ಕೈ, ಎಮ್‍ಇಎಸ್‍ಗೆ ಸಡ್ಡು ಹೊಡೆಯಲು ಒಂದಾದ ಬಿಜೆಪಿ, ಶಿವಸೇನೆ !

0
37

ಗದಿಗೇರಿದ ಜಿಪಂ, ತಾಪಂ ಚುನಾವಣೆ – ಬಣಗಳ ತಿಕ್ಕಾಟದಲ್ಲಿ ಪಕ್ಷೇತರಿಗೆ ಲಾಭ

*ರಾಜಶೇಖರಯ್ಯಾ ಹಿರೇಮಠ

ಬೆಳಗಾವಿ 01: ಜಿಲ್ಲಾ ಪಂಚಾಯತ್ ಹಾಗೂ ತಾಲೂಕಾ ಪಂಚಾಯತಿ ಚುನಾವಣೆಯನ್ನು ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ತಮ್ಮದೆಯಾದ ರಾಜಕಾರಣದ ಲೆಕ್ಕಾಚಾರದಲ್ಲಿ ತೊಡಗಿಕೊಂಡಿವೆ.
ಬೆಳಗಾವಿಯ ಜಿಲ್ಲಾ ಪಂಚಾಯತಿಯಲ್ಲಿ ಬಹುತೇಕ ಬಿಜೆಪಿ ಸದಸ್ಯರ ಸಂಖ್ಯೆ ಹೆಚ್ಚಿರುವುದರಿಂದ ಇಲ್ಲಿ ಕಾಂಗ್ರೆಸ್‍ಗೆ ಜಿಪಂ ಅಧಿಕಾರ ಹಿಡಿಯಲು ಕನಸಿನ ಮಾತಾದರೇ ತಾಲೂಕಾ ಪಂಚಾಯತಿ ಅಧಿಕಾರ ಹಿಡಿಯಲು ಈ ಹಿಂದಿನ ಚುನಾವಣೆಯಲ್ಲಿ ಎಮ್‍ಇಎಸ್ ಮಣಿಸಲು ಕಾಂಗ್ರೆಸ್ ಹಾಗೂ ಬಿಜೆಪಿ ಹೊಂದಾಣಿಕೆ ಮಾಡಿಕೊಂಡು ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಸ್ಥಾನವನ್ನು ಅಲಂಕರಿಸಿದ್ದವು.
ಬಹುತೇಕ ಬೆಳಗಾವಿ ಜಿಲ್ಲೆಯ ಗಡಿ ಭಾಗಗಳ ತಾಲೂಕಿನಲ್ಲಿ ತಾಪಂ ಅಧಿಕಾರ ಚುಕ್ಕಾಣಿ ಹಿಡಿಯಲು ಬಿಜೆಪಿ ಹಾಗೂ ಶಿವಸೇನೆ ಸೇರಿಕೊಂಡು ಕಾಂಗ್ರೆಸ್ ಹಾಗೂ ಎಮ್‍ಇಎಸ್ ನಿರ್ಣಾಮ ಮಾಡಲು ಪಣ ತೊಟ್ಟಿವೆ. ರಾಜ್ಯದಲ್ಲಿ ನಡೆಯುವ ಚುನಾವಣೆಗಿಂತ ಬೆಳಗಾವಿ ಜಿಲ್ಲೆಯ ಚುನಾವಣೆಯ ಮೇಲೆ ಎಲ್ಲರ ಕಣ್ಣು ಇಟ್ಟಿದ್ದಾರೆ.
ಬೆಳಗಾವಿಯ 10 ತಾಪಂಗಳ ಪೈಕಿ ಒಂಬತ್ತು ಹಾಗೂ ಜಿಪಂನಲ್ಲಿ ಹೆಚ್ಚು ಸ್ಥಾನ ಗೆದ್ದು ಪ್ರಾಬಲ್ಯ ಸಾಧಿಸಿದ್ದ ಬಿಜೆಪಿ ಈ ಸಲವೂ ಜಿಪಂ, ತಾಪಂದಲ್ಲಿ ಪ್ರಾಬಲ್ಯ ಸಾಧಿಸಲು ಕಾರ್ಯತಂತ್ರ ರೂಪಿಸುತ್ತಿದೆ. ಬೆಳಗಾವಿ ತಾಪಂನಲ್ಲಿ ಎಂಇಎಸ್ ವಿರುದ್ಧ ಬಿಜೆಪಿ, ಕಾಂಗ್ರೆಸ್ ಅಧಿಕಾರ
ಜೆಡಿಎಸ್‍ಗೆ ಜಿಲ್ಲೆಯಲ್ಲಿ ನೆಲೆಯೊದಗಿಸಿದ್ದ ಗೋಕಾಕದ ಅಶೋಕ ಪೂಜಾರಿಯವರ ಬಿಜೆಪಿ ಸೇರ್ಪಡೆಯಿಂದಾಗಿ ಈ ಸಲದ ಚುನಾವಣೆಯಲ್ಲಿ ಆ ಪಕ್ಷದ ಸ್ಪರ್ಧೆ ಆಟಕ್ಕುಂಟು ಲೆಕ್ಕಕ್ಕೆ ಇಲ್ಲದಂತಾಗಿದೆ. ಬೆಳಗಾವಿ, ಖಾನಾಪುರ ತಾಲೂಕುಗಳಲ್ಲಿ ಶಾಸಕರನ್ನು ಹೊಂದಿರುವ ಮಹಾರಾಷ್ಟ್ರ ಏಕೀಕರಣ ಸಮಿತಿ ಎಂಇಎಸ್ ಭಾಷಾ ವಿಷಯ ಹಾಗೂ ಕರ್ನಾಟಕ ಸರ್ಕಾರ ಮರಾಠಿ ಭಾಷಿಕರಿಗೆ ವಿರೋಧವಾಗಿದ್ದು, ಕಾಗದಪತ್ರಗಳು ಸೇರಿದಂತೆ ಯಾವುದೇ ಸೌಲಭ್ಯಗಳನ್ನು ನೀಡುತ್ತಿಲ್ಲ ಎಂದು ತನ್ನ ಹಳೆಯ ವಾದವನ್ನೇ ಮುಂದಿಟ್ಟುಕೊಂಡು ಮತಯಾಚಿಸುತ್ತಿದೆ. ಖಾನಾಪುರ ಶಾಸಕ ಅರವಿಂದ ಪಾಟೀಲ ತಾಲೂಕಿನ ಪಶ್ಚಿಮ ಭಾಗದಲ್ಲಿ ಭಾಷಾ ವಿಷಯವನ್ನು ಮುಂದಿಟ್ಟುಕೊಂಡು ಮತಯಾಚಿಸುತ್ತಿದ್ದರೆ, ಪೂರ್ವಭಾಗದಲ್ಲಿ ಅಭಿವೃದ್ಧಿ ಮಂತ್ರದ ಮೂಲಕ ಕನ್ನಡ ಭಾಷಿಕರ ಮನ ಗೆಲ್ಲಲು ಮುಂದಾಗಿರುವುದು ರಾಜಕಾರಣಿಗಳ ಚುನಾವಣೆ ವರಸೆಗೆ ಹಿನ್ನಡೆಯಾಗುವ ಸಾಧ್ಯತೆ ಹೆಚ್ಚಿದೆ.
ಖಾನಾಪುರ, ನಿಪ್ಪಾಣಿ ಭಾಗಗಳಲ್ಲಿ ತಾಲೂಕಾ ಪಂಚಾಯತಿ ಚುನಾವಣೆಯನ್ನು ಎದುರಿಸಲು ಬಿಜೆಪಿ ಹಾಗೂ ಶಿವಸೇನೆ ಸೇರಿಕೊಂಡು ಕಾಂಗ್ರೆಸ್ ಹಾಗೂ ಎಮ್‍ಇಎಸ್‍ನ್ನು ಬಗ್ಗು ಬಡೆಯುವ ಲೆಕ್ಕಾಚಾರದಲ್ಲಿದ್ದರೇ ರಾಷ್ಟ್ರೀಯ ಪಕ್ಷಗಳ ಜಿಲ್ಲಾ ನಾಯಕರುಗಳ ವೈ ಮನಸ್ಸು ಮತ್ತು ಪಂಗಡಗಳ ನಡುವಿನ ಲಾಭವನ್ನು ಪಕ್ಷೇತರ ಅಭ್ಯರ್ಥಿಗಳು ಪಡೆಯುವುದರಲ್ಲಿ ಎರಡು ಮಾತಿಲ್ಲ.
ಈ ಹಿಂದಿನ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಅಸಮಾಧಾನದ ನಡುವೆ ಪಕ್ಷದ ಅಭ್ಯರ್ಥಿ ವೀರಕುಮಾರ ಪಾಟೀಲ ಸೋಲು ಕಂಡು ಅದೇ ಪಕ್ಷದ ಟಿಕೇಟ್ ಆಕಾಂಕ್ಷಿಯಾಗಿದ್ದ ವಿವೇಕರಾವ್ ಪಾಟೀಲ್ ಪಕ್ಷೇತರ ಅಭ್ಯರ್ಥಿಯಾಗಿ ನಿಂತು ಗೆಲುವು ಸಾಧಿಸಿದ್ದರು. ಇದೇ ಕಾರಣದಿಂದ ಕಾರ್ಯಕರ್ತರು ಹಾಗೂ ಪಕ್ಷದ ಮುಖಂಡರು ಸೇರಿಕೊಂಡು ಹೊಸ ಅಭ್ಯರ್ಥಿಗಳಿಗೆ ಮಣೆ ಹಾಕಿ ಮತದಾರರನ್ನು ವಲಿಸಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ.
ಇತ್ತ ಜಿಲ್ಲಾ ಪಂಚಾಯತ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನ ಈಗಾಗಲೇ ಬಿಜೆಪಿಗೆ ಗೆಲುವು ನಿಶ್ಚಿತ ಎಂದು ಲೆಕ್ಕಾಚಾರ ನಡೆದಿದ್ದರೇ ತಾಪಂ ಅಧಿಕಾರ ಗದ್ದುಗೆ ಎರಲು ಬಿಜಿಪಿ ಹಾಗೂ ಶಿವಸೇನೆ ಕಸರತ್ತು ನಡೆಸಿವೆ.
=>
ಗೋಕಾಕ ಹಾಗೂ ಅರಭಾವಿ ಕ್ಷೇತ್ರಗಳಲ್ಲಿ ಈ ಹಿಂದಿನ ಜೆಡಿಎಸ್ ಜಿಲ್ಲಾಧ್ಯಕ್ಷ ಅಶೋಕ ಪೂಜಾರಿ ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ಇದರಿಂದ ಕಾಂಗ್ರೆಸ್ ಪಕ್ಷಕ್ಕೆ ಲಾಭವಾಗುವ ನಿರೀಕ್ಷೆ ಇದೆ ಎಂದು ಕಾಂಗ್ರೆಸ್ ಪಕ್ಷದ ಮಖಂಡರು ಜಂಬಕೊಚ್ಚಿಕೊಳ್ಳುತ್ತಿದ್ದಾರೆ.

=>
ಒಂದೇ ಪಕ್ಷದಲ್ಲಿ ಎರಡು ಬಣಗಳು: ಕಾಂಗ್ರೆಸ್ ಪಕ್ಷದ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳಕರ ಹಾಗೂ ಮುಖ್ಯ ಸಚೇತಕ ಅಶೋಕ ಪಟ್ಟಣರ ಎರಡು ಬಣಗಳ ನಡುವಿನ ಕಿತ್ತಾಟದಲ್ಲಿ ರಾಮದುರ್ಗ ಕ್ಷೇತ್ರದಲ್ಲಿ ಬಿಜೆಪಿ ಅಥವಾ ಪಕ್ಷೇತರ ಅಭ್ಯರ್ಥಿಗಳು ಲಾಭ ಪಡೆಯುವುದರಲ್ಲಿ ಸಂದೇಹವಿಲ್ಲ.
ಬಾಕ್ಸ್
ಖಾನಾಪುರ, ನಿಪ್ಪಾಣಿ ಭಾಗಗಳಲ್ಲಿ ತಾಲೂಕಾ ಪಂಚಾಯತಿ ಚುನಾವಣೆಯನ್ನು ಎದುರಿಸಲು ಬಿಜೆಪಿ ಹಾಗೂ ಶಿವಸೇನೆ ಸೇರಿಕೊಂಡು ಕಾಂಗ್ರೆಸ್ ಹಾಗೂ ಎಮ್‍ಇಎಸ್‍ನ್ನು ಬಗ್ಗು ಬಡೆಯುವ ಲೆಕ್ಕಾಚಾರದಲ್ಲಿದ್ದರೇ ರಾಷ್ಟ್ರೀಯ ಪಕ್ಷಗಳ ಜಿಲ್ಲಾ ನಾಯಕರುಗಳ ವೈ ಮನಸ್ಸು ಮತ್ತು ಪಂಗಡಗಳ ನಡುವಿನ ಲಾಭವನ್ನು ಪಕ್ಷೇತರ ಅಭ್ಯರ್ಥಿಗಳು ಪಡೆಯುವುದರಲ್ಲಿ ಎರಡು ಮಾತಿಲ್ಲ.
=>
ಜಿಪಂ ಹಾಗೂ ತಾಪಂ ಚುನಾವಣೆಯಲ್ಲಿ ಕಾಂಗ್ರೆಸ್, ಬಿಜೆಪಿ ಪಕ್ಷಗಳಿಗೆ ಸವಾಲಾಗಿ ಪರಿಣಮಿಸಿದರೇ ಜೆಡಿಎಸ್‍ಗೆ ಬುಹತೇಕ ಸ್ಥಾನ ಪಡೆಯುವುದು ಅನುಮಾನವಾಗಿ ಪರಿಣಮಿಸಿದೆ. ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆಯಲ್ಲಿ ಜಿಡಿಎಸ್ ಅಭ್ಯರ್ಥಿ ಕೈ ಕೊಟ್ಟ ಹಿನ್ನೆಲೆ ಹಾಗೂ ಅಶೋಕ ಪೂಜಾರಿ ಬಿಜೆಪಿಗೆ ಸೇರ್ಪಡೆಗೊಂಡ ನಂತರ ಹೇಳಿಕೊಳ್ಳುವಂತ ನಾಯಕರುಗಳು ಜೆಡಿಎಸ್ ಪಕ್ಷದಲ್ಲಿ ಇಲ್ಲ.”

loading...

LEAVE A REPLY

Please enter your comment!
Please enter your name here