ಗಡಿ ವಿವಾದದ ಕುರಿತು ತಹಶಿಲ್ದಾರರಿಗೆ ಮನವಿ

0
63


ಕುಂದಗೋಳ : ಬೆಳಗಾಂವ ಗಡಿ ವಿವಾದದ ಕುರಿತು ಅವಹೇಳನಕಾರಿಯಾಗಿ ಹೇಳಿಕೆ ನೀಡುತ್ತಿರುವ ಮಹಾರಾಷ್ಟ್ರದ ಮುಖ್ಯಮಂತ್ರಿ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ತಾಲ್ಲೂಕು ಕರ್ನಾಟಕ ರಕ್ಷಣಾ ವೇದಿಕೆ ಪದಾಧಿಕಾರಿಗಳು ತಹಶೀಲ್ದಾರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ನೀಡಿ ಒತ್ತಾಯಪಡಿಸಿದರು
ಶುಕ್ರವಾರ ತಹಸೀಲ್ದಾರ ಕಚೇರಿಗೆ ಆಗಮಿಸಿದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ಕಾರ್ಯದರ್ಶಿ ಕಲ್ಲಪ್ಪ ಹರಕುಣಿ ಕನಾಟಕದ ಅವಿಭಾಜ್ಯ ಅಂಗವಾಗಿರುವ ಬೆಳಗಾಂವ ನಮ್ಮದು ಈ ಗಡಿಯ ಬಗ್ಗೆ ಮತ್ತು ಕನ್ನಡಿಗರ ಬಗ್ಗೆ ವಿನಾಕಾರಣ ತಗಾದೆ ತೆಗೆಯುತ್ತಿರುವ ಮಹಾರಾಷ್ಟ್ರಾ ಮುಖ್ಯಮಂತ್ರಿ ಮತ್ತು ಎಂಇಎಸ್ ಕಾರ್ಯಕರ್ತರ ಮೇಲೆ ಸರ್ಕಾರ ಶಿಸ್ತು ಕ್ರಮ ತೆಗೆದುಕೊಳ್ಳಬೇಕು ಪದೇ ಪದೆ ಕನ್ನಡಿಗರ ಮನಕ್ಕೆ ಘಾಸಿಯಾಗುವಂಥಹ ಹೇಳಿಕೆಗಳನ್ನು ನೀಡಿ ಬೆಳಗಾಂವ ಪ್ರಾಂತ್ಯವನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕೆಂಬ ಹಠಮಾರಿತನವನ್ನು ನಡೆಸಿರುವ ವ್ಯಕ್ತಿಗಳನ್ನು ತಕ್ಷಣ ಬಂದಿಸುವಂತೆ ಅವರು ಆಗ್ರಹಿಸಿದರು.
ತಾಲುಕಾ ಅದ್ಯಕ್ಷ ಮಂಜುನಾಥ ಹಡಪದ ಮಾತನಾಡಿ ನಮ್ಮವರೇ ಆದ ಕೆಲರಾಜಕಾರಣಿಗಳು ತಮ್ಮ ಕೀಳುಮಟ್ಟದ ರಾಜಕೀಯ ಬುದ್ಧಿ ಪ್ರಯೋಗಿಸಿ ಮಹಾರಾಷ್ಟ್ರದೊಂದಿಗೆ ಕೈಜೋಡಿಸುವ ನಿಟ್ಟಿನಲ್ಲಿ ಸಾಗುತ್ತಿರುವದು ನೀಚಪ್ರವೃತ್ತಿ ಆಗಿದೆ. ಈ ಹೇಳಿಕೆ ಹಾಗೂ ಉದ್ಧಟತನದ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಇದುವರೆಗೂ ಇದನ್ನು ನೋಡುತ್ತ ಸುಮ್ಮನೆ ಕುಳಿತುಕೊಂಡಿದ್ದು, ಯಾವದೇ ನಿರ್ಧಾರ ಕೈಗೊಳ್ಳದಿರುವದು ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದೆ. ಇದು ಹೀಗೆ ಮುಂದುವರೆದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಉಗ್ರಹೋರಾಟ ಕೈಗೊಂಡಲ್ಲಿ ಸರ್ಕಾರಗಳೇ ಹೊಣೆಯಾಗುತ್ತವೆ ಎಂದು ಕಾರ್ಯಕರ್ತರು ಎಚ್ಚರಿಸಿ ತಹಸೀಲ್ದಾರಗೆ ಮನವಿ ಸಲ್ಲಿಸಿದರು.
ಮನವಿ ಸ್ವೀಕರಿಸಿದ ತಹಸೀಲ್ದಾರ ಎಂ.ಎಸ್.ಬಣಸಿ ಮನವಿಯನ್ನು ಜಿಲ್ಲಾದಿಕಾರಿಗಳ ಮುಖಾಂತರ ಸರ್ಕಾರಕ್ಕೆ ರವಾನಿಸುವ ಭರವಸೆಯನ್ನು ನೀಡಿದರು.
ಈ ಸಂದರ್ಭದಲ್ಲಿ ಮಹಿಳಾ ತಾಲ್ಲೂಕಾ ಅಧ್ಯಕ್ಷೆ ಪ್ರೇಮಾ ದೇವರಡ್ಡಿ, ಉಪಾಧ್ಯಕ್ಷ ಅಡಿವೆಪ್ಪ ಹೆಬಸೂರ, ಕಾರ್ಯದರ್ಶಿ ಬಸವನಗೌಡ ಹಿರಿಗೌಡ್ರ ಹಾಗೂ ರಾಜು ಪುಟ್ಟಣ್ಣವರ, ಬಸವರಾಜ ಇಂಗಳಳ್ಳಿ, ಗಂಗಮ್ಮ ಕಮ್ಮಾರ, ಮೌಲಾ ತಹಶಿಲ್ದಾರ ಸೇರಿದಂತೆ ಅನೇಕರಿದ್ದರು. ಈ ವೇಳೆ ಎಂಇಎಸ್ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿಗಳ ವಿರುದ್ಧ ಕರವೇ ಕಾರ್ಯಕರ್ತರು ಘೋಷಣೆ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

loading...

LEAVE A REPLY

Please enter your comment!
Please enter your name here