ಸಂವಿಧಾನ ರಾಜಕೀಯ ಸ್ವಾತಂತ್ರ್ಯ ನೀಡಿದೆ

0
75

ಬೆಳಗಾವಿ 27: ಸಂವಿಧಾನ ಭಾರತಕ್ಕೆ ರಾಜಕೀಯ ಸ್ವಾತಂತ್ರ್ಯ ನೀಡಿದೆ. ಅನೇಕ ಚುನಾವಣೆಗಳಾಗಿವೆ. ಚಂಡಿ-ಚಾಮುಂಡಿ ಚುನಾವಣೆಗಳಿಂದ ಹಣ ಪೋಲಾಗುತ್ತಿದೆ. ಆದರೆ ಬಡತನ ಎಂದಿನಂತೆಯೇ ಹೆಪ್ಪುಗಟ್ಟಿಕೊಂಡು ಕುಳಿತಿದೆ. ಉಳ್ಳವರು ಉಳ್ಳವರ ಹಾಗೆ ಉಳಿದಿದ್ದಾರೆ. ಬಡವರು ಬಡವರಾಗಿಯೇ ಕತ್ತುಸಿರು ಬಿಡುತ್ತಿದ್ದಾರೆ. ನಮ್ಮ ಸಂವಿಧಾನ ಶಿಲ್ಪಿಗಳು, ಗಣರಾಜ್ಯದ ಆದರ್ಶಗಳನ್ನು ಆಗ ಮಾಡಿದವರು ಕಂಡ ಕನಸು ನುಚ್ಚು ನೂರಾಗಿವೆ. ಎಂತಹ ಆದರ್ಶ ರಾಜ್ಯದ ಕಲ್ಪನೆ ಹೊಂದಿದ್ದರೋ ಅದರ ಒಂದಂಶವೂ ಕಾಣದ ಸ್ಥಿತಿ ಭಾರತಕ್ಕೆ ಬಂದುದು ದುರ್ದೈವ ಎಂದು ಶಿಕ್ಷಕ ಶಿವರಾಯ ಏಳುಕೋಟಿ ಹೇಳಿದರು.
ಅವರು ನಗರದ ಜಿ.ಎ. ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಗಣರಾಜ್ಯದಿನದ ನಿಮಿತ್ಯ ‘ಭಾರತಕ್ಕೆ ಭಾರವಾಗುತ್ತಿರುವ ಪ್ರಜಾಪ್ರಭುತ್ವದ ದುರಂತ’ ವಿಷಯದ ಮೇಲೆ ಮಾತನಾಡಿ, ಬಡತನ, ಭ್ರಷ್ಠಾಚಾರ, ಅಶಿಕ್ಷಿತತೆ, ನಿರುದ್ಯೋಗ, ಅಧಿಕಾರದಾಹ, ಅಸಮತೋಲನ ಮುಂತಾದವುಗಳನ್ನು ವಿದ್ಯಾರ್ಥಿಗಳು ಈ ಹಂತದಲ್ಲೇ ಹೊಸಕಿ ಹಾಕಿ ನವ ಮನ್ವಂತರದೊಂದಿಗೆ ಭಾರತದಲ್ಲಿ ಪ್ರಜಾಪ್ರಭುತ್ವದ ಗುಣರಾಜ್ಯ ಕಟ್ಟಬೇಕು ಎಂದರು. ಗಡಿಗಾಗಿ, ನೀರಿಗಾಗಿ, ಜಾತಿ ಪಂಥಗಳಿಗಾಗಿ ನಿತ್ಯ ಪಡುತ್ತಿರುವ ಪರಿಪಾಟದಿಂದ ಸಮಾಜ ರೋಸಿ ಹೋಗೆದೆ. ಈ ಸಮಸ್ಯೆಗಳಿಗೆ ಶಾಶ್ವತ ಮುಕ್ತಿ ದೊರೆಯಬೇಕು. ಅನೇಕ ಸಮಸ್ಯೆಗಳು ಭವ್ಯ ಭಾರತವನ್ನು ಭಾರವಾಗಿಸುತ್ತಿದ್ದು, ಅವು ನಿವಾರಣೆ ಆದರೆ ಮಾತ್ರ ಭವಿಷ್ಯದ ಭಾರತದ ಸುಂದರ ಚಿತ್ರ ಮೂಡುತ್ತದೆ ಎಂದರು.
ಕೆ.ಎಲ್.ಇ ಆಜೀವ ಸದಸ್ಯ ಮಹಾದೇವ ಬಳಿಗಾರ ಭಾವಚಿತ್ರಕ್ಕೆ ಪೂಜೆ ನೆರವೇರಿಸಿದರು. ಪ್ರಾಚಾರ್ಯ ಎ.ಬಿ.ಕೊರಬು ಹಾಗೂ ಉಪ ಪ್ರಾಚಾರ್ಯ ಆರ್.ಪಿ. ಹಿರೇಮಠ ಜಂಟಿಯಾಗಿ ಧ್ವಜಾರೋಹಣ ನೇರವೇರಿಸಿದರು.
ಪ್ರಾಚಾರ್ಯ ಎ.ಬಿ.ಕೊರಬು ಮಾತನಾಡಿ, ಇಂದಿನ ಈ ಸಂವಿಧಾನದಲ್ಲಿನ ಹಕ್ಕುಗಳನ್ನು ನಾವು ಯತಾವತ್ತಾಗಿ ಪಾಲಿಸಿಕೊಂಡು ಬರಬೇಕು. ಯಾವುದೇ ಕಾರ್ಯವಿರಲಿ ನಮ್ಮ ಜವಾಬ್ದಾರಿಯನ್ನು ಅರಿತು ಪಾಲ್ಗೊಳ್ಳಬೇಕು ಅಂದಾಗ ಸಂವಿಧಾನ ಬಲಯುತವಾಗುತ್ತದೆ ಎಂದರು.
ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳು ದೇಶಭಕ್ತಗೀತೆ, ಸಾಂಸ್ಕøತಿಕ ನೃತ್ಯಗಳನ್ನು ಮಾಡಿದರು. ಹಿರಿಯ ಶಿಕ್ಷಕ ಸಿದ್ರಾಮ ಗದಗ ನಿರೂಪಿಸಿದರು. ಚನ್ನಬಸಪ್ಪ ಪಾಗಾದ ವಂದಿಸಿದರು.

loading...

LEAVE A REPLY

Please enter your comment!
Please enter your name here