ಜೆಡಿಎಸ್ ಕಾರ್ಯಕರ್ತರ ಸಭೆ

0
63


ಕುಂದಗೋಳ : ರಾಜ್ಯದಲ್ಲಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ ಸರ್ಕಾರ ಕಳೆದ ಎರಡುವರೆ ವರ್ಷದಿಂದ ಅಧಿಕಾರದಲ್ಲಿದ್ದರೂ ರೈತರ,ಬಡವರ ಪರವಾಗಿರುವಂತಾ ಜನಪರ ಕೆಲಸಗಳನ್ನು ಮಾಡದೇ ದ್ರೋಹವನ್ನು ಬಗೆದಿದ್ದಾರೆ ಇದರ ಜೊತೆಗೆ ಕೇಂದ್ರದಲ್ಲಿರುವ ಬಿಜೆಪಿ ಕೂಡಾ ಅಧಿಕಾರಕ್ಕೆ ಬಂದು 2 ವರ್ಷ ಗತಿಸಿದರೂ ಯಾವದೇ ರೈತಪರ ಕಾರ್ಯಕೈಗೊಳ್ಳದಿರುವದು ರಾಜ್ಯದ ಜನತೆಯ ದುರ್ದೈವ ಸಂಗತಿ ಯಾಗಿದ್ದು ಈ ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲಿ ಎರಡು ಪಕ್ಷಕ್ಕೂ ಮತದಾರರು ತಕ್ಕಪಾಠವನ್ನು ಕಲಿಸಲಿದ್ದಾರೆ ಎಂದು ಜೆಡಿಎಸ್ ಮುಖಂಡ ಹಾಗೂ ಮಾಜಿ ಶಾಸಕ ಮಲ್ಲಿಕಾರ್ಜುನ ಅಕ್ಕಿ ಹೇಳಿದರು.
ಪಟ್ಟಣದ ಶಿವಾನಂದ ಮಠದ ಸಭಾಭವನದಲ್ಲಿ ತಾ.ಪಂ ಹಾಗೂ ಜಿ.ಪಂ ಚುನಾವಣೆಯ ಪೂರ್ವಭಾವಿಯಾಗಿ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ಇದೂವರೆಗೂ ಯಾವದೇ ಸರ್ಕಾರದ ಸಭೆ ಸಮಾರಂಭಗಳಲ್ಲಿ ನಿದ್ದೆ ಮಾಡುತ್ತಲೇ ರಾಜ್ಯದ ಅಭಿವೃದ್ದಿಯ ಬಗ್ಗೆ ನಿರ್ಲಕ್ಷ್ಯವನ್ನು ವಹಿಸುತ್ತಾ ಬಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಶಾಸಕರುಗಳು ಈದೀಗ ತಾ.ಪಂ ಹಾಗೂ ಜಿ.ಪಂ ಚುನಾವಣಾ ದಿನಾಂಕ ಪ್ರಕಟಗೊಳ್ಳುತ್ತಿದ್ದಂತೆ ರಾತೋರಾತ್ರಿಯೇ ಗುದ್ದಲಿ ಪೂಜೆ ಮಾಡುತ್ತಿದ್ದಾರೆ ಈ ಕಳ್ಳಾಟವನ್ನು ತಾಲ್ಲೂಕಿನ ಜನತೆ ಸೂಕ್ಷ್ಮವಾಗಿ ಗಮನಿಸುತ್ತಿದ್ದು ಈ ಚುನಾವಣೆಯಲ್ಲಿ ಕಾಂಗ್ರೆಸ ಹಆಗೂ ಬಿಜೆಪಿ ಪಕ್ಷದ ಅಭ್ಯರ್ತಿಗಳಿಗೆ ತಕ್ಕ ಪಾಠವನ್ನು ಕಲಿಸಿ ಜೆಡಿಎಸ್ ಅಭ್ಯರ್ಥಿಗಳನ್ನು ಗೆಲ್ಲಿಸಿಲಿದ್ದಾರೆ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರಲ್ಲದೇ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಕೇವಲ 20 ತಿಂಗಳಿನ ಅಧಿಕಾರದ ಅವದಿಯಲ್ಲಿ ರಾಜ್ಯದ ರೈತರ ಸಾಲಮನ್ನಾ ಮಾಡಿ ಜನಪ್ರೈರಾಘಿದ್ದರಲ್ಲದೇ ವಯೋವೃದ್ದರಿಗೆ ಮಾಶಾಸನ, ಸ್ತ್ರೀಯರಿಗೆ 4% ಬಡ್ಡಿ ರೂಪದಲ್ಲಿ ಸಾಲ, ಮಾಸಿಕ ವೇತಗಳ ಜಾರಿ, ಶಾಲಾ ಮಕ್ಕಳಿಗೆ ಸೈಕಲ್ ವಿತರಣೆ ಸೇರಿದಂತೆ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡಿರುವ ಎಲ್ಲ ಜನಪರ ಕಾರ್ಯಗಳ ಕುರಿತು ಪಕ್ಷದ ಕಾರ್ಯಕರ್ತರು ಮತದಾರರಿಗೆ ತಿಳಿಸಬೇಕೆಂದು ಮನವಿ ಮಾಡಿದರು.
ತಾಲೂಕಿನ 4 ಜಿ.ಪಂ ಸ್ಥಾನಗಳ್ಲಲಿ 2 ರಿಂದ 3 ಸ್ಥಾನಗಳನ್ನು ನಮ್ಮ ಪಕ್ಷ ಗೆಲ್ಲಲ್ಲಿದ್ದು, 13 ತಾ.ಪಂ.ಕ್ಷೇತ್ರಗಳಲ್ಲಿ 8 ಸ್ಥಾನಗಳಲ್ಲಿ ಜಯಗಳಿಸಲಿದ್ದೇವೆ ಪಕ್ಷದ ಮುಖಂಡರೆಲ್ಲಾ ಸೇರಿ ಒಮ್ಮತಾಭಿಪ್ರಾಯದ ಅಭ್ಯರ್ಥಿಗಳನ್ನು ಆಯ್ಕೆಮಾಡಲಿದ್ದು, ಕಾರ್ಯಕರ್ತರು ಅಸಮಾಧಾನವಾಗದೆ ಒಗ್ಗಟ್ಟಾಗಿ ಪಕ್ಷದ ಅಭ್ಯಥಿಗಳ ಗೆಲುವಿಗೆ ಪ್ರಾಮಾಣಿಕವಾಗಿ ಕೆಲಸ ಮಾಡುವಂತೆ ಸೂಚನೆ ನೀಡಿದರು.
ಸಭೆ ಅಧ್ಯಕ್ಷತೆ ವಹಿಸಿದ್ದ ತಾಲ್ಲೂಕಾ ಅಧ್ಯಕ್ಷ ರುದ್ರಪ್ಪ ಗಾಣಗೇರ ಮಾತನಾಡಿ ಇಂದಿನ ತಾ.ಪಂ ಹಾಗೂ ಜಿ.ಪಂ ಚುನಾವಣಾ ಪ್ರಕ್ರಿಯೆ ಕುರಿತು ಪಕ್ಷದ ಸಭೆಯು ಬೆಂಗಳೂರಲ್ಲಿ ಜರುಗಲಿದ್ದು ಅಲ್ಲಿ ಅಭ್ಯರ್ಥಿಗಳ ಆಯ್ಕೆಯ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ. ಎಂದು ಹೇಳಿದರು.
ಮುಖಂಡರಾದ ನ್ಯಾಯವಾದಿ ಎಚ್.ಎಲ್.ನದಾಫ್,ಜಿಲ್ಲಾ ಯುವ ಅದ್ಯಕ್ಷ ಮಲ್ಲಿಕಾರ್ಜುನಗೌಡ ಪಾಟೀಲ,ಯುವ ಅದ್ಯಕ್ಷ ಶೇಖಪ್ಪ ಹರಕುಣ,ಕೆ.ಆರ್. ಡಗಲಿ, ಆರ್.ಜಿ.ಪಾಟೀಲ, ವೆಂಕನಗೌಡ ಪಾಟೀಲ, ವಿ.ವಿ.ತೊರಗಲಮಠ,ಇಂತಾಜ ಚಾಂದಖಾನವರ, ಪಕ್ಷದ ಮುಖಂಡರು ಮಾತನಾಡಿ ಬರುವ ಚುನಾವಣೆಯಲ್ಲಿ ಒಗ್ಗಟ್ಟಾಗಿ ನಮ್ಮ ಅಭ್ಯರ್ಥಿಗಳ ಗೆಲುವಿಗೆ ಕಾರ್ಯಕರ್ತರು ಪ್ರಾಮಾಣಿಕವಾಗಿ ದುಡಿಯಬೇಕು ಎಂದು ಹೇಳಿದರು.
ಕಾರ್ಯಾಧ್ಯಕ್ಷ ಶಂಕರಗೌಡ ದೊಡಮನಿ ಸ್ವಾಗತಿಸಿದರು, ಮಹಾಬಳೇಶ ಮಾದನೂರ ಪ್ರಾಸ್ತಾವಿಕವಾಗಿ ಮಾತನಾಡಿದರು, ಆರ್.ಎನ್.ಕಮತರ ನಿರೂಪಿಸಿದರು, ವೈ.ಬಿ.ಬಿಳೆಬಾಳ ವಂದಿಸಿದರು. ಸಭೆಯಲ್ಲಿ ನೂರಾರು ಕಾರ್ಯಕರ್ತರು ಸೇರಿದಂತೆ ಮಹಿಳಾ ಕಾರ್ಯಕರ್ತರು ಪಾಲ್ಗೊಂಡಿದ್ದರು.

loading...

LEAVE A REPLY

Please enter your comment!
Please enter your name here