ಪೊಲೀಸ್ ಸಿಬ್ಬಂದಿಗಳ ಕೊರತೆ ನಿಗಿಸಲು ಶೀಘ್ರವೇ 16 ಸಾವಿರ ಹುದ್ಧೆ ಭರ್ತಿ: ಸಚಿವ ಪರಮೇಶ್ವರ

0
66

ಬೆಳಗಾವಿ 5: ರಾಜ್ಯದಲ್ಲಿರುವ ಪೊಲೀಸ್ ಸಿಬ್ಬಂದಿಗಳ ಕೊರತೆಯನ್ನು ನಿಗಿಸಲು ಸರಕಾರ 16 ಸಾವಿರ ಮುಖ್ಯ ಪೇದೆಗಳ ನೇಮಕ ಪ್ರಕ್ರಿಯೆ ನಡೆಸಲಾಗುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ, ಗೃಹ ಸಚಿವ ಡಾ. ಜಿ.ಪರಮೇಶ್ವರ ಇಂದಿಲ್ಲಿ ಹೇಳಿದರು.
ಅವರು ಮಂಗಳವಾರ ನಗರದ ಹೊರವಲಯದಲ್ಲಿರುವ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತ, ಪೊಲೀಸ್ ಸಿಬ್ಬಂದಿಗಳ ಕೊರತೆ ರಾಜ್ಯದಲ್ಲಿ ತೀವ್ರವಾಗಿ ಕಾಡುತ್ತಿದೆ. ಆದ್ದರಿಂದ ಸರಕಾರ ಬರುವ ದಿನಗಳಲ್ಲಿ 16 ಸಾವಿರ ಮುಖ್ಯ ಪೇದೆಗಳ ನೇಮಕ ಮಾಡಲು ಪ್ರಕ್ರಿಯೆ ಪ್ರಾರಂಭಿಸಿದೆ ಎಂದರು.
ಕಳೆದ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯ ಸೋಲಿಗೆ ಪಕ್ಷದ ಮುಖಂಡರೇ ಪಕ್ಷೇತರ ಅಭ್ಯರ್ಥಿಗೆ ಆಂತರಿಕವಾಗಿ ಬೆಂಬಲ ನೀಡಿದ್ದಾರೆ ಎಂದು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಗೃಹಸಚಿವರು ಪ್ರತಿ ಚುನಾವಣೆಯಲ್ಲಿ ಇಂಥ ಘಟನೆಗಳು ನಡೆಯುತ್ತವೆ. ಕಾಂಗ್ರೆಸ್ ಪಕ್ಷದ ಮುಖಂಡರುಗಳು ಆಂತರಿಕವಾಗಿ ಪಕ್ಷದ ಒಳಗಡೆ ಇದನ್ನೆಲ್ಲ ಪರಿಶೀಲನೆ ಮಡಲಾಗುತ್ತದೆ. ಎಲ್ಲ ಜಿಲ್ಲೆಯ ಜಿಲ್ಲಾಧ್ಯಕ್ಷರಿಂದ ಅಭ್ಯರ್ಥಿಯ ಸೋಲಿನ ಬಗ್ಗೆ ವರದಿಯನ್ನು ತರೆಸಿಕೊಂಡು ಸಮಗ್ರವಾಗಿ ತನಿಖೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ಅವರು ಹೇಳಿದರು.
ಸ್ಥಳೀಯ ಸಂಸ್ಥೆಯ ವಿಧಾನ ಪರಿಷತ್ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಜಯಶಾಲಿಯಾಗಿರುವ ವಿವೇಕರಾವ್ ಪಾಟೀಲ ಅವರು ಕಾಂಗ್ರೆಸ್ ಪಕ್ಷ ತಮನ್ನು ಕರೆದರೆ ಹೊಗಲು ಸಿದ್ದ ಎಂದು ಹೇಳಿದ್ದಾರೆ. ಅವರನ್ನು ತಮ್ಮ ಪಕ್ಷಕ್ಕೆ ಕರೆದುಕೊಳ್ಳುವಿಗರಾ ಎಂದು ಕೇಳಿದ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಪರಮೇಶ್ವರ ಸಧ್ಯದ ಪರಿಸ್ಥಿತಿಯಲ್ಲಿ ವಿವೇಕರಾವ್ ಪಾಟೀಲರನ್ನು ಪಕ್ಷದಲ್ಲಿ ಸೇರಿಸಿಕೊಳ್ಳುವ ಮಾತೇ ಇಲ್ಲ. ನಮ್ಮ ಅಭ್ಯರ್ಥಿ ಸೋಲು ಅನುಭವಿಸಿರುವ ಬಗ್ಗೆ ವರದಿ ತರೆಸಿಕೊಳ್ಳುತ್ತಿದೆವೆ ಎಂದರು.
ಬೆಳಗಾವಿ ನಗರದಲ್ಲಿ ಪದೇ ಪದೇ ಕೋಮು ಗಲಭೆ ನಡೆಯುತ್ತಿರುತ್ತವೆ. ಇದನ್ನು ಯಾವ ರೀತಿ ಮಟ್ಟಹಾಕುತ್ತಿರಿ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಗೃಹ ಸಚಿವರು, ಈಗಾಗಲೇ ಪೊಲೀಸ್ ಇಲಾಖೆಗೆ ಕಾನೂನು ವಿರುದ್ಧವಾಗಿ ನಡೆದುಕೊಳ್ಳುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸರಕಾರ ಸೂಚನೆ ನೀಡಿದೆ ಎಂದು ಅವರು ಹೇಳಿದರು.
ನಗರಾಭಿವೃದ್ಧಿ ಪ್ರಾಧಿಕರಾದ ಅಧ್ಯಕ್ಷರಿಗೆ ಅವಮಾನ
ಕೆಪಿಸಿಸಿ ಅಧ್ಯಕ್ಷ, ಗೃಹಸಚಿವ ಡಾ. ಜಿ.ಪರಮೇಶ್ವರ ಅವರ ಸ್ವಾಗತಕ್ಕಾಗಿ ಆಗಮಿಸಿದ ಬುಡಾ ಅಧ್ಯಕ್ಷ ಯುವರಾಜ್ ಕದಂ ಅವರನ್ನು ಪೊಲೀಸ್ ಸಿಬ್ಬಂದಿಗಳು ಒಳಗಡೆ ಬಿಡದ ಹಿನ್ನೆಲೆಯಲ್ಲಿ ಕಾರ್ಯಕರ್ತರು ಅವರನ್ನು ಒಳಗಡೆ ಬಿಡುವಂತೆ ಒತ್ತಾಯಿಸಿದರೂ ಪೊಲೀಸ್ ಅಧಿಕಾರಿಗಳು ಮಾತ್ರ ಯಾವುದೇ ಮಾತಿಗೆ ಬೆಲೆ ನೀಡದೆ ಅವರನ್ನು ಹೊರಗಡೆ ನಿಲ್ಲಿಸಿ ಅವಮಾನ ಮಾಡಿದ ಘಟನೆ ನಡೆಯಿತು.
ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆಗಮಿಸಿದ ಸಂದರ್ಭದಲ್ಲಿಯೂ ಕಾಂಗ್ರೆಸ್ ಮಹಿಳಾ ಘಟದ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳಕರ ಹಾಗೂ ಕಾರ್ಯಕರ್ತರಿಗೆ ಪೊಲೀಸ್ ಸಿಬ್ಬಂದಿಗಳು ವಿಮಾನ ನಿಲ್ದಾಣದ ದ್ವಾರದಲ್ಲಿಯೇ ನಿಲ್ಲಿಸಿ ಅವಮಾನ ಮಾಡಿದ್ದರು. ಕಾರ್ಯಕರ್ತರಿಗೆ ಕಾಂಗ್ರೆಸ್ ಪಕ್ಷದಲ್ಲಿ ಬೆಲೆ ಇಲ್ಲ ಎಂದು ಬಂದ ಕಾರ್ಯಕರ್ತರು ಮಾತನಾಡಿಕೊಳ್ಳುತ್ತಿದ್ದದ್ದು ಸಾಮಾನ್ಯವಾಗಿತ್ತು.

loading...

LEAVE A REPLY

Please enter your comment!
Please enter your name here