ಮರಾಠಿ ಟೈಗರ್ಸ್ ಚಿತ್ರ ರದ್ದುಗೋಳಿಸುವಂತೆ ಟೋಪಣ್ಣವರ ಆಗ್ರಹ

0
23

ಬೆಳಗಾವಿ 18: ಕನ್ನಡಿಗರ ಭಾವನೆ ಕೆರಳಿಸಲಿರುವ ಮರಾಠಿ ಟೈಗರ್ಸ್ ಚಲನ ಚಿತ್ರವನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿ ಪ್ರದರ್ಶನ ನಡೆಯದಂತೆ ಮಾಡಬೇಕೆಂದು ಕರ್ನಾಟಕ ನವ ನಿರ್ಮಾಣ ಪಡೆಯ ಸಂಸ್ಥಾಪಕ, ಅಧ್ಯಕ್ಷ ರಾಜೀವ ಟೋಪಣ್ಣವರ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು ಜಿಲ್ಲೆಯಲ್ಲಿ ಕನ್ನಡ ಹಾಗೂ ಮರಾಠಿಗರು ಅನೋನ್ಯವಾಗಿದ್ದಾರೆ. ಈ ಚಿತ್ರ ಪ್ರದರ್ಶನಗೊಳ್ಳುವುದರಿಂದ ನಮ್ಮ ಬಾಂಧವ್ಯಕ್ಕೆ ಧಕ್ಕೆ ಉಂಟುಮಾಡುವ ಚಿತ್ರಗಳಿಗೆ ಕತ್ತರಿ ಹಾಕಬೇಕು ಇಲ್ಲವೇ ಆ ಚಿತ್ರವನ್ನು ಸಂಪೂರ್ಣ ಬಂದ್ ಮಾಡಬೇಕಂದು ಅವರು ಈ ಮೂಲಕ ಒತ್ತಾಯಿಸುತ್ತಿದ್ದಾರೆ.
ಮಹಾರಾಷ್ಟ್ರದಿಂದ ಬಂದು ಕರ್ನಾಟಕದ ಗಡಿಭಾಗವಾದ ಬೆಳಗಾವಿಯಲ್ಲಿ ಚಿತ್ರ ಬಗ್ಗೆ ಪ್ರಚಾರ ನೀಡುತ್ತಿದ್ದರೂ ಜಿಲ್ಲಾಡಳಿತ ಮಾತ್ರ ಯಾವುದೇ ಕ್ರಮ ಕೈಗೊಂಡಿಲ್ಲ. ಮರಾಠಿ ಟೈಗರ್ಸ್ ಚಿತ್ರ ಬಿಡುಗಡೆಯಲ್ಲಿ ಕರ್ನಾಟಕದ ಪೊಲೀಸ್ ಇಲಾಖೆ ಹಾಗೂ ಕನ್ನಡಿಗರ ಬಗ್ಗೆ ಅವಹೇಳನಕಾರಿ ದೃಷ್ಯಗಳು ಮೂಡಿ ಬಂದಿವೆ ಎಂದು ಎಲ್ಲರೂ ಆಡಿಕೊಳ್ಳುತ್ತಿದ್ದಾರೆ. ಒಂದು ವೇಳೆ ಚಿತ್ರದಲ್ಲಿ ಕನ್ನಡಿಗರಿಗೆ ಅವಮಾನ ಮಾಡುವ ಇಂಥ ಚಿತ್ರಗಳನ್ನು ಜಿಲ್ಲಾಡಳಿತ ಬಂದ್ ಮಾಡಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಈ ಚಿತ್ರದಲ್ಲಿ ಯಳ್ಳೂರು ನಾಮ ಫಲಕ ತೆರವುಗೊಳಿಸಿದ ಸಂದರ್ಭ ವಿರುವುದರಿಂದ ಕರ್ನಾಟಕ ಪೊಲೀಸ್ ಹಾಗೂ ಸರಕಾರವನ್ನು ಅವಹೇಳನವಾಗಿ ಮೂಡಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಜಿಲ್ಲಾಡಳಿತ ಚಿತ್ರ ಪ್ರದರ್ಶನ ನಡೆಯದಂತೆ ನೋಡಿಕೊಳ್ಳಬೇಕು ಇಲ್ಲದಿದ್ದಲ್ಲಿ ಕನ್ನಡ ಸಂಘಟನೆಗಳೆ ಮರಾಠಾ ಟೈಗರ್ಸ್ ಚಿತ್ರ ಪ್ರದರ್ಶನವನ್ನು ಬಂದ್ ಮಾಡಲಾಗುವುದು ಎಂದು ಟೋಪಣ್ಣವರ ಎಚ್ಚರಿಸಿದ್ದಾರೆ.

loading...

LEAVE A REPLY

Please enter your comment!
Please enter your name here