ಚರಂಡಿ ಮೇಲಿನ ಬ್ರಿಡ್ಜ್‍ನಲ್ಲಿ ಬೋಂಗಾ : ಸಾರ್ವಜನಿಕರ ಆಕ್ರೋಶ

0
23


ಕುಷ್ಟಗಿ,19: ಪಟ್ಟಣದ 5 & 6ನೇ ವಾರ್ಡನ ಮಧ್ಯದಲ್ಲಿ ಬರುವ ಮುಖ್ಯ ರಸ್ತೆಯ ಚರಂಡಿ ಮೇಲಿನ ಬ್ರಿಡ್ಜ್ ಸಂಪೂರ್ಣ ಬೋಂಗಾ ಬಿದ್ದು ಐದಾರು ತಿಂಗಳಾದರೂ ಪುರಸಭೆ ಅಧಿಕಾರಿಗಳು ಮತ್ತು ವಾರ್ಡ ಸದಸ್ಯರು ತೀವ್ರ ನಿರ್ಲಕ್ಷ ತೋರಿದ್ದಾರೆ.
ಕಳೆದ ಐದಾರು ತಿಂಗಳಿನ ಹಿಂದೆಯೆ ಈ ಬ್ರಿಡ್ಜ್ ಸಂಪೂರ್ಣ ಹಾಳಾಗಿ ಇದೇ ರಸ್ತೆಯಲ್ಲಿ ಓಡಾಡುವ ವಾಹನಗಳು ಬಿದ್ದು ಕೆಲವರಿಗೆ ಗಾಯಗಳಾಗಿವೆ. ಅಲ್ಲದೇ ಕೆಲ ವಾಹನಗಳು ಈ ಬೃಹದಾಕಾರದ ಗುಂಡಿಯಲ್ಲಿ ಬಿದ್ದು ಜಖಂಗೊಂಡಿದ್ದೂ ಇದೆ. ಆದರೆ ಈ ಬಗ್ಗೆ ಗಮನ ಹರಿಸಿ ಕ್ರಮ ಕೈಗೊಳ್ಳುವಂತೆ ಪುರಸಭೆ ಅಧಿಕಾರಿಗಳಿಗೆ ತಿಳಿಸಿದರೂ ಯಾವ ಪ್ರಯೋಜನವೂ ಆಗಿಲ್ಲ. ನಿತ್ಯ ಇಲ್ಲಿನ ಸಾರ್ವಜನಿಕರು, ಹಿರಿಯ ನಾಗರಿಕರು, ಗರ್ಭಿಣಿಯರು ಹಾಗೂ ಜಾನುವಾರುಗಳು ಜೀವ ಭಯದಿಂದ ಈ ರಸ್ತೆಯಲ್ಲಿ ನಡೆದಾಡುವ ದುಸ್ಥಿತಿ ಎದುರಾಗಿದೆ. ಅದರಲ್ಲೂ ಶಾಲಾ ಮಕ್ಕಳಿಗಂತೂ ಇನ್ನಿಲ್ಲದ ಭಯ ಉಲ್ಬಣಿಸಿದೆ. ಈ ರಸ್ತೆಯಲ್ಲಿ ಹೋಗುವಾಗ ಕೆಲ ಶಾಲಾ ಮಕ್ಕಳು ಈ ಗುಂಡಿಗೆ ಬಿದ್ದು ತಲೆ ಒಡೆದು, ಮೈ-ಕೈ ನೋವು ಮಾಡಿಕೊಂಡ ಘಟನೆಗಳು ಸಾಕಷ್ಟು ನಡೆದಿವೆ. ಪಟ್ಟಣದ ಕೆಲ ಪ್ರಮುಖ ಶಾಲೆಗಳಿಗೆ ಹೋಗಲು ಈ ರಸ್ತೆ ಪ್ರಮುಖವಾಗಿದ್ದು ಇಲ್ಲಿಂದಲೇ ಬೇರೆ ಕಡೆ ತೆರಳುವ ಅನಿವಾರ್ಯವೂ ಇದೆ. ಪಾಲಕರಿಗಂತೂ ಎಲ್ಲಿ ತಮ್ಮ ಮಕ್ಕಳು ಈ ಗುಂಡಿಯಲ್ಲಿ ಬಿದ್ದು ತಮ್ಮ ಜೀವಕ್ಕೆ ಅಪಾಯ ತಂದುಕೊಳ್ಳುತ್ತಾರೋ ಎಂದು ಭಯದಿಂದ ಶಾಲೆಗೆ ಕಳುಹಿಸುವ ವಾತಾವರಣ ಸೃಷ್ಠಿಯಾಗಿದೆ. ಇದರಿಂದ ಇಲ್ಲಿ ಸಾರ್ವಜನಿಕರು ಪುರಸಭೆ ಅಧಿಕಾರಿಗಳಿಗೆ ಹಾಗೂ ವಾರ್ಡನ ಸದಸ್ಯರಿಗೆ ಹಿಡಿ ಶಾಪ ಹಾಕುತ್ತಿದ್ದಾರೆ. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಬೋಂಗಾ ಬೀಳಲು ಪಕ್ಕದಲ್ಲೆ ಇರುವ ಬಾಳೆಹಣ್ಣಿನ ಉಗ್ರಾಣವೇ ಕಾರಣ. ಹಣ್ಣುಗಳ ಇಳಿಸಲು ಮತ್ತು ತೆಗೆದುಕೊಂಡು ಹೋಗಲು ಬರುವ ಲಾರಿ, ಟಾಟಾ ಏಸ್, ಟ್ರಕ್ ಗಳಂತ ದೊಡ್ಡ ವಾಹನಗಳ ಓಡಾಟದಿಂದ ಬ್ರಿಡ್ಜ್ ಕೆಲವೇ ದಿನಗಳಲ್ಲಿ ಮುರಿದು ಬಿದ್ದಿದೆ. ಕೂಡಲೇ ಸಂಬಂಧಿಸಿದ ಪುರಸಭೆ ಅಧಿಕಾರಿಗಳು ಕ್ರಮ ತೆಗೆದುಕೊಂಡು ಉತ್ಕøಷ್ಟವಾದ ಬ್ರಿಜ್ ನಿರ್ಮಾಣ ಮಾಡಬೇಕು. ಈ ರಸ್ತೆಯಲ್ಲಿ ದೊಡ್ಡ ವಾಹನಗಳು ಓಡಾಡದಂತೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಭೋವಿ ಯುವ ವೇದಿಕೆ ಕ್ರಾಂತಿ ಅಧ್ಯಕ್ಷ ಪ್ರವೀಣಕುಮಾರ ಅಮರಾವತಿ, ವಾರ್ಡನ ನಿವಾಸಿಗಳಾದ ಮಂಜುನಾಥ ಉಪ್ಪಾರ, ನಾಗರಾಜ ಭೋವಿ, ರಾಘವೇಂದ್ರ ಭೋವಿ, ಆಂಜನೇಯ ಪೂಜಾರ, ಯಲ್ಲಮ್ಮ ಪೂಜಾರ, ಬಸಮ್ಮ, ಸುವರ್ಣ, ಸಂಗಮ್ಮ, ಶ್ರೀನಿವಾಸ ಬಡಿಗೇರ, ಶಿವು ಭೋವಿ ಆಗ್ರಹಿಸಿದ್ದಾರೆ.

loading...

LEAVE A REPLY

Please enter your comment!
Please enter your name here