ನಾಳೆ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

0
50

ಮೂಡಲಗಿ 22: ಮೂಡಲಗಿ ವಲಯ ವ್ಯಾಪ್ತಿಯ ಸರಕಾರಿ, ಅನುದಾನಿತ, ಅನುದಾನ ರಹಿತ ಪ್ರೌಢ ಶಾಲೆಗಳಲ್ಲಿಯ ಎಸ್.ಎಸ್.ಎಲ್.ಸಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೇರಣಾ ಕಾರ್ಯಾಗಾರವನ್ನು ಅರಭಾಂವಿ ಹತ್ತಿರದ ಶುಗರ ಪ್ಯಾಕ್ಟರಿ ಕ್ರಾಸ್‍ನ ಶ್ರೀ ಬಸವೇಶ್ವರ ಸಭಾಭವನದಲ್ಲಿ ಜ. 23 ಶನಿವಾರ ರಂದು ಮುಂಜಾನೆ 10 ಗಂಟೆಯಿಂದ ಸಾಂಯಕಾಲ 5 ಗಂಟೆಯ ವರೆಗೆ ಹಮ್ಮಿಕೋಳ್ಳಲಾಗಿದೆ ಎಂದು ಮೂಡಲಗಿ ಬಿ.ಇ.ಓ ಅಜೀತ ಮನ್ನಿಕೇರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಮಾರ್ಗದರ್ಶಕರಾಗಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ಚಿಕ್ಕೋಡಿ ಡಿ.ಡಿ.ಪಿ.ಐ ಗಜಾನನ ಮನ್ನಿಕೇರಿ, ಡಿ.ವಾಯ್.ಪಿ.ಸಿ ಎ.ಎಸ್ ಜೋಡಗೇರಿ, ತಹಶಿಲ್ದಾರ ಜಿ.ಎಸ್ ಮಹಾಜನ, ತಾಲೂಕಾ ಪಂಚಾಯತ ಇ.ಓ ವಿ.ಎಸ್ ಸಕ್ರಿ, ಮೂಡಲಗಿ ಸಿ.ಪಿ.ಐ ಬಿ.ಎಸ್ ಲೋಕಾಪೂರ, ಗೋಕಾಕ ಸಿ.ಪಿ.ಐ ಎಸ್.ಆರ್ ಕಟ್ಟಿಮನಿ, ಗೋಕಾಕ ಬಿ.ಈ.ಓ ಜಿ.ಬಿ ಬಳಿಗಾರ, ಚಿಕ್ಕೋಡಿ ಕಾರ್ಯಾಲಯದ ವಿಷಯ ಪರಿವಿಕ್ಷಕರು, ಮುಖ್ಯೋಪಾದ್ಯಾಯರು, ಸಂಪನ್ಮೂಲ್ ಶಿಕ್ಷಕರು ಭಾಗವಹಿಸುತ್ತಿದ್ದು ವಲಯದ ಎಲ್ಲ ಪ್ರೌಢ ಶಾಲೆಗಳ 10 ನೇ ತರಗತಿಯ ಪ್ರತಿಭಾವಂತ ವಿದ್ಯಾರ್ಥಿಗಳು, ಶಿಕ್ಷಕರು ಪಾಲ್ಗೋಳ್ಳಬೇಕೆಂದು ತಿಳಿಸಿದ್ದಾರೆ.
.

loading...

LEAVE A REPLY

Please enter your comment!
Please enter your name here