ ಸ್ವಾಮಿಯ ಮಾಲಾಧಾರಿ ಗುರುಸ್ವಾಮಿಗಳಾದ ಶ್ರೀಕಾಂತ ಪತ್ತಾರಗುರುಸ್ವಾಮಿ, ಬಸವರಾಜ ಬೆಟಗೇರಿಗುರುಸ್ವಾಮಿ, ವೀರನಾಯ್ಕ ನಾಯ್ಕರಗುರುಸ್ವಾಮಿ, ಸುಭಾಷಕರೆನ್ನವರಗುರುಸ್ವಾಮಿ ಹಾಗೂ ಮತ್ತೀತರುಶ್ರೀ ಅಯ್ಯಪ್ಪ ಸ್ವಾಮಿ ಮಾಲಾಧಾರಿ ಗುರುಸ್ವಾಮಿಗಳು, ಮಾಲಾಧಾರಿಗಳು ಸ್ಥಳೀಯ ಅಯ್ಯಪ್ಪ ಸ್ವಾಮಿಯ ಸನ್ನಿದಾನದಲ್ಲಿ ಸಂಪ್ರದಾಯದಂತೆ ಶ್ರೀ ಅಯ್ಯಪ್ಪಸ್ವಾಮಿಯಗದ್ದುಗೆಗೆ ಪೂಜೆ-ಪುನಸ್ಕಾರ ಸಲ್ಲಿಸಿ ನಂತರ ಸ್ಥಳೀಯ ಗ್ರಾಮಸ್ಥರು ಸಡಗರ ಸಂಭ್ರಮದಿಂದ ಶಬರಿಮಲೆಯಯಾತ್ರೆಗೆ ಸ್ಥಳೀಯ ಶ್ರೀ ಅಯ್ಯಪ್ಪ ಸ್ವಾಮಿಯಗುರುಸ್ವಾಮಿ, ಮಾಲಾಧಾರಿಗಳನ್ನು ಬಿಳ್ಕೋಡಲಿದ್ದಾರೆ.
ಸ್ಥಳೀಯ ವಿವಿಧ ಸಂಘ-ಸಂಸ್ಥೆಯ ಪದಾಧಿಕಾರಿಗಳು, ಅಧ್ಯಕ್ಷರು, ಸದಸ್ಯರು, ರಾಜಕೀಯ ಮುಖಂಡರು, ಶ್ರೀ ಅಯ್ಯಪ್ಪ ಸ್ವಾಮಿಯ ಭಕ್ತರು, ಗ್ರಾಮಸ್ಥರು ಉಪಸ್ಥಿತರಿರುವರೆಂದು ಸ್ಥಳೀಯ ಶ್ರೀ ಅಯ್ಯಪ್ಪ ಸ್ವಾಮಿಯ ಸೇವಾ ಸಮಿತಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

loading...

LEAVE A REPLY

Please enter your comment!
Please enter your name here