ಕವಿಗೆ ವಿಶೇಷವಾದ ಒಳನೋಟವಿರುತ್ತದೆ ಶಶಿಕಲಾ

0
65

ಬೆಳಗಾವಿ 24: ಹದ್ದಿನ ಹಸಿವು ಪಾರಿವಾಳದ ಸಂಕಟದ ಎರಡೂ ಭಾವನೆಗಳನ್ನು ರಸಗ್ರಹಣ ಮಾಡಬೇಕು. ಕವಿಗೆ ವಿಶೇಷವಾದ ಒಳನೋಟವಿರುತ್ತದೆ. ಪರಕಾಯದ ಪ್ರವೇಶ ತಲ್ಲೀನತೆ ತೊಡವಿಕೆಯ ಗುಣವಿರಬೇಕು ಎಂದು ಪ್ರೊ. ಶಶಿಕಲಾ ವೀರಯ್ಯಸ್ವಾಮಿಯವರು ಹೇಳಿದರು.

ಅವರು ರಾಯಬಾಗದ ಎಸ್.ಪಿ.ಎಂ. ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯು ಹಮ್ಮಿಕೊಂಡಿರುವ ಮೂರು ದಿನಗಳ ಮಹಿಳಾ ಸಾಹಿತ್ಯ ಕಮ್ಮಟದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದÀರು.
ನೋವು, ತಲ್ಲಣ, ಕಾಡಿಸಿದ ಎದೆಯ ಭಾವಗಳನ್ನು ಸಮಾಜದ ಮುಂದಿಡಬೇಕು. ನಾವು ರಚಿಸುವ ಕವಿತೆ ಜನರಿಗೆ ಮುಟ್ಟುವಂತಿರಬೇಕು. ಹೆಣ್ಣುಮಕ್ಕಳು ಕಷ್ಟ ಸವಾಲುಗಳನ್ನು ಅಕ್ಕಮಹಾದೇವಿಯ ಹಾಗೇ ದಿಟ್ಟತನದಿಂದ ಅಭಿವ್ಯಕ್ತಿಸಬೇಕು ಎಂದರು.
ಕವಿಗೆ ಸಂತೋಷ ಬೇಕು. ಹಾಗೇ ನೋವನ್ನು ಗ್ರಹಿಸುವ ಸಂವೇದನೆಯು ಇರಬೇಕು. ಕವಿಯಾದವರಿಗೆ ಇನ್ನಿತರರಿಗಿಂತ ಹೆಚ್ಚಿನ ಸಾಮಾಜಿಕ ಜವಾಬ್ದಾರಿ ಇದೆ. ಹಾಗಾಗಿ ಹೆಚ್ಚು ಹೆಚ್ಚು ಸಂವೇದನಾ ಶೀಲರಾಗುತ್ತಾ ಅಂತರಂಗದ ಸೌಂದರ್ಯವನ್ನು ನಿಜವಾದ ಸೌಂದರ್ಯವಾಗಿಸುವ ಕ್ರಿಯೆಯಲ್ಲಿ ನಾವೆಲ್ಲ ಕವಿಗಳು ತೊಡಗಬೇಕು ಎಂದು ಕರೆ ನೀಡಿದರು.
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಪ್ರೊ. ಮಾಲತಿ ಪಟ್ಟಣಶೆಟ್ಟಿ ಮಾತನಾಡಿ, ಅಶಕ್ತ ಮತ್ತು ಅಲಕ್ಷಿತ ಸಾಹಿತಿಗಳನ್ನು ಗುರುತಿಸುವ ಕಾರ್ಯವನ್ನು ಅಕಾಡೆಮಿಯು ಆಧ್ಯತೆಯನ್ನಾಗಿ ಸ್ವೀಕರಿಸಿದೆ. ಸಾಹಿತ್ಯವನ್ನು ಬರೀ ಬರೆಯುವುದಷ್ಟೇ ಅಲ್ಲ ಓದಿಸುವುದೂ ಒಂದು ಕರ್ತವ್ಯ. ನಿಜವಾಗಿ ಮಹಿಳಾ ಸಾಹಿತ್ಯವನ್ನು ವಿಮರ್ಶೆ ಮಾಡುವ ಕಾಲ ಇಂದು ತುರ್ತಾಗಿದೆ. ಅದಕ್ಕಾಗಿ ಅಕಾಡೆಮಿಯು ಮಹಿಳಾ ಸಾಹಿತ್ಯ ಕಮ್ಮಟವನ್ನು ಗ್ರಾಮೀಣ ಮಟ್ಟದ ಇಂತಹ ಪ್ರದೇಶದಲ್ಲಿ ಹಮ್ಮಿಕೊಳ್ಳಲಾಗಿದೆ. ಮಹಿಳೆಯರು ತಮ್ಮ ಅಭಿವ್ಯಕ್ತಿಗಾಗಿ ತಮ್ಮ ದಾರಿಯನ್ನು ತಾವೇ ನಿರ್ಮಿಸಿಕೊಳ್ಳಬೇಕು. ತಮ್ಮನ್ನು ತಾವೇ ವಿಮೋಚನೆಗೊಳಿಸಿಕೊಳ್ಳಬೇಕು. ಅದನ್ನು ಸಾಹಿತ್ಯದ ಮೂಲಕ ಅಭಿವ್ಯಕ್ತಿಸಬೇಕು ಎಂದು ಈ ಶತಮಾನದ ಮಹಿಳಾ ಸಾಹಿತ್ಯ ಚರಿತ್ರೆಯ ಸ್ಥೂಲ ಪರಿಚಯ ನೀಡಿದರು.
ಶಿಕ್ಷಣ ಪ್ರಸಾರಕ ಮಂಡಳ ಸಂಸ್ಥೆಯ ಚೇರಮನ್À ಅಮರಸಿಂಹ ಪಾಟೀಲ ಕಮ್ಮಟವನ್ನು ಉದ್ಘಾಟಿಸಿದರು. ಅಕಾಡೆಮಿಯ ರಿಜಿಸ್ಟ್ರಾರ್ ಸಿ.ಎಚ್.ಭಾಗ್ಯ, ಕಮ್ಮಟದ ನಿರ್ದೇಶಕ ಡಾ. ವಿನಯಾ ಒಕ್ಕುಂದ, ಸದಸ್ಯ ಡಾ. ಅನಸೂಯ ಕಾಂಬಳೆ, ಪ್ರಾಂಶುಪಾಲ ಡಾ.ಡಿ.ಬಿ. ಪಾಂಡ್ರೆ ಉಪಸ್ಥಿತರಿದ್ದರು. ಡಾ. ವೈ. ಬಿ. ಹಿಮ್ಮಡಿ ಕಾರ್ಯಕ್ರಮ ನಿರೂಪಿಸಿದರು. ಕನ್ನಡ ವಿಭಾಗದ ಮುಖ್ಯಸ್ಥರಾದ ಪ್ರೊ. ಎಂ. ವೈ. ಬೂದಿಹಾಳ ವಂದಿಸಿದರು.

loading...

LEAVE A REPLY

Please enter your comment!
Please enter your name here