ವಿದ್ಯಾರಣ್ಯ ಪದವಿಪೂರ್ವ ಮಹಾವಿದ್ಯಾಲಯದ ಸುವರ್ಣ ಮಹೋತ್ಸವ ವರ್ಷಾಚರಣೆ

0
54


ಧಾರವಾಡ : ಸ್ವಾರ್ಥದ ಸ್ಪರ್ಶವಿಲ್ಲದ ನಿರಪೇಕ್ಷಭಾವದ ಅವರ ಶ್ರಮದ ಬೆವರಿನ ಫಲವಾಗಿ ಉತ್ಕøಷ್ಟ ಶಿಕ್ಷಣ ಸಂಸ್ಥೆಗಳು ಬೆಳೆದು ಎಲ್ಲರ ಗಮನಸೆಳೆದಿವೆ ಎಂದು ವಿಜಯಪುರದ ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯದ ಕುಲಪತಿ ಡಾ.ಮೀನಾ ಚಂದಾವರಕರ ಹೇಳಿದರು.
ಕರ್ನಾಟಕ ಏಜ್ಯಕೇಶನ್ ಬೋರ್ಡಿನ ವಿದ್ಯಾರಣ್ಯ ಪದವಿಪೂರ್ವ ಮಹಾವಿದ್ಯಾಲಯದ ಸುವರ್ಣ ಮಹೋತ್ಸವ ವರ್ಷಾಚರಣೆಯನ್ನು ಹಾಗೂ ಕಾಲೇಜಿನ ದೃಕ್-ಶ್ರವಣ ಕೊಠಡಿಯನ್ನು ಉದ್ಘಾಟಿಸಿ ಮಾತನಾಡಿ, ದೇಶದಲ್ಲಿ ನೆಲ, ಜಲ, ಅರಣ್ಯ, ಖನಿಜವನ್ನೊಳಗೊಂಡ ನೈಸರ್ಗಿಕ ಸಂಪನ್ಮೂಲಗಳ ಜೊತೆಗೆ ಸಮರ್ಥ ರಾಷ್ಟ್ರ ಕಟ್ಟಲು ಅತೀ ಅಗತ್ಯ ಬೇಕಾಗಿರುವ ಸೃಜನಶೀಲ ಮಾನವ ಸಂಪನ್ಮೂಲದ ವಿಕಾಸಕ್ಕೆ ಎಲ್ಲರೂ ಒಗ್ಗೂಡಿ ಶ್ರಮಿಸೋಣ. ನಮ್ಮ ದೇಶದ ಹಿರಿಯರು ಬಹಳ ಮುಂಧೋರಣೆಯಿಂದ ಆಲೋಚಿಸಿ ತ್ಯಾಗ, ಬದ್ಧತೆ ಮತ್ತು ಸಮರ್ಪಣಾ ಮನೋಭಾವದಿಂದ ಅನೇಕ ಶ್ರೇಷ್ಠ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಬೆಳೆಸಿದ್ದಾರೆ. ಅವರ ವಿದ್ಯಾವಿಕಾಸದ ಕನಸುಗಳಲ್ಲಿ ಭಾರತವನ್ನು ಮುನ್ನಡೆಸುವ ಸಮರ್ಥ ಶಿಲ್ಪಿಗಳನ್ನು ಸಿದ್ಧಗೊಳಿಸುವ ಬಹುದೊಡ್ಡ ಆಶಯಗಳಿದ್ದವು. ಎಂದರು.
ಇಂದಿನ ಮಾಹಿತಿ ತಂತ್ರಜ್ಞಾನದ ಡಿಜಿಟಲ್ ಜಗತ್ತಿನ ಎಲ್ಲ ವಿದ್ಯಮಾನಗಳಿಗೆ ಸಮರ್ಥವಾಗಿ ಮತ್ತು ಪರಿಪೂರ್ಣವಾಗಿ ವಿದ್ಯಾರ್ಥಿಗಳು ತೆರೆದುಕೊಳ್ಳಬೇಕಾಗುತ್ತದೆ. ಹಾಗಾಗಿ ಇಂದಿನ ಕಲಿಕೆಯ ಅಗತ್ಯಗಳಲ್ಲಿ ‘ಕಂಪ್ಯೂಟರ್ ಸಾಕ್ಷರತೆ’ಯೂ ಒಳಗೊಂಡಿದೆ. ಬದುಕಿನ ಬಹುಪಾಲು ಕ್ಷೇತ್ರಗಳು ಗಣಕೀಕರಣಗೊಂಡ ಇಂದಿನ ಐ.ಟಿ.ಸಂದರ್ಭದಲ್ಲಿ ಭಾರತದ ವಿದ್ಯಾರ್ಥಿ ಬಳಗ ಹಿಂದೆ ಬೀಳದಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ಎಲ್ಲಾ ಹಂತಗಳ ಬೋಧಕ ವೃಂದದ ಮೇಲಿದೆ ಎಂದರು.
ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳ ಮಧ್ಯೆ ಬಾವನಾತ್ಮಕ ಸಂಬಂಧಗಳು ಇರದೇ ಹೋದಾಗ ಶಿಕ್ಷಕರ ಬೋಧನೆ ಹಾಗೂ ವಿದ್ಯಾರ್ಥಿಗಳ ವ್ಯಾಸಂಗ ಪ್ರಕ್ರಿಯೆಯು ನೈಜನೆಲೆಯಿಂದ ದೂರಸರಿಯುತ್ತದೆ. ಇಂದು ವಿದ್ಯಾರ್ಥಿ ಸಮುದಾಯ ಪಠ್ಯದ ಆಚೆಗೂ ಇರುವ ಓದಿನ ಅನೇಕ ಸಂಗತಿಗಳ ಕಡೆಗೆ ಗಮನಹರಿಸುವುದೇ ಇಲ್ಲ. ವಿದ್ಯಾರ್ಥಿಗಳಲ್ಲಿ ಪುಸ್ತಕ ಪ್ರೀತಿ ಹಾಗೂ ಬರವಣಿಗೆಯ ಹವ್ಯಾಸಗಳನ್ನು ಬೆಳೆಸುವಲ್ಲಿ ವಿದ್ಯಾಸಂಸ್ಥೆಗಳು ಮೊದಲ ಆಧ್ಯತೆ ನೀಡಬೇಕು ಎಂದರು.
ಡಾ.ಕೆ.ಎಸ್.ಆಮೂರ ಅಧ್ಯಕ್ಷತೆವಹಿಸಿದ್ದರು. ಹರ್ಷ ಡಂಬಳ, ಡಾ.ವ್ಹಿ.ಟಿ. ನಾಯಕ, ಪ್ರಿ. ಮೋಹನ ಸಿದ್ಧಾಂತಿ, ಶ್ರೀಕಾಂತ ಪಾಟೀಲ, ಕೆ.ಬಿ.ಕುಲಕರ್ಣಿ, ಪ್ರೊ.ಆನಂದ ಕುಲಕರ್ಣಿ, ಡಾ.ಶರಣಮ್ಮ ಗೋರೇಬಾಳ ವೇದಿಕೆಯಲ್ಲಿದ್ದರು.

loading...

LEAVE A REPLY

Please enter your comment!
Please enter your name here