ಜ.ಅನ್ನದಾನಿಶ್ವರ ಸಂಸ್ಥಾನಮಠದಲ್ಲಿ ಮಾಸಿಕ ಶಿವಾನುಭವ, ಮುದ್ರಾ ಚಿಕಿತ್ಸಾ ಶಿಬಿರ

0
70


ಮುಂಡರಗಿ : ಸ್ಥಳಿಯ ಧಾರ್ಮಿಕ ಕೇಂದ್ರವಾಗಿರುವ ಮೃಡಗಿರಿಯ ಶ್ರೀ ಜಗದ್ಗುರು ಅನ್ನದಾನೀಶ್ವರ ಸಂಸ್ಥಾನಮಠದಲ್ಲಿ ಪ್ರತಿ ಹುಣ್ಣಿಮೆಯ ದಿವಸ ನಡೆಯುವ ಮಾಸಿಕ ಶಿವಾನುಭವ ಕಾರ್ಯಕ್ರಮವು ನ. 24 ರ ರವಿವಾರ ಸಂಜೆ 7-30 ಗಂಟೆಗೆ ನಡೆಯಲಿದೆ. ಸಾನಿಧ್ಯವನ್ನು ಶ್ರೀಮಠದ ದಶಮ ಪೀಠಾಧಿಪತಿಗಳಾದ ಶ್ರೀ ಮ.ನಿ.ಪ್ರ. ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ವಹಿಸಲಿದ್ದು ಉತ್ತರಾಧಿಕಾರಿಗಳಾದ ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳು ನೇತೃತ್ವ ವಹಿಸಿಲಿದ್ದಾರೆ. ಮುದ್ರಾ ಚಿಕಿತ್ಸಕರು ಹಾಗೂ ಸಹ ವೈದ್ಯರಾದ ಡಾ. ಎಚ್.ಎಂ.ರೇವಣಸಿದ್ದಯ್ಯ ಇವರಿಂದ ಯೋಗ, ಮುದ್ರೆಯಿಂದ ಆರೋಗ್ಯದ ಭಾಗ್ಯ ವಿಷಯ ಕುರಿತು ಉಪನ್ಯಾಸ ಮತ್ತು ಮುದ್ರಾ ಚಿಕಿತ್ಸಾ ಶಿಬಿರ ನಿಡಲಿದ್ದಾರೆ. 1716 ನೇ ಶಿವಾನುಭವ ಇದಾಗಿದ್ದು ಕಾರ್ಯಕ್ರಮದ ಭಕ್ತಿಸೇವೆಯನ್ನು ಶ್ರೀ ಮಹಾಂತೇಶ ಸ್ವೀಟ್ಸ ಬೇಕರಿ ಮಾಲಿಕರಾದ ನಾವ್ಹಿ ಸಹೋದರರು ಹಾಗೂ ಕುಟುಂಬವರ್ಗದವರು ವಹಿಸಿಕೊಂಡಿದ್ದಾರೆ. ಶಿವಾನುಭವದ ಪ್ರಯುಕ್ತ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 2.ಗಂಟೆವರೆಗೆ ಮುದ್ರಾ ಚಿಕಿತ್ಸಾ ಶಿಬಿರ ನಡೆಯಲಿದ್ದು ಎಲ್ಲ ರೋಗ, ರುಜಿನಗಳಿಗೂ ಪ್ರಾಣಯಾಮ, ಯೋಗ, ಮುದ್ರಾ ಚಿಕಿತ್ಸೆಯ ಮೂಲಕ ಚಿಕಿತ್ಸೆ ನೀಡಲಿದ್ದಾರೆ. ಆಸಕ್ತರು ಶ್ರೀಮಠದಲ್ಲಿ ತಮ್ಮ ಹೆಸರು ನೊಂದಾಯಿಸಿಕೊಳ್ಳಬಹುದಾಗಿದ್ದು ಕಾರಣ ಶ್ರೀಮಠದ ಸರ್ವಧರ್ಮ ಸದ್ಭಕ್ತಾಭಿಮಾನಿಗಳು ಹಾಗೂ ಶ್ರೀಮಠದ ಶಿವಾನುಭವ ಕಮೀಟಿಯ ಸರ್ವಸದಸ್ಯರೂ ಮತ್ತು ಮುಂಡರಗಿಯ ಎಲ್ಲ ಸಂಘದ ಪದಾಧಿಕಾರಿಗಳು ಹಾಗೂ ಸರ್ವಸದಸ್ಯರು ಬೆಳಿಗ್ಗೆ ಚಿಕಿತ್ಸಾ ಶಿಬಿರಕ್ಕೆ ಹಾಗೂ ಸಂಜೆ 7-30 ಗಂಟೆಗೆ ಶ್ರೀಮಠಕ್ಕೆ ತಪ್ಪದೇ ಆಗಮಿಸಿ ಶಿವಾನುಭವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪ್ರಸಾದ ಸ್ವಿಕರಿಸಿಕೊಂಡು ಶ್ರೀ ಶಿವಯೋಗಿಗಳ ಕೃಪಾಶೀರ್ವಾದ ಪಡೆದುಕೊಳ್ಳಬೇಕೆಂದು ಶ್ರೀಮಠದ ಪ್ರಕಟನೆ ತಿಳಿಸಿದೆ.

loading...

LEAVE A REPLY

Please enter your comment!
Please enter your name here