ಗಂಗಾಮತ ಸಮಾಜದವರಿಗೆ ಬೆದರಿಕೆ ಹಾಕಿದ್ದು ಖಂಡನೀಯ

0
63

ಬಸವನಬಾಗೇವಾಡಿ  21: ಸಿಂದಗಿ ತಾಲೂಕಿನ ಆಲಗೂರ ಗ್ರಾಮದಲ್ಲಿ ಅಂಬೀಗರ ಚೌಡಯ್ಯನ ವೃತ್ತದಲ್ಲಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಜಯಂತ್ಯುತ್ಸವ ಆಚರಣೆಗೆ ಮುಂದಾದ ವೇಳೆಯಲ್ಲಿ ಜೆಸಿಬಿ ಯಂತ್ರದ ಮುಖಾಂತರ ನೆಲಸಮಗೊಳಿಸಿ ಬೆದರಿಕೆ ಹಾಕಿದ್ದು ಪಿಎಸ್‍ಐ ಅವರನ್ನು ತಕ್ಷಣ ಅಮಾನತ್ತುಗೊಳಿಸಬೇಕೆಂದು ಆಗ್ರಹಿಸಿ ತಾಲೂಕ ಗಂಗಾಮತ ಸಮಾಜ ಸೇವಾ ಸಂಘದ ನೇತೃತ್ವದಲ್ಲಿ ಪಟ್ಟಣದಲ್ಲಿ ಬೃಹತ್ ಪ್ರತಿಭಟನಾ ರ್ಯಾಲಿ ನಡೆಸಿದರು.
ಸ್ಥಳೀಯ ಬಸವೇಶ್ವರ ದೇವಾಲಯ ಮುಂಭಾಗದಲ್ಲಿ ತಾಲೂಕಿನ ವಿವಿಧ ಗ್ರಾಮಗಳ ಗಂಗಾಮತ ಸಮಾಜ ಮುಖಂಡರು ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಜಮಾಯಿಸಿ ಪಿಎಸ್‍ಐ ವರ್ತನೆ ಹಾಗೂ ಅಮಾನತ್‍ಗೊಳಿಸಬೇಕೆಂದು ಘೋಷಣೆಗಳನ್ನು ಕೂಗುತ್ತಾ ಬಸವೇಶ್ವರ ವೃತ್ತದಲ್ಲಿ ಆಗಮಿಸಿ ರಸ್ತೆ ತಡೆ ನಡೆಸಿ ಆಕ್ರೋಶವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ನ್ಯಾಯವಾದಿ ಅಶೋಕ ಕೋಲಕಾರ, ಅಧ್ಯಕ್ಷ ಮಲ್ಲು ತಳವಾರ, ನಗರ ಘಟಕದ ಅಧ್ಯಕ್ಷ ರಾಜು ಮುಳವಾಡ, ರೇವಣಸಿದ್ದ ದಳವಾಯಿ ಮಾತನಾಡಿ ಸಮಾಜದಲ್ಲಿ ಪರಿವರ್ತನೆ ತರುವ ಜೊತೆಗೆ ಜನರಲ್ಲಿ ಸಾಮರಸ್ಯ ಸಂದೇಶಗಳನ್ನು ಸಾರಿದ ನಿಜಶರಣ ಅಂಬೀಗರ ಚೌಡಯ್ಯ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲು ತೆರಳಿದ ವೇಳೆಯಲ್ಲಿ ಕಲಕೇರಿ ಪೋಲೀಸ್ ಠಾಣೆಯ ಪಿಎಸ್‍ಐ ಸತೀಶ ಕನ್ಮೇಶ್ವರ ಅವರು ಏಕಾಏಕಿ ಜೆಸಿಬಿ ಯಂತ್ರದ ಮೂಲಕ ವೃತ್ತವನ್ನು ದ್ವಂಸಗೊಳಿಸಿದ್ದು ಅಲ್ಲದೆ ಗಂಗಾಮತ ಸಮಾಜದವರಿಗೆ ಬೆದರಿಕೆ ಹಾಕಿದ್ದು ಖಂಡನೀಯವಾಗಿದ್ದು ಕೂಡಲೇ ಪೊಲೀಸ್ ಅಧಿಕಾರಿಯನ್ನು ಅಮಾನತ್‍ಗೊಳಿಸಬೇಕೆಂದು ಆಗ್ರಹಿಸಿದರು.
ಸಮಾಜದ ಶಾಂತಿಸುವ್ಯವಸ್ಥೆಯನ್ನು ಕಾಪಾಡಬೇಕಾದ ಪೊಲೀಸ್ ಇಲಾಖೆಯಲ್ಲಿ ಗೂಂಡಾವರ್ತನೆಯ ಅಧಿಕಾರಿ ಇರುವದು ಇಲಾಖೆಗೆ ಶೋಭೆ ತರುವದಿಲ್ಲ ಅಲ್ಲದೆ ಶರಣರ ವಿಚಾರಧಾರೆಗಳನ್ನು ಮೈಗೂಡಿಸಿಕೊಂಡು ಹೊಂದಾಣಿಕೆಯೊಂದಿಗೆ ಜೀವನ ಸಾಗಿಸುವ ಚಿಕ್ಕ ಸಮಾಜದ ಮೇಲೆ ದಬ್ಬಾಳಿಕೆ ನಡೆಸುವದು ಸುಸಂಸ್ಕøತಿ ಸಮಾಜಕ್ಕೆ ಮಾರಕವಾಗಿದ್ದು ಶೀಘ್ರದಲ್ಲಿ ಅಮಾನತ್ ಆದೇಶ ಮಾಡದಿದ್ದರೆ ರಾಜ್ಯಾದ್ಯಂತ ಹೋರಾಟವನ್ನು ತೀವ್ರಗೊಳಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪ್ರತಿಭಟನಾ ರ್ಯಾಲಿಯ ನೇತೃತ್ವವನ್ನು ಶಿವಾನಂದ ಕೋಲಕಾರ, ಲಿಂಗಣ್ಣ ದಳವಾಯಿ, ಗಣಪತಿ ಸುಣಗಾರ, ಆರ್.ಬಿ.ಚಿಗರಿ, ಗುರುಪಾದಪ್ಪ ವಾಲಿಕಾರ, ಪುಂಡಲೀಕ ವಾಲಿಕಾರ, ಗುರು ತಳವಾರ, ಮಲ್ಲು ಜಾಲವಾದಿ, ಮಲ್ಲು ಕೋಲಕಾರ, ಹಣಮಂತ ನಾಟಿಕಾರ, ರಮೇಶ ಇಂಗಳೇಶ್ವರ, ಮಲ್ಲು ಮುಳವಾಡ, ನಿಂಗಪ್ಪ ಕೊಟ್ರದ, ಎಸ್.ಬಿ.ಸಂಗಣ್ಣವರ, ಆರ್.ಎಸ್.ಕಣಕಪ್ಪಗೋಳ, ಬಿ.ಬಿ.ಹಳಕಟ್ಟಿ ಸೇರಿದಂತೆ ಮುಂತಾದವರುವಹಿಸಿದ್ದರು, ಇದೇ ಸಂದರ್ಭದಲ್ಲಿ ತಹಶೀಲದಾರ ಎಂ.ಎನ್.ಚೋರಗಸ್ತಿ ಅವರಿಗೆ ಮನವಿ ಸಲ್ಲಿಸಿದರು.

loading...

LEAVE A REPLY

Please enter your comment!
Please enter your name here