ಲಿಂಗಾಯತ ಸಮುದಾಯ ಒಂದು ಸ್ವತಂತ್ರ್ಯ ಧರ್ಮ:

0
64


ಕಾರವಾರ : ಲಿಂಗಾಯತ ಸಮುದಾಯ ಒಂದು ಸ್ವತಂತ್ರ್ಯ ಧರ್ಮ ಎಂದು ಪ್ರತಿಪಾದಿಸಿರುವ ಬೆಂಗಳೂರಿನ ಬಸವನಗೂಡಿನಲ್ಲಿರುವ ಚನ್ನಬಸವ ಜ್ಞಾನಪೀಠದ ಚನ್ನಬಸವಾನಂದ ಸ್ವಾಮೀಜಿ, ಕರ್ನಾಟಕದಲ್ಲಿ ಹುಟ್ಟಿರುವ ಲಿಂಗಾಯತ ಸಮುದಾಯವನ್ನು ಸ್ವತಂತ್ರ್ಯ ಧರ್ಮ ಎಂದು ಘೋಷಿಸುವ ಕುರಿತು ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲಾಕೇಂದ್ರಕ್ಕೆ ಆಗಮಿಸಿದ್ದ ಅವರು, ಜಿಲ್ಲೆಯ ಉಳವಿಯಲ್ಲಿ ತಮ್ಮ ಶಾಖೆಯನ್ನು ತೆರೆಯುವದರ ಬಗ್ಗೆ ತಿಳಿಸಿದರು. ಇದಲ್ಲದೇ ಮದ್ಯಪಾನ ವಿರೋಧಿ ಹೋರಾಟ ನಡೆಸುವುದಾಗಿ ಘೋಷಿಸಿದ ಅವರು ಹಳಿಯಾಳ ವಿಧಾನಸಭಾ ಕ್ಷೇತ್ರವನ್ನು ಉಳವಿ ವಿಧಾನಸಭಾ ಕ್ಷೇತ್ರ ಎಂದು ನಾಮಕರಣ ಮಾಡಬೇಕು ಎಂದು ಅವರು ಜಿಲ್ಲಾಡಳಿತವನ್ನು ಒತ್ತಾಯಿಸಿದರು.
ಲಿಂಗಾಯತ ಸಮುದಾಯ ಕರ್ನಾಟಕದಲ್ಲಿ ಹುಟ್ಟಿದ್ದು. ಇಲ್ಲಿ ಮಾತ್ರ ಆ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಕಾಣಬಹುದಾಗಿದೆ. ಲಿಂಗಾಯತ ಸಮುದಾಯ ಹಿಂದು ಧರ್ಮಕ್ಕೆ ಸೇರದೇ, ಅದೊಂದು ಪ್ರತ್ಯೇಕ ಧರ್ಮವಾಗಿದೆ. ಜೈನ ಧರ್ಮದಂತೆಯೇ ಲಿಂಗಾಯತವನ್ನು ಕೂಡ ಒಂದು ಪ್ರತ್ಯೇಕ ಧರ್ಮ ಎಂದು ಪರಿಗಣಿಸಬೇಕು. ಈ ಬಗ್ಗೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಕೂಡಲೇ ಪ್ರಸ್ತಾವನೆ ಕಳುಹಿಸಲಾಗುವುದು ಎಂದು ತಿಳಿಸಿದ ಅವರು ಉತ್ತರಕನ್ನಡ ಜಿಲ್ಲೆಯ ಜೊಯಿಡಾದಲ್ಲಿರುವ ಉಳವಿ ಬಸವಣ್ಣನವರ ಪುಣ್ಯಭೂಮಿಯಾಗಿದ್ದು, ಇಲ್ಲಿ ತಮ್ಮ ಶಾಖೆಯವನ್ನು ವಿಸ್ತರಿಸಲಾಗುವುದು ಎಂದರು.
ಬರುವ ದಿನಗಳಲ್ಲಿ ಉಳವಿಯಲ್ಲಿ ಲಿಂಗಾಯತ ಧರ್ಮದ ಬಗ್ಗೆ ಜಾಗೃತಿ ಮೂಡಲಿಸಲಾಗುವದು. ಇನ್ನು ಹಳಿಯಾಳ ವಿಧಾನಸಭಾ ಕ್ಷೇತ್ರವನ್ನು ಉಳವಿ ವಿಧಾನ ಸಭಾ ಕ್ಷೇತ್ರ ಎಂದು, ಹುನಗುಂದ ಕ್ಷೇತ್ರವನ್ನು ಕೂಡಲಸಂಗಮ ವಿಧಾನಸಭಾ ಕ್ಷೇತ್ರ ಎಂದು ನಾಮಕರಣ ಮಾಡಬೇಕು ಎಂದು ಆಗ್ರಹಿಸಿದರು. ಮದ್ಯಪಾನದಿಂದ ಜನ ಹಾಳಾಗುತ್ತಿದ್ದು ಮದ್ಯಪಾನ ನಿಷೇಧಿಸುವಂತೆ ಹೋರಾಟ ನಡೆಸಲಾಗುವುದು ಎಂದರು.

loading...

LEAVE A REPLY

Please enter your comment!
Please enter your name here