ಮಾಲೀನ್ಯ ನಿಯಂತ್ರಣಕ್ಕೆ ಸೈಕಲ್ ಅಭಿಯಾನಕ್ಕೆ ಚಾಲನೆ

0
66

ಕಾರವಾರ : ಜಾಗತಿಕ ಪರಿಸರ ಮಾಲಿನ್ಯ ನಿಯಂತ್ರಣಕ್ಕಾಗಿ ಇಲ್ಲಿನ ಪಹರೆ ವೇದಿಕೆ ಆಯೋಜಿಸಿರುವ ವಾರದಲ್ಲಿ ಒಂದು ದಿನ ಸೈಕಲ್ ಅಭಿಯಾನಕ್ಕೆ ಜಿಲ್ಲಾಧಿಕಾರಿ ಉಜ್ವಲ್‍ಕುಮಾರ್ ಘೋಷ್ ಅವರು ಗಣರಾಜ್ಯೋತ್ಸವದಂದು ಸೈಕಲ್ ತುಳಿಯುವ ಮೂಲಕ ಚಾಲನೆ ನೀಡಿದರು.
ಮಿತ್ರ ಸಮಾಜ ಮೈದಾನದಿಂದ ಹೆದ್ದಾರಿ ಮೂಲಕ ಕೋಡಿಭಾಗ ಸಂಚರಿಸಿ ಅಲ್ಲಿಂದ ಕೋಡಿಭಾಗ ಮುಖ್ಯರಸ್ತೆ ಮುಖೇನ ಮತ್ತೆ ನಗರಕ್ಕೆ ಆಗಮಿಸಿದ ಸೈಕಲ್ ಸವಾರರು ಸೈಕಲ್ ಅಭಿಯಾನದ ಬಗ್ಗೆ ಜನ ಜಾಗೃತಿ ನಡೆಸಿದರು. ಜಿಲ್ಲಾಧಿಕಾರಿ ಹಾಗೂ ಅಪರ ಜಿಲ್ಲಾಧಿಕಾರಿ ಪರಸ್ಪರ ಸ್ಪರ್ಧೆಗಿಳಿದವರಂತೆ ಸೈಕಲ್ ತುಳಿಯುತ್ತಿರುವುದು ಕಂಡು ಬಂದಿತು. 110ಕಿ.ಮೀ ದೂರದಿಂದ ಸೈಕಲ್ ತುಳಿದು ನಗರಕ್ಕೆ ಬಂದಿದ್ದ ಯಲ್ಲಾಪುರದ ಆರ್. ಜಿ. ಭಟ್ಟ ಬೆಳಸೂರು ಮೆಚ್ಚುಗೆಗೆ ಪಾತ್ರರಾದರು. ಅಂಗವಿಕಲರು ಕೂಡ ಸೈಕಲ್ ಜಾಥಾದಲ್ಲಿ ಭಾಗವಹಿಸಿ ಗಮನ ಸೆಳೆದರು. ನೂರಾರು ಮಂದಿ ಸೈಕಲ್ ಮೂಲಕ ನಗರ ಪ್ರದಕ್ಷಿಣೆ ಹಾಕಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಉಜ್ವಲಕುಮಾರ ಘೋಷ್, ಸದೃಢ ಆರೋಗ್ಯ, ಸ್ವಸ್ಥ ಸಮಾಜ ನಿರ್ಮಾಣಕ್ಕಾಗಿ ಸೈಕಲ್ ಬಳಕೆ ಅತಿ ಅಗತ್ಯವಾಗಿದೆ. ಪ್ರತಿಯೊಬ್ಬರು ಸೈಕಲ್ ತುಳಿಯುವದರಿಂದ ಇಂದನ ಬಳಕೆ ಪ್ರಮಾಣವನ್ನು ಕಡಿಮೆ ಮಾಡುವದರ ಜೊತೆ ವಾಯು ಮಾಲಿನ್ಯವನ್ನು ನಿಯಂತ್ರಿಸಬಹುದಾಗಿದೆ ಎಂದರು.
ಸರ್ಕಾರ ಹೆಲ್ಮೆಟ್ ಕಡ್ಡಾಯಗೊಳಿಸಿದ್ದು ಅದರಿಂದ ತಪ್ಪಿಸಿಕೊಳ್ಳಲು ಸೈಕಲ್ ತುಳಿಯುವ ವಿಧಾನ ಅನುಸರಿಸಬಹುದು. ಸದ್ಯ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಲಿದ್ದು ಈ ಕೆಲಸ ಪೂರ್ಣಗೊಂಡ ನಂತರ ಹೆದ್ದಾರಿ ಪಕ್ಕದಲ್ಲಿ ಸಿಗುವ ಜಾಗದಲ್ಲಿ ಸೈಕಲ್ ಪಥ ನಿರ್ಮಾಣ ಮಾಡುವ ಯೋಜನೆ ಜಿಲ್ಲಾಡಳಿತದ ಮುಂದಿದೆ ಎಂದು ಘೋಷ್ ಹೇಳಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಉಜ್ವಲಕುಮಾರ ಘೋಷ್, ಪಹರೆ ವೇದಿಕೆ ಅಧ್ಯಕ್ಷ ನಾಗರಾಜ ನಾಯಕ ಸೇರಿದಂತೆ ವಿವಿಧ ಸಂಘಟನೆಯ ಪದಾಧಿಕಾರಿಗಳು ಹಾಗೂ ಹಲವರು ಸೈಕಲ್ ಅಭಿಯಾನದಲ್ಲಿದ್ದರು.

loading...

LEAVE A REPLY

Please enter your comment!
Please enter your name here