ಸಮೃದ್ದ ಭಾರತ ನಿರ್ಮಾಣದ ರೂವಾರಿಗಳಾಗಬೇಕು- ಡಾ.ನಾಸಿರಅಹ್ಮದ ಜಂಗೂಭಾಯಿ

0
92


ದಾಂಡೇಲಿ : ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಇದರ ಸಾಂಸ್ಕ್ರತಿಕ, ಕ್ರೀಡಾ ಹಾಗೂ ಯುವ ರೆಡ್ ಕ್ರಾಸ್ ಘಟಕಗಳ ಆಶ್ರಯದಲ್ಲಿ ಸ್ವಾಮಿ ವಿವೇಕಾನಂದರ 153 ನೇ ಜನ್ಮ ದಿನದ ಅಂಗವಾಗಿ “ರಾಷ್ಟ್ರೀಯ ಯುವ ಸಪ್ತಾಹ” ಆಚರಣೆಯ ನಿಮಿತ್ತ ವಿದ್ಯಾರ್ಥಿಗಳಿಂದ ಜಾಥಾ ಮತ್ತು ಸ್ಥಳೀಯ ಸಾರ್ವಜನಿಕ ಆಸ್ಪತ್ರೆಯ ರೋಗಿಗಳಿಗೆ ಹಣ್ಣು -ಹಂಪಲು ವಿತರಿಸುವ ಕಾರ್ಯಕ್ರಮವು ಮಂಗಳವಾರ ಜರುಗಿತು.
ಹಳೆ ನಗರ ಸಭೆಯಲ್ಲಿರುವ ಕಾಲೇಜಿನ ಆವರಣದಿಂದ ಪ್ರಾರಂಭಗೊಂಡ ಜಾಥಾವು ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಸಾರ್ವಜನಿಕ ಆಸ್ಪತ್ರೆಯ ಮುಂಭಾಗದಲ್ಲಿ ಸಂಪನ್ನಗೊಂಡ ಬಳಿಕ ಆಸ್ಪತ್ರೆಯಲ್ಲಿದ್ದ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯ ಡಾ.ನಾಸಿರಅಹ್ಮದ ಜಂಗೂಭಾಯಿ ಅವರು ಭವ್ಯ ಭಾರತದ ದ್ರುವತಾರೆಯಾಗಿದ್ದ ಸ್ವಾಮಿ ವಿವೇಕಾನಂದರವರು ವಿಶ್ವಮಾನವ ಸಂದೇಶವನ್ನು ಜಗತ್ತಿಗೆ ಸಾರಿ ಭಾರತದ ಭವ್ಯ ಕೀರ್ತಿಯನ್ನು ಸಾರಿದ ದಾರ್ಶನಿಕ ವ್ಯಕ್ತಿ ಎಂದು ಬಣ್ಣಿಸಿ, ನಾವೆಲ್ಲರು ಸ್ವಾಮಿ ವಿವೇಕಾನಂದರವರ ಜೀವನಾದರ್ಶಗಳನ್ನು ಮೈಗೂಡಿಸಿಕೊಳ್ಳುವುದರ ಮೂಲಕ ಸಮೃದ್ದ ಭಾರತ ನಿರ್ಮಾಣದ ರೂವಾರಿಗಳಾಗಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ವಿಜಯಕುಮಾರ್ ಉಪಸ್ಥಿತರಿದ್ದರು. ಕಾಲೇಜಿನ ಸಾಂಸ್ಕ್ರತಿಕ ವಿಭಾಗದ ಸಂಚಾಲಕಿ ಡಾ.ಸುಜಾತಾ ಮಗದುಮ್, ಕ್ರೀಡಾ ಹಾಗೂ ಯುವ ರೆಡ್ ಕ್ರಾಸ್ ಘಟಕಗಳ ಸಂಚಾಲಕ ಮಂಜುನಾಥ ಛಲವಾದಿ, ನ್ಯಾಕ್ ಸಂಚಾಲಕ .ಎಸ್.ವಿ.ಚಿಂಚನಿ, ಡಾ: ಲಕ್ಷ್ಮೀಬಾಯಿ ಕಬಾಡಿ, ಲಲಿತಾ ಹುನ್ನುರ, ಚಂದ್ರಕಾಂತ ಮಾಳವಾದೆ ಹಾಗೂ ಉಪನ್ಯಾಸಕರುಗಳಾದ ಕು. ಅಖಿಲಾ ತಿಗಡಿ, ಕು.ಅಪೂರ್ವಾ ದೇಸಾಯಿ, ಕು.ಅಕ್ಷತಾ ಶಿಂದೆ, ಕು.ರೇಖಶ್ರಿ ಇಂದರಗಿ, ಸಹನಾ ನಾಯ್ಕ, ದಯಾನಂದ ರೆಡ್ಡರ, ಬಸವರಾಜ ಮಾದರ, ಲೋಕೇಶ ನಾಯ್ಕ, ಪ್ರಲ್ಹಾದ ಘಾಡಿ, ಚಂದ್ರಸಿಂಗ ರಜಪೂತ ಹಾಗೂ ಕಾಲೇಜಿನ 150 ಕ್ಕು ಹೆಚ್ಚು ವಿದ್ಯಾರ್ಥಿಗಳು ಹಾಜರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
19ದಾಂಡೇಲಿ2- ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಇದರ ಸಾಂಸ್ಕ್ರತಿಕ, ಕ್ರೀಡಾ ಹಾಗೂ ಯುವ ರೆಡ್ ಕ್ರಾಸ್ ಘಟಕಗಳ ಆಶ್ರಯದಲ್ಲಿ ಸ್ವಾಮಿ ವಿವೇಕಾನಂದರ 153 ನೇ ಜನ್ಮ ದಿನದ ಅಂಗವಾಗಿ “ರಾಷ್ಟ್ರೀಯ ಯುವ ಸಪ್ತಾಹ” ಆಚರಣೆಯ ನಿಮಿತ್ತ ಸಾರ್ವಜನಿಕ ಆಸ್ಪತ್ರೆಯಲ್ಲಿದ್ದ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಮಾಡುತ್ತಿರುವುದು.

loading...

LEAVE A REPLY

Please enter your comment!
Please enter your name here