ನೀರಿನ ಪೂರೈಕೆಯ ಸಮಸ್ಯೆ

0
50


ಹೊನ್ನಾವರ : ಪಟ್ಟಣದಲ್ಲಿ ಕಳೆದ 15 ದಿನಗಳ ಕಾಲ ನೀರಿನ ಪೂರೈಕೆಯಲ್ಲಿ ಆದ ಸಮಸ್ಯೆ ನಡೆದ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಪ್ರತಿಧ್ವನಿಸಿತು.
`ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಲು ಮತ್ತು ಈ ಸಮಸ್ಯೆಯಿಂದಾಗಿ ಸಾರ್ವಜನಿಕರು ಪಟ್ಟಣ ಪಂಚಾಯಿತಿ ಕಚೇರಿ ಎದುರು ಪ್ರತಿಭಟನೆ ನಡೆಸಲು ಅಧ್ಯಕ್ಷರು ಮತ್ತು ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ. ಸಮಸ್ಯೆ ಆರಂಭದಲ್ಲೇ ಸದಸ್ಯರನ್ನು ಕರೆದು ತುರ್ತು ಸಭೆ ನಡೆಸಿ ಚರ್ಚಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಾಗಿತ್ತು. ಅದನ್ನು ಮಾಡುವಲ್ಲಿ ನೀವು ವಿಫಲರಾಗಿದ್ದೀರಿ’ ಎಂದು ಸದಸ್ಯರಾದ ರವೀಂದ್ರ ನಾಯ್ಕ, ನೀಲಕಂಠ ನಾಯ್ಕ, ನಾಗೇಶ ಮೇಸ್ತ, ಸುರೇಶ ಶೇಟ್, ಸುರೇಶ ಮೇಸ್ತ, ಬಾಲಕೃಷ್ಣ ಬಾಳೇರಿ ತರಾಟೆಗೆ ತೆಗೆದುಕೊಂಡರು.
ಇದಕ್ಕೆ ಅಧ್ಯಕ್ಷೆ ಜೋಸ್ಪಿನ್ ಡಯಾಸ್ ಉತ್ತರಿಸದೇ ಮೌನಕ್ಕೆ ಶರಣಾದರು. ಮುಖ್ಯಾಧಿಕಾರಿ ಅರುಣ ನಾಯ್ಕ ಉತ್ತರಿಸಿ `ಪಟ್ಟಣದಲ್ಲಿ ನೀರಿನ ಸಮಸ್ಯೆಯುಂಟಾದಾಗ ಟ್ಯಾಂಕರ್ ಮೂಲಕ ಮನೆಮನೆಗೆ ಪೂರೈಕೆ ಮಾಡಿದ್ದೇವೆ. ಕೆಲವು ಭಾಗದಲ್ಲಿ ಬೇಡಿಕೆಗೆ ತಕ್ಕಂತೆ ನೀರಿನ ಪೂರೈಸಲಾಗಿಲ್ಲ. ಈಗ ಮರಾಕಲ್ ಯೋಜನೆಯ ನೀರಿನ ಸರಬರಾಜಿನಲ್ಲಿ ಯಾವಯದೇ ತೊಂದರೆಯಿಲ್ಲದೇ ಪಟ್ಟಣಕ್ಕೆ ಸಮರ್ಪಕವಾಗಿ ನೀರಿನ ಪೂರೈಕಾಯಾಗುತ್ತದೆ.
ಪ್ರಭಾತನಗರ ಗಾಂಧಿನಗರದಲ್ಲಿ ಹಾಳಾಗಿರುವ ಎರಡು ಬೋರ್‍ವೆಲ್‍ಗಳನ್ನು ದುರಸ್ತಿ ಮಾಡದಿರುವುದರಿಂದ ಈ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಪ್ರಮುಖ ಕಾರಣವಾಗಿದೆ. ಅದನ್ನು ದುರಸ್ತಿ ಮಾಡಿದ್ದರೆ ಜನರಿಗೆ ನೀರಿನ ಸಮಸ್ಯೆ ಅಷ್ಟಾಗಿ ತಲೆದೋರುತ್ತಿರಲಿಲ್ಲ. ಅದನ್ನು ಏಕೆ ದುರಸ್ತಿ ಮಾಡಿಲ್ಲ? ಎಂದು ಸದಸ್ಯ ನೀಲಕಂಠ ನಾಯ್ಕ ಅಧಿಕಾರಿಗಳನ್ನು ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಅರುಣ ನಾಯ್ಕ `ಕುಡಿಯುವ ನೀರಿನ ನಿರ್ವಹಣೆಗಾಗಿ 2013-14ನೇ ಸಾಲಿನಲ್ಲಿ 20 ಲಕ್ಷ ರೂಗಳ ಆರು ಕಾಮಗಾರಿಯನ್ನು ಟೆಂಡರ್ ಕರೆಯಲಾಗಿತ್ತು. ಇದರಲ್ಲಿ ಗಾಂಧಿನಗರದಲ್ಲಿನ ಬೋರ್‍ವೆಲ್ ಕಾಮಗಾರಿ ಕಣ್ತಪ್ಪಿ ಹೋಗಿತ್ತು. ವಿದ್ಯುತ್ ಬಿಲ್ ಪಾವತಿಯಾಗದಿರುವುದು ಮತ್ತು ಇತರ ತಾಂತ್ರಿಕ ಕಾರಣದಿಂದಾಗಿ ದುರಸ್ತಿಗೆ ಅನುಮತಿ ದೊರೆಯದೇ ಕಾಮಗಾರಿ ಮಂದಗತಿಗೆ ಕಾರಣವಾಗಿದೆ’ ಎಂದರು. ಉಪಾಧ್ಯಕ್ಷೆ ಮಹಾಲಕ್ಷ್ಮಿ ಹರಿಜನ, ಸ್ಥಾಯಿ ಸಮಿತಿ ಅಧ್ಯಕ್ಷೆ ರಾಜಶ್ರೀ ನಾಯ್ಕ ಮತ್ತು ಸದಸ್ಯರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here