14 ರಂದು ವಾರ್ಷಿಕ ಕ್ರೀಡಾಕೂಟ

0
29

ಕಾಗವಾಡ 11: ಸ್ಥಳೀಯ ಶಿವಾನಂದ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ವಾರ್ಷಿಕ ಕ್ರೀಡಾ ದಿನಾಚಾರಣೆ ಮತ್ತು ಬಹುಮಾನ ವಿತರಣಾ ಸಮಾರಂಭ ಗುರುವಾರ ದಿ. 14 ರಂದು ಬೆಳಿಗ್ಗೆ 10.00 ಗಂಟೆಗೆ ಜರುಗಲಿದೆ.
ಸಮಾರಂಭದ ದಿವ್ಯ ಸಾನಿಧ್ಯ ಶ್ರೀ ಮಲ್ಲಿಕಾರ್ಜುನ ಆಶ್ರಮ ಟ್ರಸ್ಟ ಗುರುದೇವಾಶ್ರಮ ಕಾಗವಾಡದ ಏಕನ್ಯಾಸಾಧಿಕಾರಿಗಳಾದ ಶ್ರೀ ಯತೀಶ್ವರಾನಂದ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದಾರೆ. ಮಹಾವಿದ್ಯಾಲಯದ ಪ್ರಾಚಾರ್ಯ ಎನ್.ಸಿ ಪಿಸೆ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಕೇರೂರ ಸರ್ಕಾರಿ ಪದವಿಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯರಾದ ಭೀಮಗೌಡಾ ಚೌಗಲೆ, ಕಾಗವಾಡ ಬಿಇಒ ಗುರುನಾಥ ಹೂಗಾರ, ಸಂಸ್ಥೆಯ ಕಾರ್ಯದರ್ಶಿ ಎಸ್.ಆರ್ ಪಾಟೀಲ, ನಿರ್ದೇಶಕ ಎ ಎ ಪಾಟೀಲ, ಪದವಿಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ಸಿ.ಬಿ ನಂದ್ಯಾಳ ಕಾರ್ಯಾಧ್ಯಕ್ಷರು ಪ್ರೊ. ಶ್ರೀಮತಿ ಬಿ.ಆರ್ ಸೈಯದ ಉಪಸ್ಥೀತ ಇರುವರು ಎಂದು ಕ್ರೀಡಾ ಕಾರ್ಯಾಧ್ಯಕ್ಷರಾದ ಪ್ರೋ. ಗಜಾನನ ಮಾಳಿ ತಿಳಿಸಿದರು.

loading...

LEAVE A REPLY

Please enter your comment!
Please enter your name here