ಸುರೇಶ್ವರ ಮಹಾರಾಜರ ತುಲಾಭಾರ ಕಾರ್ಯಕ್ರಮ

0
67

ಬೆಟಗೇರಿ ಜ.10: ಗೋಕಾಕ ತಾಲೂಕಿನ ತಪಸಿ(ಉದಗಟ್ಟಿ ಕ್ರಾಸ್) ಗ್ರಾಮದ ಶ್ರೀ ರೇವಣಸಿದ್ಧೇಶ್ವರ 17 ನೇ ವರ್ಷದ ಜಾತ್ರಾ ಮಹೋತ್ಸವ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಸ್ಥಳೀಯ ಶ್ರೀ ರೇವಣಸಿದ್ಧೇಶ್ವರ ಮಠದ ಪೀಠಾಧಿಕಾರಿ ಶ್ರೀ ಸುರೇಶ್ವರ ಮಹಾರಾಜರ ತುಲಾಭಾರ ಭಕ್ತಿಯ ಸೇವೆ ಸಡಗರದಿಂದ ನಡೆಯಿತು.
ಗೋಸಬಾಳ ಗ್ರಾಮದ ರಮೇಶ ದಳವಾಯಿ ಕುಟುಂಬದವರಿಂದ ಮತ್ತು ಸಿದ್ದಾರೂಢ ಮಳ್ಳಿಕೇರಿ ಕುಟುಂಬದವರಿಂದ, ನಿಡಗುಂದಿ ಗ್ರಾಮದ ಸಿದ್ರಾಯಿ ನಾಯಿಕ ಕುಟುಂಬದವರಿಂದ ಹಾಗೂ ಹಿಡಕಲ್ ಗ್ರಾಮದ ಹಾಲಪ್ಪ ಕೌಜಲಗಿ ಕುಟುಂಬದವರಿಂದ ಸ್ಥಳೀಯ ಶ್ರೀ ರೇವಣಸಿದ್ಧೇಶ್ವರ ಮಠದ ಪೀಠಾಧಿಕಾರಿ ಶ್ರೀ ಸುರೇಶ್ವರ ಮಹಾರಾಜರ ತುಲಾಭಾರ ಭಕ್ತಿಯ ಸೇವೆ ನೇರವೇರಿಸಿದರು. ನಂತರ ತುಲಾಭಾರ ಸೇವೆ ನೇರವೇರಿಸಿದ ನಾಲ್ವರು ಕುಟುಂಬದ ಸರ್ವ ಸದಸ್ಯರನ್ನು ಶ್ರೀಗಳು ಶಾಲು ಹೊದಿಸಿ ಸತ್ಕರಿಸಿದರು.
ಮ್ಯಾಕಲಮರಡಿ ಪ್ರಾಥಮಿಕ ಕೃಷಿ ಪತ್ತಿನ ಅಧ್ಯಕ್ಷ ಯಲ್ಲಪ್ಪ ಕಂಡೆನ್ನವರ ಹಾಗೂ ಗ್ರಾ.ಪಂ ಉಪಾಧ್ಯಕ್ಷ ಶ್ರೀಕಾಂತ ಕಂಡೆನ್ನವರ ಸೇರಿ ಸ್ಥಳೀಯ ಶ್ರೀ ರೇವಣಸಿದ್ಧೇಶ್ವರ ಮಠದ ಪೀಠಾಧಿಕಾರಿ ಶ್ರೀ ಸುರೇಶ್ವರ ಮಹಾರಾಜರಿಗೆ ಸುಮಾರು 35 ತೊಲೆ ಬೆಳ್ಳಿಯ ಬೆತ್ತ ಕಾಣಿಕೆಯಾಗಿ ನೀಡಿದರು. ಮುಮ್ಮಟಗುಡ್ಡ ಶ್ರೀ ಸಿದ್ಧಾಶ್ರಮದ ಪೀಠಾಧಿಕಾರಿ ಅವದೂಸಿದ್ಧ ಮಹಾರಾಜರು ಈ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದರು.
ಬಸಳಿಗುಂದಿ ಶ್ರೀ ಸಿದ್ಧಾರೂಡ ಮಠದ ಸದಾನಂದ ಮಹಾಸ್ವಾಮಿಜಿ, ಹುಬ್ಬಳ್ಳಿ ರಾಜ ವಿದ್ಯಾಶ್ರಮದ ಷಡಕ್ಷರಿ ದೇವರು, ಕಂಕಣವಾಡಿ ಶ್ರೀ ಮಾರುತಿ ಶರಣರು, ಚಿಪ್ಪಲಕಟ್ಟಿ ಶ್ರೀ ಆತ್ಮಾನಂದ ಮಹಾಸ್ವಾಮಿಜಿ, ಬಿಲಕುಂದಿ ಶಾಂತಮ್ಮ ತಾಯಿ ಮಾತೋಶ್ರೀ, ಗೋಕಾಕ ಜ್ಞಾನಮಂದಿರದ ಸುವರ್ಣಾತಾಯಿ ಹೊಸಮಠ, ತಪಸಿ ಶ್ರೀ ಯಲ್ಲಾಲಿಂಗೇಶ್ವರ ಮಠದ ಜಾನಮ್ಮತಾಯಿ ಮಾತೋಶ್ರೀ ಈ ಸಮಾರಂಭದಲ್ಲಿ ಉಪಸ್ಥಿತರಿದ್ದು ಆಶೀರ್ವಚನ ನೀಡಿ, ನಂತರ ಸ್ಥಳೀಯ ಶ್ರೀ ರೇವಣಸಿದ್ಧೇಶ್ವರ ಜಾತ್ರಾ ಮಹೋತ್ಸವ ಕಾರ್ಯಕ್ರಮಕ್ಕೆ ತನು, ಮನ, ಧನ ನೀಡಿದ ಧಾನಿಗಳಿಗೆ ಹಾಗೂ ಕಾರ್ಯಕ್ರಮಕ್ಕೆ ಆಗಮಿಸಿದ ಸ್ಥಳೀಯ ಹಾಗೂ ಸುತ್ತಮುತ್ತಲಿನ ವಿವಿಧ ಗ್ರಾಮದ ರಾಜಕೀಯ ಮುಖಂಡರಿಗೆ, ವಿವಿಧ ಸಂಘ-ಸಂಸ್ಥೆಯ ಪದಾಧಿಕಾರಿಗಳಿಗೆ, ಸದಸ್ಯರಿಗೆ, ಆಶೀರ್ವಾದ, ಸತ್ಕಾರ ಕಾರ್ಯಕ್ರಮ ಈ ಸದಂರ್ಭದಲ್ಲಿ ಜರುಗಿತು.
ಸ್ಥಳೀಯ ಹಾಗೂ ಸುತ್ತಮುತ್ತಲಿನ ವಿವಿಧ ಗ್ರಾಮದ ರಾಜಕೀಯ ಮುಖಂಡರು, ವಿವಿಧ ಸಂಘ-ಸಂಸ್ಥೆಯ ಪದಾಧಿಕಾರಿಗಳು, ಸದಸ್ಯರು, ಗ್ರಾಮಸ್ಥರು, ಸಾವಿರಾರು ಜನ ಸದ್ಭಕ್ತರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಜಗದ್ಗುರು ಶ್ರೀ ರೇವಣಸಿದ್ಧೇಶ್ವರ ದರ್ಶನ ಪಡೆದು ಪುನೀತರಾದರು.

loading...

LEAVE A REPLY

Please enter your comment!
Please enter your name here