ಪ್ಯಾನ್ ವಿರೋಧಿ, ಸರಾಫ್ ಅಸೋಶಿಯೇಶನ್

0
45

ಗುಳೇದಗುಡ್ಡ 22: 2 ಲಕ್ಷ ರೂ.ಗಿಂತ ಹೆಚ್ಚಿನ ಮೀರಿದ ಆಭರಣ ಖರೀದಿಗೆ ಪ್ಯಾನ್ ಕಾರ್ಡ ಕಡ್ಡಾಯಗೊಳಿಸಿದ್ದು ಆಭರಣ ಉದ್ಯಮದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಇದನ್ನು ಹಿಂದಕ್ಕೆ ಪಡೆಯುವಂತೆ ಆಗ್ರಹಿಸಿ ಸ್ಥಳೀಯ ಗುಳೇದಗುಡ್ಡ ಸರಾಫ್ ಅಸೋಶಿಯೇಶನ್ ವತಿಯಿಂದ ಕೇಂದ್ರ ಸರ್ಕಾರಕ್ಕೆ ಶುಕ್ರವಾರ ಮನವಿ ಸಲ್ಲಿಸಲಾಯಿತು.
ನಗರದ ಸರಾಫ್ ಬಜಾರದಿಂದ ಮೆರವಣಿಗೆಯ ಮೂಲಕ ಇಲ್ಲಿನ ನಾಡ ಕಚೇರಿಗೆ ಆಗಮಿಸಿದ ವರ್ತಕರು. ವಿಶೇಷ ತಹಶೀಲ್ದಾರ ಶಶಿಕಲಾ ಪಾದಗಟ್ಟಿ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮಲ್ಲಿಕಾರ್ಜುನ ಶೀಲವಂತ, 5 ಲಕ್ಷ ಆಭರಣ ಖರೀದಿಗೆ ಪ್ಯಾನ್‍ಕಾರ್ಡ ಪಡೆಯಲು ಖಡ್ಡಾಯ ಗೊಳಿಸಲಾಗಿತ್ತು. ಕಪ್ಪುಹಣ ತಡೆಯುವ ನಿಟ್ಟಿನಲ್ಲಿ ಸರ್ಕಾರದ ಕ್ರಮಕ್ಕೆ ಬೆಂಬಲ ನೀಡಿದ್ದೇವು. ಆದರೆ ಈಗ 2 ಲಕ್ಷ ರೂ. ಮೊತ್ತದ ಆಭರಣ ಖರೀದಿಗೆ ಪ್ಯಾನ್ ಕಾರ್ಡ ಕಡ್ಡಾಯಗೊಳಿಸಲಾಗಿದೆ. ಇದರಿಂದ ಮಾರುಕಟ್ಟೆಯ ವಹಿವಾಟು ಕುಗ್ಗುವುದಿಲ್ಲ, ಬದಲಾಗಿ ಬಿಲ್ ಇಲ್ಲದೇ ವಹಿವಾಟು ಹೆಚ್ಚಾಗಿ ದೇಶದ ಆರ್ಥವ್ಯವಸ್ಥೆಯ ಮೇಲೆ ನಕರಾತ್ಮ ಪರಿಣಾಮ ಬೀರಬಹುದು. ಆದ್ದರಿಂದ 10 ಲಕ್ಷ ರೂ. ಮೇಲ್ಪಟ್ಟ ಆಭರಣ ಖರೀದಿಗೆ ಪ್ಯಾನ್‍ಕಾರ್ಡ ಇಲ್ಲವೆ ಯಾವುದೇ ಗುರುತುಪತ್ರ ಪಡೆಯವುದುನ್ನು ಕಡ್ಡಾಯ ಮಾಡಬೇಕು ಎಂದು ಆಗ್ರಹಿಸಿದರು.

loading...

LEAVE A REPLY

Please enter your comment!
Please enter your name here