ಸುಸಜ್ಜಿತ ರಸ್ತೆ ನಿರ್ಮಾಣ, ಕುಡಿಯುವ ನೀರು ಮೊದಲ ಆದ್ಯತೆ: ದೊಡ್ಡಮನಿ

0
62


ಶಿರಹಟ್ಟಿ : ಶಿರಹಟ್ಟಿ ಮತಕ್ಷೇತ್ರದ ಗ್ರಾಮೀಣ ಪ್ರದೇಶಗಳಲ್ಲಿ ಮತ್ತು ನಗರ ಪ್ರದೇಶಗಳಲ್ಲಿ ಸುಸಜ್ಜಿತ ರಸ್ತೆ, ಹಾಗೂ ಶುದ್ಧ ಕುಡಿಯುವ ನೀರು ಹೀಗೆ ಹಲವಾರು ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಜಲ ಸಂಪನ್ಮೂಲ ಇಲಾಖೆಯ ಕಾರ್ಯದರ್ಶಿ ಜನಪ್ರೀಯ ಶಾಸಕ ರಾಮಕೃಷ್ಣ ದೊಡ್ಡಮನಿ ಹೇಳಿದರು.

ತಾಲೂಕಿನ ಸಮೀಪದ ಖಾನಾಪೂರ ರಸ್ತೆಯಲ್ಲಿ 5054-ಅಪೆಂಡಿಕ್ಸ-ಇ 2014-15 ರ ಯೋಜನೆಡಿಯಲ್ಲಿ ಅಂದಾಜು 1 ಕೋಟಿ ವೆಚ್ಚದ ಗಜೇಂದ್ರಗಡ-ಸೊರಬ ರಾಹೆ-136 ರ ಕೀಮಿ 134.94 ರಿಂದ 137.25 ರವರೆಗೆ ರಸ್ತೆ ಸುಧಾರಣೆ ಕಾಮಗಾರಿಗೆ ಗುರುವಾರ ಭೂಮಿ ಪೂಜೆ ನೆರವೆರಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿ ಈ ಭಾರಿ ಬರಗಾಲ ಬಿದ್ದಿದ್ದರಿಂದ ಅಂರ್ತಜಲ ಕಡಿಮೆಯಾಗಿದ್ದು, ಪ್ರತಿಯೊಂದು ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದ್ದು, ಇದನ್ನು ನಿವಾರಿಸಲು ಶಿಂಗಟಾಲೂರಿನ ಡ್ಯಾಂ ನೀರು ಮತ್ತು ಅಲ್ಲಲ್ಲಿ ಬೊರವೆಲ್‍ಗಳನ್ನು ಹಾಕಿಸಿ ಎಲ್ಲಾ ಗ್ರಾಮೀನ ಪ್ರದೇಶ ಹಾಗೂ ನಗರ ಪ್ರದೇಶಗಳಿಗೆ ಕುಡಿಯುವ ನೀರಿನ ವ್ಯವಸ್ಥೆಯನ್ನು ಒದಗಿಸಲಾಗುವುದು. ಈಗಾಗಲೇ ಮತಕ್ಷೇತ್ರಾದ್ಯಂತ ಶೇ/80 ರಷ್ಟು ರಸ್ತೆಗಳನ್ನು ಸುಧಾರಣೆ ಮಾಡಿದ್ದು, ಇನ್ನುಳಿದ ರಸ್ತೆಗಳನ್ನು ಇನ್ನು 6 ತಿಂಗಳೊಳಗಾಗಿ ಅನೇಕ ರಸ್ತೆಗಳನ್ನು ಮೇಲ್ದರ್ಜೆ ಮಟ್ಟದಲ್ಲಿ ನಿರ್ಮಾಣ ಮಡುವುದಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ ಎಂದರು.

ಶಿರಹಟ್ಟಿ, ಲಕ್ಷ್ಮೇಶ್ವರ ಮತ್ತು ಮುಂಡರಗಿ ನಗರ ಪ್ರದೇಶಗಳಲ್ಲಿ ಗುಡಿಸಲುಗಳಲ್ಲಿ ವಾಸಿಸುವಂತಹ ಬಡ ಜನತೆಗೆ ಕಳೆದ 15 ವರ್ಷಗಳಿಂದ ಸರಕಾರದಿಂದ ಯಾವುದೇ ತರಹದ ವಸತಿ ಸೌಲಭ್ಯವನ್ನು ಪಡೆಯದೇ ಇರತಕ್ಕಂತಹ ಎಸ್ಸಿ/ಎಸ್ಟಿ ಜನಾಂಗದವರಿಗೆ ಮನೆ ನಿರ್ಮಾಣಕ್ಕಾಗಿ 3.30 ಲಕ್ಷ ರೂಗಳನ್ನು ಒದಗಿಸಲಾಗುವುದು ಹಾಗೂ ಸಾಮಾನ್ಯ ಬಡ ಜನರಿಗೆ 2.70 ಲಕ್ಷ ರೂಗಳನ್ನು ಸರಕಾರದಿಂದ ನೀಡಲಾಗುವುದು ಈ ಯೊಜನೆಯ ಸೌಲಭ್ಯವನ್ನು ಸತ್ವಃ ನಿವೇಶನವನ್ನು ಹೊಂದಿರತಕ್ಕಂತಹ ಬಡ ಜನತೆಯು ಇದೇ ಜ.30 ರೊಳಗಾಗಿ ಸರಿಯಾದ ಮಾಹಿತಿಯನ್ನು ನೀಡಿ ಇದರ ಸದುಪಯೋಗವನ್ನು ಪಡಿಸಿಕೊಳ್ಳಬೇಕೆಂದು ಹೇಳಿದರು.

ಜಿಲ್ಲಾ ಕಾಂಗೈ ಉಪಾಧ್ಯಕ್ಷ ವೈ.ಎಸ್.ಪಾಟೀಲ, ಪ.ಪಂ.ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಹುಮಾಯುನ ಮಾಗಡಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೀರಣ್ಣ ಅಂಗಡಿ, ಎ.ವೈ.ನವಲಗುಂದ ಪ.ಪಂ.ಅಧ್ಯಕ್ಷ ನಾಗರಾಜ ಲಕ್ಕುಂಡಿ, ಉಪಾಧ್ಯಕ್ಷ ಸಂತೋಷ ಕುರಿ, ಸ್ಥಾಯಿ ಸಮಿತಿ ಅಧ್ಯಕ್ಷ ಬುಡನಶಾ ಮಕಾನದಾರ, ಕಾಂಗ್ರೆಸ್(ಐ) ನಗರ ಘಟಕದ ಅಧ್ಯಕ್ಷ ಮಹಾಂತೇಶ ದಶಮನಿ, ಶಾಸಕರ ಆಪ್ತ ಸಹಾಯಕ ಶರಣಪ್ಪ ಕುಬಸದ, ನಾಗರಾಜ ಪಾಟೀಲ, ಚಂದ್ರಶೇಖರ ರಡ್ಡೇರ, ರಮೇಶ ಗಾಬರಿ ಯಲ್ಲಪ್ಪ ಹೆಗ್ಗಣ್ಣವರ, ಲೋಕೋಪಯೋಗಿ ಇಲಾಖೆ ಅಧಿಕಾರಿ ಪಿ.ಎಮ್.ಚಿಕ್ಕಮಠ, ಎಲ್.ಎ.ಬಾಳಿ,ಸಿ.ಆರ್.ಚನ್ನಪ್ಪಗೌಡರ, ಎಚ್.ವ್ಹಿ.ಹೊಸಮನಿ, ಗುತ್ತಿಗೆದಾರೆಫ್.ಬಿ.ಪಾಟೀಲ ಮತ್ತಿತರರು ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here