ಇಂದು ಸಾಹಿತ್ಯಾನುಸಂಧಾನ ಗೋಷ್ಠಿ

0
22

ಮುನವಳ್ಳಿ  11: ಸಮೀಪದ ಸುಕ್ಷೇತ್ರ ಶ್ರೀ ಗುರು ಕುಮಾರೇಶ್ವರ ವಡಕಹೊಳಿ ಮಠ ನವಿಲುತೀರ್ಥ, ವಟ್ನಾಳ, ಗೊರವನಕೊಳ್ಳದಲ್ಲಿ ಜಾತ್ರಾ ಮಹೋತ್ಸವದ ಅಂಗವಾಗಿ ಸಾಹಿತ್ಯಾನುಸಂಧಾನ ಗೋಷ್ಠಿ ಜ. 12 ರಂದು ಮುಂಜಾನೆ 10 ಗಂಟೆಗೆ ಜರುಗಲಿದೆ. ಕಾರ್ಯಕ್ರಮ ದಿವ್ಯಸಾನಿಧ್ಯವನ್ನು ರಾಮದುರ್ಗದ ಶ್ರೀ ಶಾಂತವೀರ ಮಹಾಸ್ವಾಮಿಗಳು, ಸಾನಿಧ್ಯವನ್ನು ತೆಲಸಂಗದ ಶ್ರೀ ವೀರೇಶ್ವರ ದೇವರು, ನೇತೃತ್ವವನ್ನು ಡಾ. ಅಭಿನವಕುಮಾರ ಸ್ವಾಮಿಗಳು ವಹಿಸುವರು. ಉಪನ್ಯಾಸಕರಾಗಿ ಡಾ. ಎಂ.ಬಿ.ಹೂಗಾರ, ಮುಖ್ಯ ಅತಿಥಿಗಳಾಗಿ ಗಂಗಣ್ಣ ಶಿಂತ್ರಿ, ಎಂ.ಕೆ.ದೇವಣಗಾವಿ, ಉಮೇಶ ಬಾಳಿ, ಜಿಪಂ ಸದಸ್ಯ ರವೀಂದ್ರ ಯಲಿಗಾರ, ಎಂ.ಆರ್.ಗೋಪಶೆಟ್ಟಿ, ಬೆಳಗಲಿ, ದೇವರವರ, ಹಿಪ್ಪರಗಿ ಆಗಮಿಸುವರು. ಸಾಯಂಕಾಲ 4 ಗಂಟೆಗೆ ಪೂಜ್ಯ ಡಾ. ಅಭಿನವ ಶ್ರೀಗಳ ಆಧುನಿಕ ವಚನ ಸಾಹಿತ್ಯ ಕುರಿತು ಉಪನ್ಯಾಸ ಜರುಗಲಿದೆ. ಸಾನಿಧ್ಯವನ್ನು ಸೊರಬದ ಶ್ರೀ ಮಹಾಂತ ಸ್ವಾಮಿಗಳು ತಿಪ್ಪಾಯಿಕೊಪ್ಪದ ಶ್ರೀ ಮಹಾಂತದೇವರು ವಹಿಸುವರು. ಉಪನ್ಯಾಸಕರಾಗಿ ಡಾ. ವೈ.ಎಂ.ಯಾಕೊಳ್ಳಿ, ಡಾ. ರಾಜಶೇಖರ ಇಚ್ಚಂಗಿ, ಮುಖ್ಯ ಅತಿಥಿಗಳಾಗಿ ಈರಣ್ಣ ಅಂಕಲಕೋಟಿ, ಪಾರ್ವತೆವ್ವ ಅಂಕಲಕೋಟಿ, ವಿಕ್ರಮ ದೇಸಾಯಿ, ಶೈಲಜಾದೇವಿ ದೇಸಾಯಿ, ವಿರುಪಾಕ್ಷಗೌಡ ಪಾಟೀಲ, ಸರೋಜಾ ಪಾಟೀಲ, ಸದಾಶಿವ ನ್ಯಾಮಗೌಡ, ಅಪ್ಪಾಸಾಹೇಬ ದೇವರವರ, ಸುರೇಶ ಹಾದಿಮನಿ ಆಗಮಿಸುವರೆಂದು ಪ್ರಕಟಣೆ ತಿಳಿಸಿದೆ.

loading...

LEAVE A REPLY

Please enter your comment!
Please enter your name here